ಹುಮನಾಬಾದ ಸರಕಾರಿ ಕಾಲೇಜು ಬಿಬಿಎ ವಿದ್ಯಾರ್ಥಿನಿಯರಿಗೆ ರ್ಯಾಂಕ್

ಹುಮನಾಬಾದ್,ಫೆ.8:ಕಲ್ಬುರ್ಗಿ ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ಹುಮನಾಬಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿಬಿಎ ವಿಭಾಗದ ಇಬ್ಬರು ವಿದ್ಯಾರ್ಥಿನಿಯರು ಕಲ್ಬುರ್ಗಿಯ ವಿಶ್ವವಿದ್ಯಾಲಯದ ಮಟ್ಟದಲ್ಲಿ ರ್ಯಾಂಕ್ ಪಡೆದಿದ್ದಾರೆ. ಸೌಮ್ಯ 3ನೇ ರ್ಯಾಂಕ್ ಹಾಗೂ ಪ್ರಿಯಾಂಕ 5ನೇ ರ್ಯಾಂಕ್ ಪಡೆದಿದ್ದಾರೆ ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ವೀರಣ್ಣ ತುಪ್ಪದ ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಈ ವಿಚಾರ ನಮಗೆ ಬಹಳಷ್ಟು ಖುಷಿ ತಂದು ಕೊಟ್ಟಿದೆ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಲ್ಲ ವಿಷಯವಾರುಗಳ ಪ್ರಯೋಗಾಲಯ ಅಲ್ಲದೆ ಹೈಟೆಕ್ ಕ್ಲಾಸ್ ರೂಮ್ ಸಿಸಿ ಕ್ಯಾಮೆರಾ ಅಲ್ಲದೆ ಉತ್ತಮ ಸೌಲಭ್ಯಗಳು ಗ್ರಂಥಾಲಯ ಮುಂತಾದ ಸೌಲಭ್ಯಗಳಿಂದ ಕೂಡಿದೆ ಅಲ್ಲದೆ ಈ ಹಿಂದೆಯೂ ಸಹ ನಮ್ಮ ಕಾಲೇಜುಗಳಿಗೆ ರ್ಯಾಂಕ್ ಲಭಿಸಿದೆ, ಇದಕ್ಕೆ ಎಲ್ಲಾ ಸಹಾಯಕ ಪ್ರಾಧ್ಯಾಪಕರು ಅಲ್ಲದೆ ಅತಿಥಿ ಉಪನ್ಯಾಸಕರು ಎಲ್ಲರ ಸಹಕಾರ ಇದೆ ಹಾಗಾಗಿ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಬಿಬಿಎ ವಿಭಾಗದ ಮುಖ್ಯಸ್ಥರು ಡಾ ಮಲ್ಲಿಕಾರ್ಜುನ ಬಾಳಿ, ಸಹಾಯಕ ಪ್ರಾಧ್ಯಾಪಕರು ಅಮರ ಗಿರಿ,ಡಾ ಸಚಿನ ಕುಲ್ಕರ್ಣಿ ,ಸಂತೋಷ್ ಮಹಾಜನ್ ,ಡಾ ಬಳ್ಳಿರಾಮ್ ಹೂಡೆ ,ಹಸೀನಾ ಬೇಗಂ,ರಾಜಭಾಯಿ,ಸತೀಶ್ ಡೋಂಗ್ರೆ ,ಅಶ್ವಿನಿ,ಡಾ ರಾಜಶೇಖರ,ಪ್ರಕಾಶ್ ಸೇಡೋಲ್ಕರ ,ಡಾ ಸೈಯದ್ ಖಾಜಾ ಮುಂತಾದ ಸಿಬ್ಬಂದಿ ವರ್ಗದವರು ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು