
ಸಿಂದಗಿ:ಮಾ.7: ಜಗದ್ಗುರು ರೇಣುಕಾಚಾರ್ಯರು ಒಂದೇ ಜಾತಿಗೆ ಸೀಮಿತರಾಗದೆ, ಎಲ್ಲ ಸಮುದಾಯದವರನ್ನು ಒಗ್ಗೂಡಿಸಿದರು. ಜಾತಿ, ವರ್ಣ ಭೇದವಿಲ್ಲದೆ, ಭಕ್ತಿಮಾರ್ಗ ಸಾರಿದ ಶ್ರೇಯ ಅವರಿಗೆ ಸಲ್ಲುತ್ತದೆ ಅವರು ಮನುಕುಲದ ಉದ್ದಾರಗೈದವರಾಗಿದ್ದಾರೆ ಎಂದು ನಿವೃತ್ತ ಶಿಕ್ಷಕ ಗುರುಸಿದ್ದಯ್ಯ ಹಿರೇಮಠ ಹೇಳಿದರು.
ತಾಲೂಕಿನ ಗಬಸಾವಳಗಿಯಲ್ಲಿ ತಮ್ಮ ಸ್ವಂತ ಮನೆ ರೇಣುಕಕುಂಜದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪಿಸಿದ್ದು ಕಳೆದ 9 ವರ್ಷಗಳಿಂದ ರೇಣುಕಾಚಾರ್ಯರ ಜಯಂತಿ ಮಾಡಿಕೊಂಡು ಬರುತ್ತಿದ್ದಾರೆ. ಅವರು ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಮೂರ್ತಿಗೆ ಮಹಾಪೂಜೆ ಸಲ್ಲಿಸಿ ಮಾತನಾಡುತ್ತಾ ರೇಣುಕಾಚಾರ್ಯರು ಎಲ್ಲ ಸಮುದಾಯದವರನ್ನು ಸೇರಿಸಿಕೊಂಡು, ಮಠಗಳನ್ನು ಸ್ಥಾಪಿಸಿದರು. ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದರು. ಅವರು ಉತ್ತಮವಾದ ಧಾರ್ಮಿಕ ಹೆಜ್ಜೆಗುರುತು ಇರಿಸಿಹೋಗಿದ್ದಾರೆ. ಅವರ ಆದರ್ಶಗಳನ್ನು ನಾವು ಅನುಸರಿಸುತ್ತ ಮುಂದೆ ಸಾಗಬೇಕಿದೆ ಎಂದು ತಿಳಿಸಿದ ಅವರು ನಮ್ಮ ಕುಟುಂಬಸ್ಥರೆಲ್ಲಾ ಪ್ರತಿವರ್ಷ ಜಗದ್ಗುರು ರೇಣುಕಾಚಾರ್ಯರ ಪೂಜೆ, ಆರಾಧನೆ ಮಾಡುತ್ತಿದ್ದಾರೆ. ಗ್ರಾಮಸ್ಥರು ಕೂಡ ಇಲ್ಲಿಗೆ ಬಂದು ತಮ್ಮ ಭಕ್ತಿಭಾವ ಸಮರ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವನಗೌಡ ಬಿರಾದಾರ, ಬಸವರಾಜ ಕಲಬುರಗಿ, ಶರಣಪ್ಪ ಹೆಳವರ, ಈರಣ್ಣ ಹೂಗಾರ ಸೇರಿದಂತೆ ಕುಟುಂಬಸ್ಥರು ಇದ್ದರು.






















