Home ಜಿಲ್ಲೆ ಬೆಂಗಳೂರು ರೇಣುಕಾ ಯಲ್ಲಮ್ಮ ದೇವಿ ತಿಂಗಳ ಹುಣ್ಣಿಮೆ ಅಭಿಷೇಕ, ರಾತ್ರಿ ಅನ್ನದಾನ ಆಯೋಜನೆ

ರೇಣುಕಾ ಯಲ್ಲಮ್ಮ ದೇವಿ ತಿಂಗಳ ಹುಣ್ಣಿಮೆ ಅಭಿಷೇಕ, ರಾತ್ರಿ ಅನ್ನದಾನ ಆಯೋಜನೆ

ಬಂಗಾರಪೇಟೆ.ಏ೫: ಪಟ್ಟಣದ ಗೌತಮ್ ನಗರದಲ್ಲಿನ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಸೇವಾ ಟ್ರಸ್ಟ್ ಹಾಗೂ ಗೌತಮ್ ನಗರ ನಿವಾಸಿಗಳಾದ ವೆಂಕಟಮುನಿಯಮ್ಮ ಮತ್ತು ನಾರಾಯಣಪ್ಪ ಮತ್ತು ಬೆಮೆಲ್ ನಗರದ ಲೇಟ್ ವೆಂಕಟಮ್ಮ ಮತ್ತು ಲೇಟ್ ಮೂರ್ತಪ್ಪ ಹಾಗೂ ವಿನೋದ ಕುಮಾರಿ ಯಲ್ಲಪ್ಪ ರವರ ಮಕ್ಕಳು, ಕುಟುಂಬದವರಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ೧೫೯ ನೇ ತಿಂಗಳ ಹುಣ್ಣಿಮೆ ಪೂಜೆಯನ್ನು ಬೆಳಿಗ್ಗೆ ಅಭಿಷೇಕ, ವಿಶೇಷ ಅಲಂಕಾರ ಮಹಾಮಂಗಳಾರತಿ ಮತ್ತು ರಾತ್ರಿ ಅನ್ನದಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು


ಈ ದೇವಾಲಯದಲ್ಲಿ ನಮ್ಮ ಕುಟುಂಬಕ್ಕೆ ಎರಡನೇ ಬಾರಿಗೆ ಅನ್ನ ಸಂತರ್ಪಣೆ ಸೇವೆ ಮಾಡಲು ಅನುಕೂಲ ಮಾಡಿಕೊಟ್ಟು ಶಕ್ತಿ ನೀಡಿದ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಶಕ್ತಿ ಅಪಾರವಾದದು ಎಂದು ಪೂಜೆ ಸೇವಾಕರ್ತ ಯಲ್ಲಪ್ಪ ಅವರು ಹುಣ್ಣಿಮೆ ಕಾರ್ಯಕ್ರಮ ಕುರಿತು ಹೇಳಿದರು.


ಪಟ್ಟಣದ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ರವಿಕುಮಾರ್ ಮಾತನಾಡಿ, ರಾಜ್ಯ ಮಟ್ಟದಲ್ಲಿ ಜಿಲ್ಲೆ ಹಾಗೂ ತಾಲೂಕಿನ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ತಮ್ಮದೇ ಆದ ಸತತ ಕಠಿಣ ಪರಿಶ್ರಮ, ನಿಷ್ಠೆ, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸರ್ಕಾರದ ಉನ್ನತ ಹುದ್ದೆಗೆ ಆಯ್ಕೆಯಾಗುವುದು ಸುಲಭವಾದುದಲ್ಲ ಆ ನಿಟ್ಟಿನಲ್ಲಿ ವಕೀಲರು ಆದ ಚಿನ್ನಕೋಟೆ ಗ್ರಾಮದ ಶ್ರೀಮತಿ ಅಶ್ವಿನಿ ಎನ್ ರವರು ಸಿವಿಲ್ ನ್ಯಾಯಾದೀಶರಾಗಿ ಆಯ್ಕೆ ಯಾಗಿದ್ದಾರೆ.


ಹಾಗೆಯೇ ಕೇಂದ್ರ ಲೋಕ ಸೇವಾ ಆಯೋಗದ ಅಡಿಯಲ್ಲಿ ರಾಷ್ಟ ಮಟ್ಟದಲ್ಲಿ ಭಾರತದ ಅತ್ಯುನ್ನತ ಪರೀಕ್ಷೆಯಾದ ಭಾರತೀಯ ಆಡಳಿತ ಸೇವೆ ಪರೀಕ್ಷೆಯಲ್ಲಿ ತೌಸೀಫ್ ಉಲ್ಲಾ ಖಾನ್ ರವರು ಆಯ್ಕೆಯಾಗಿರುತ್ತಾರೆ.


