
ಭುವನೇಶ್ವರ/ಕಟಕ್,ಮಾ.೭- ಆಂಧ್ರಪ್ರದೇಶದ ತಿರುಪತಿಯಿಂದ ನೇಪಾಳದ ಪಶುಪತಿಯವರೆಗೆ ವಿಸ್ತರಿಸಿರುವ ನಕ್ಸಲರ “ಕೆಂಪು ಕಾರಿಡಾರ್” ಮಾರ್ಚ್ ೩೧ ರೊಳಗೆ ಸಂಪೂರ್ಣ ನಾಶಪಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ
ನಕ್ಸಲರು ಕಟ್ಟಿಕೊಂಡಿರುವ ’ರೆಡ್ ಕಾರಿಡಾರ್’ ಅನ್ನು ಮಾರ್ಚ್ ೩೧ ರೊಳಗೆ ನಿರ್ಮೂಲನೆ ಮಾಡಿ ನಕ್ಸಲ್ ಮುಕ್ತ ಭಾರತ ಮಾಡಲಾಗುವುದು ಈ ನಿಟ್ಟಿನಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿರ್ಣಾಯಕವಾಗಿ ನಿಗ್ರಹಿಸಿದ್ದಕ್ಕಾಗಿ ಭದ್ರತಾ ಪಡೆಗಳನ್ನು ಶ್ಲಾಘಿಸಿದ್ಧಾರೆ
ಒಡಿಶಾದ ಕಟಕ್ ಜಿಲ್ಲೆಯ ಮುಂಡಲಿಯಲ್ಲಿ ನಡೆದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ -ಸಿಐಎಸ್‌ಎಫ್ ನ ೫೭ ನೇ ಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು”ನಕ್ಸಲ್ ಮುಕ್ತ ಭಾರತ ನರೇಂದ್ರ ಮೋದಿ ಸರ್ಕಾರದ ಸಂಕಲ್ಪವಾಗಿದೆ. ಮಾರ್ಚ್ ೩೧ ರ ವೇಳೆಗೆ ಎಡಪಂಥೀಯ ಉಗ್ರವಾದ ಸಂಪೂರ್ಣವಾಗಿ ನಿರ್ಮೂಲನೆಯಾಗಲಿದೆ ಎಂದಿದ್ಧಾರೆ
ಅರೆಸೈನಿಕ ಪಡೆಗಾಗಿ ೮೯೦ ಕೋಟಿ ರೂ. ಮೌಲ್ಯದ ಐದು ವಸತಿ ಯೋಜನೆಗಳನ್ನು ಉದ್ಘಾಟಿಸಿದರು. ಇದು ಭಾರತದ ಕೈಗಾರಿಕಾ ಬೆಳವಣಿಗೆಯಲ್ಲಿ “ಪ್ರಮುಖ ವೇಗವರ್ಧಕ” ಎಂದು ಅವರು ಶ್ಲಾಘಿಸಿದರು.
ತಿರುಪತಿಯಿಂದ ಪಶುಪತಿಯವರೆಗೆ ಕೆಂಪು ಕಾರಿಡಾರ್ ಕನಸು ಕಾಣುವವರನ್ನು ಸೋಲಿಸುವ ಮೂಲಕ, ಭದ್ರತಾ ಪಡೆಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುತ್ತವೆ” ಮಾವೋವಾದಿ ವಿರೋಧಿ ಪ್ರಯತ್ನಗಳಲ್ಲಿ ಸಿಐಎಸ್‌ಎಫ್ ಪಾತ್ರ ವಹಿಸುತ್ತಿದೆ”ಒಡಿಶಾ, ಛತ್ತೀಸ್‌ಗಢ ಅಥವಾ ತೆಲಂಗಾಣ ಆಗಿರಲಿ, ಎಲ್‌ಡಬ್ಲ್ಯೂಇ ವಿರುದ್ಧದ ನಮ್ಮ ಹೋರಾಟದಲ್ಲಿ ಸಿಐಎಸ್‌ಎಫ್ ಮಹತ್ವದ ಕೊಡುಗೆ ನೀಡಿದೆ” ಎಂದು ಹೇಳಿದ್ದಾರೆ
ಸಿಐಎಸ್‌ಎಫ್ ನೇರವಾಗಿ ಯುದ್ಧ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿಲ್ಲದಿದ್ದರೂ, ನಕ್ಸಲರ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ, ಸೈನ್ಯದ ಚಲನೆಗೆ ಮಾರ್ಗಗಳನ್ನು ಭದ್ರಪಡಿಸುವುದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸ್ಥಾಪನೆಗಳನ್ನು ರಕ್ಷಿಸುವುದು ಮತ್ತು ವಿಶ್ವಾಸವನ್ನು ಬೆಳೆಸಲು ರಾಜ್ಯ ಸರ್ಕಾರಗಳಿಗೆ ಸಂಪರ್ಕ ಮತ್ತು ಕಲ್ಯಾಣ ಉಪಕ್ರಮಗಳಲ್ಲಿ ಸಹಾಯ ಮಾಡಲಿದೆ ಎಂದಿದ್ದಾರೆ
ಅಸ್ಸಾಂ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಮೂರು ಸಿಐಎಸ್‌ಎಫ್ ವಸತಿ ಸಂಕೀರ್ಣಗಳಿಗೆ ವರ್ಚುವಲ್ ಮೂಲಕ ಇದೇ ವೇಳೆ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಿದರು

























