
ಬೇಕಾಗುವ ಸಾಮಗ್ರಿಗಳು
*ಚಿಕನ್ – ೧/೨ ಕೆ.ಜಿ, *ಬಾಸುಮತಿ ಅಕ್ಕಿ – ೧/೨ ಕೆ.ಜಿ
-೨ ಚಮಚ, *ಚಕ್ಕೆ -೭-೮
*ಬಿರಿಯಾನಿ ಎಲೆ ೩-೪
*ಹಸಿರು ಮೆಣಸಿನಕಾಯಿ ೫-೬
*ಪುದೀನ ಸೊಪ್ಪು – ಸ್ವಲ್ಪ, *ಹಸಿರು ಮೆಣಸಿನಕಾಯಿ -೫-೬
ಕೊತ್ತಂಬರಿ ಸೊಪ್ಪು -೫ ಚಮಚ,ಅನಾನಸ್ ಹೂ -೧೦-೧೫
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ ೨ ಚಮಚ
*ಚಕ್ಕೆ, ಲವಂಗ, ಏಲಕ್ಕಿ ಪುಡಿ ೨ ಚಮಚ
*ಲವಂಗ – ೫-೬, ಸೋಂಪು ೨ ಚಮಚ
*ಈರುಳ್ಳಿ – ೩, *ಟೊಮೆಟೋ ೩
*ಮೊಸರು ೧ ಕಪ್, ತುಪ್ಪ -೩ ಚಮಚ
,*ಎಣ್ಣೆ -೧೫೦ ೨. *ಉಪ್ಪು – ರುಚಿಗೆ ತಕ್ಕಷ್ಟು, *ನೀರು
ಮಾಡುವ ವಿಧಾನ:
ಕುಕ್ಕರ್‌ಗೆ ತುಪ್ಪ, ಸ್ವಲ್ಪ ಎಣ್ಣೆ ಹಾಕಿ. ಬಿಸಿಯಾದ ಮೇಲೆ ಚಕ್ಕೆ ಲವಂಗ, ಏಲಕ್ಕಿ, ಅನಾನಸ್ ಹೂ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಚೆನ್ನಾಗಿ ಪ್ರೈ ಮಾಡಿ. ಇದಕ್ಕೆ ಬಿರಿಯಾನಿ ಎಲೆ, ಟೊಮೆಟೋ, ಅರಿಶಿಣ ಉದ್ದಕ್ಕೆ ಕಟ್ ಮಾಡಿದ ಹಸಿರು ಮೆಣಸಿನ, ಪುದೀನ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಹುರಿಯಿರಿ. ನಂತರ ಚಿಕನ್, ಮೊಸರು ಹಾಕಿ ಕೈಯಾಡಿಸಿ. ನೆನೆಸಿದ ಅಕ್ಕಿ ಹಾಕಿ ಒಂದು ವಿಷಲ್ ಕೂಗಿಸಿದರೆ ಕ್ವಿಕ್ ಚಿಕನ್ ಬಿರಿಯಾನಿ ರೆಡಿ.