ಮಳೆ ಹಾನಿ: ಬೆಳೆ ಪರಿಶೀಲನೆ


ನವಲಗುಂದ,ಸೆ.೨: ತಾಲೂಕಿನಾದ್ಯಂತ ಇತ್ತಿಚೆಗೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳನ್ನು ರಾಜ್ಯ ಕಂದಾಯ,ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.


ತಹಶೀಲ್ದಾರ ಸುಧೀರ ಸಾಹುಕಾರ ತಂಡದ ಅಧಿಕಾರಿಗಳನ್ನು ತಾಲೂಕಿನ ಖನ್ನೂರು,ಕಾಲವಾಡ, ಕರ್ಲವಾಡ, ಆರೆಕುರಟ್ಟಿ,ನವಲಗುಂದ,ತಡಹಾಳ ಗ್ರಾಮಗಳ ಜಮೀನುಗಳಿಗೆ ಭೇಟಿ ಕೊಟ್ಟು ಮಳೆಯಿಂದ ಹಾನಿಗೊಳಗಾದ ಉದ್ದು,ಹೆಸರು,ಮೆಣಸಿಣಕಾಯಿ ಸೇರಿದಂತೆ ಇತರೆ ಬೆಳಗಳನ್ನು ಪರಿಶೀಲಿಸಿದರು.


ನಂತರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದೆಂದು ತಂಡದ ಅಧಿಕಾರಿ ಆರ,ಮಂಜುಳಮ್ಮ ಸಹಾಯಕ ಕೃಷಿ ನಿರ್ದೇಶಕ ರವೀದ್ರಗೌಡ ಪಾಟೀಲ್, ತೋಟಗಾರಿಕೆ ಇಲಾಖೆಯ ಯೋಗೇಶ ಕಿಲಾರಿ, ಸಂಜೀವಕುಮಾರ ಗುಡಿಮನಿ, ಗ್ರಾಮ ಲೆಕ್ಕಾಧಿಕಾರಿಗಳಾದ ರಾಜು ನಾಯ್ಕ, ಉಮೇಶ ನವಲಗುಂದ ಮತ್ತಿತರರು ಉಪಸ್ಥಿತರಿದ್ದರು.