ಹಾಗೂ ಉತ್ತಮ ಕರ್ತವ್ಯ ನಿರ್ವಹಣೆ, ದಕ್ಷತೆ ಸಮಾಜದಲ್ಲಿನ ಸಮಸ್ಯೆಗಳಾದ ಕಳ್ಳತನ, ಅತ್ಯಾಚಾರ, ಡ್ರಗ್ಸ್ ಸೇವನೆಗಳ ವಿರುದ್ಧ ಹೋರಾಡಿ ಸ್ವಸ್ಥ ಸಮಾಜ ವನ್ನು ಕಟ್ಟಲು, ಹಲವಾರು ಜನ ಜಾಗೃತಿಗಳ ಮೂಲಕ ಜನಸ್ನೇಹಿ ಆಡಳಿತ ನಿರ್ವಹಣೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿಸ್ತಿನ ಸಿಪಾಯಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಕಾಮಸಮುದ್ರ ಪೊಲೀಸ್ ಠಾಣೆಯ ಉಪ ನೀರಿಕ್ಷಕ ಕಿರಣ್ ಕುಮಾರ್ ಬಿ ವಿ, ಕೆ ಜಿ ಎಫ್ ನ ಅಂಡೆರ್ ಸನ್ ಪೇಟೆ ಪೊಲೀಸ್ ಠಾಣೆ ಯ ಉಪ ನೀರಿಕ್ಷಕ ಮಂಜುನಾಥ್ ಬಿ, ಬಂಗಾರಪೇಟೆ ರೈಲ್ವೆ ಇಲಾಖೆಯ ಪೊಲೀಸ್ ಮುಖ್ಯ ಪೇದೆ ಬಿ ವಿ ಅಶೋಕ್, ಮುನಿಸ್ವಾಮಿ ಎಂ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಐ ಎಸ್ ಡಿ ಬೆಂಗಳೂರು, ಅಕ್ಷತರಗೊಲ್ಲಹಳ್ಳಿ ಮಾನ್ಯ ಮುಖ್ಯಮಂತ್ರಿಗಳ ಪದಕಕ್ಕೆ ಬಾಜನರಾದ ಅಧಿಕಾರಿಗಳಿಗೆ ಹಾಗೂ ಗೋವಾ ದ ಪಣಜಿ ಯಲ್ಲಿ ನಡೆಯುವ ೨೧ ನೇ ರಾಷ್ಟೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷರಾಗಿ ಕರ್ನಾಟಕ ದಿಂದ ಆಯ್ಕೆ ಯಾಗಿರುವ ಕನ್ನಡ ಸಂಘದ ಅಧ್ಯಕ್ಷ ಡಾ ಎಂ ಸುಬ್ರಮಣಿ (ಪಲ್ಲವಿ ಮಣಿ ) ಅವರಿಗೆ, ಪತ್ರಿಕಾರಂಗದಲ್ಲಿ ಸಮಾಜಮುಖಿ ವರದಿಗಳನ್ನು ನೀಡಿ ಪ್ರಹ್ಲಾದ್ ರಾವ್ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಪ್ರಭ ದಿನಪತ್ರಿಕೆ ತಾಲೂಕು ವರದಿಗಾರ ಕೆ ರಮೇಶ್ ರವರಿಗೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೆ ಎಂ ವಿ ಪ್ರಸಾದ್ ರವರಿಗೆ ಹಾಗೂ ತೊಪ್ಪನಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಆದ ಲಕ್ಷ್ಮೀನಾರಾಯಣ ಬೋಡೆನಹಳ್ಳಿ ರವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಶ್ರೀ ರೇಣುಕಾ ಯಲ್ಲಮ್ಮದೇವಾಲಯ ಸೇವಾ ಟ್ರಸ್ಟಿನ ವತಿಯಿಂದ ನಡೆದ ೧೫೯ ನೇ ತಿಂಗಳ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಹುಣ್ಣಿಮೆ ಪೂಜೆ ಕಾರ್ಯಕ್ರಮದಲ್ಲಿ ಸನ್ಮಾನ ಹಮ್ಮಿಕೊಂಡಿರುವುದು ಟ್ರಸ್ಟಿನ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಎಲ್ಲಾ ಗಣ್ಯರು ಕಾರ್ಯಕ್ರಮವನ್ನು ಕುರಿತು ಪೊಲೀಸ್ ಇಲಾಖೆ ಕಾನೂನು ಸಲಹೆಗಳನ್ನು, ಮತ್ತು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು ಹಾಗೂ ತಮ್ಮ ಶ್ರಮ ಸತತವಾಗಿ ಪ್ರಯತ್ನದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಟ್ರಸ್ಟಿನ ಅಧ್ಯಕ್ಷ ಎಂ ನಾರಾಯಣಸ್ವಾಮಿ, ಬಿ ಜಿ ವಿವೇಕಾನಂದ,ಲಕ್ಷ್ಮಯ್ಯ ವಿ ಕವಿ, ವೆಂಕಟಾಚಲಪತಿ ಉಪೇಂದ್ರ, ನಾರಾಯಣಸ್ವಾಮಿ, ದಯಾಕರ್ ,ಅಪ್ಪಿ,ಚಲಪತಿ, ಅಶೋಕ್, ಏಜು, ಬಾಬು, ಮಂಜುನಾಥ್, ಲಿಖಿತ್ ಅಜ್ಜಿಪಲ್ಲಿ ನಾಗೇಶ್, ಸತ್ಯನಾರಾಯಣ, ವಕೀಲರು ಶಾಮ್ ಕುಮಾರ್, ಅಶೋಕ್, ಸದಾಶಿವ,ಇನ್ನೂ ಮುಂತಾದವರು ಹಾಜರಿದ್ದರು.