
ಜೇವರಗಿ,ಫೆ 21: ಛತ್ರಪತಿ ಶಿವಾಜಿ ಮಹಾರಾಜ್ ಧಾರ್ಮಿಕಸಹಿಷ್ಣುವಾಗಿದ್ದರು, ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದರು ಎಂದು .ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು. ಪಟ್ಟಣದ ಬಸವೇಶ್ವರ ಚೌಕ ಹತ್ತಿರ ತಾಲೂಕ ಅಂಬಾ ಭವಾನಿ ಗೋಂದಳಿ ಸಮಾಜದ ವತಿಯಿಂದ ಹಮ್ಮಿಕೊಂಡ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರುಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಾರು ವಾಗ್ಮರೆ ವಹಿಸಿದರು ನೇತೃತ್ವವನ್ನು ತಾಲೂಕಾಧ್ಯಕ್ಷ ಚಂದ್ರಕಾಂತ್ ಲಕ್ಷ್ಮಣ ವಾಗ್ಮರೆ ಮತ್ತು ಹಿರಿಯರಾದ ಭೂ ನ್ಯಾಯ ಸಮಿತಿ ಸದಸ್ಯರ ವಿಎಸ್‍ಎಸ್ ಮಾಜಿ ಅಧ್ಯಕ್ಷ ಮಾದೇವಪ್ಪ ಇಜೇರಿ ನೀರಲಕೊಡ ವಹಿಸಿದ್ದರು.ಪ್ರಗತಿಪರ ಚಿಂತಕ ಭಗವಂತರಾಯ್ ಬೆoಣ್ಣುರ ಮಾತನಾಡುತ್ತಾ 1659 ರಲ್ಲಿ ಅಫಜಲ್ ಖಾನನಸಂಹಾರ, ಮತ್ತು ಸೂರತ್ ಕೊಳ್ಳೆ ಹೊಡೆದದ್ದು ಅವರ ಶೌರ್ಯಕ್ಕೆ ಸಾಕ್ಷಿ. ಶಿವಾಜಿ ಮಹಾರಾಜರು ಧಾರ್ಮಿಕ ಸಹಿಷ್ಣುವಾಗಿದ್ದರು, ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದರು. ಅವರ ಆಡಳಿತದಲ್ಲಿ ಮರಾಠಿ ಮತ್ತು ಸಂಸ್ಕøತ ಭಾಷೆಗಳಿಗೆ ಆದ್ಯತೆ ನೀಡಲಾಗಿತ್ತು. ಕೊಂಕಣ ಕರಾವಳಿಯರಕ್ಷಣೆಗಾಗಿ ಬಲವಾದ ನೌಕಾಪಡೆಯನ್ನು ನಿರ್ಮಿಸಿದರು.ಛತ್ರಪತಿ ಶಿವಾಜಿ ಮಹಾರಾಜರ ಜೀವನವು ಧೈರ್ಯ, ಪ್ರಾಮಾಣಿಕತೆ ಮತ್ತು ರಾಷ್ಟ್ರಪ್ರೇಮದ ಅದ್ಭುತ
ಚರಿತ್ರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ರಮೇಶ್ ಬಾಬು ವಕೀಲ್ ಪರಶುರಾಮ್ ಶಂಕರ ಹೋರಾಟಗಾರ ಬಿಎಸ್ ಮಾಲಿ ಪಾಟೀಲ್ ವಿಷ್ಣುಸೇನಾ ತಾಲೂಕ ಅಧ್ಯಕ್ಷ ಬಸವರಾಜ್ ಬಾಗೇವಾಡಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕ ಅಧ್ಯಕ್ಷ ಮರಿಯಪ್ಪ ಬೇಗಾರ್ ಕಾಂಗ್ರೆಸ್ ಯುವ ಮುಖಂಡ ಭೀಮರಾಯ ಬಡಿಗೇರ್ ಖಾಧ್ಯಪುರ್ ಪುರಸಭೆ ಮಾಜಿ ಸದಸ್ಯ ಸಂತೋಷ್ ಪಾಟೀಲ್ ಮಲ್ಲಾಬಾದಿ ಮರಿಯಪ್ಪ ಸರಡಗಿ ಈಶ್ವರ್ ಹಿಪ್ಪರಗಿ ಬಣಗಾರ್ ನಾರಾಯಣ ಸೂರ್ಯವಂಶ ರವಿ ಮಂಜು ಶಿಂದೆ ರಾವಣ ಸಿಂಧ್ಯ ಶಿವು ಮಾನೆ ವಿಜಯಕುಮಾರ್ ವಸ್ತಾರೆ ಮಾದೇವ ಬಸ್ಯೆ ನಾರಾಯಣ ವಾಗ್ಮಾರೆ ಅಶೋಕ್ ಕಾಂಬಳೆ ಕಿಶೋರ್ ವಾಗ್ಮರೆ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಹಾಗೂ ವಿ ಎಸ್ ಎಸ್ ನಿರ್ದೇಶಕ ಸುಧೀಂದ್ರ ಇಜೇರಿ ನಿರಲಕೊಡ ರಮೇಶ್ ಗೊಂತ್ರ ಳೆ ಅನಿಲ್ ವಾಗ್ಮರ್ ಗಣಪತಿ ಉಗಾಡೆ ಸೇರಿದಂತೆ ಅನೇಕರಿದ್ದರು
























