
ಹಾನಗಲ್,ಮಾ.೩: ಈ ಭೂಮಿಗೆ ಮಹಾನ್ ಸಂತನಾಗಿ ಜನಿಸಿ ಸಮಾಜಕ್ಕೆ ದಾರಿದೀಪರಾದ ಸಿದ್ದಾರೂಢ ಸ್ವಾಮೀಜಿ ಇಡೀ ಮನುಕುಲ ಉದ್ಧರಿಸಿದ ಶ್ರೇಷ್ಠ ಸಂತ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ ೨೪ ನೇ ವೇದಾಂತ ಸಮ್ಮೇಳನ ಹಾಗೂ ಆರೂಢರ ಮಹಾರಥೋತ್ಸವದ ಅಂಗವಾಗಿ ನಡೆದ ಧರ್ಮಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದತ್ತಾತ್ರೇಯ ಪರಂಪರೆಯ ತತ್ವಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಬೋಧಿಸಿದ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿಯ ಆಶ್ರಮ ಸ್ಥಾಪಿಸಿ ಭಕ್ತ ಸಮೂಹಕ್ಕೆ ಆಶ್ರಯ ಒದಗಿಸಿದರು. ಧರ್ಮ ಭೇದವಿಲ್ಲದೇ ಎಲ್ಲರನ್ನೂ ಪ್ರೀತಿಸಬೇಕು. ಮಾನವ ಸೇವೆಯೇ ಮಾಧವ ಸೇವೆ, ದೀನ ದಲಿತರ ಸೇವೆಯೇ ನಿಜವಾದ ಭಕ್ತಿ ಎಂದು ಸಾರಿದರು ಎಂದು ಹೇಳಿದ ಸಾನಿಧ್ಯ ಸದ್ಗುರು ಶಂಕರರಾನAದ ಸ್ವಾಮೀಜಿ ವಹಿದ್ದರು.
ಕರೀಕಟ್ಟಿಯ ಗುರುನಾಥಶಾಸ್ತಿç ಪ್ರವಚನ ಹೇಳಿದರು. ಆಂಧ್ರಪ್ರದೇಶದ ಬಸವರಾಜಯ್ಯ ಸೇರಿದಂತೆ ಸದ್ಭಕ್ತ ಮಂಡಳಿ ಸದಸ್ಯರು ಇದ್ದರು.


























