ಪ್ರಶ್ನೆ ಪತ್ರಿಕೆ ಕಾರ್ಯಾಗಾರ


ಲಕ್ಷೆ÷್ಮÃಶ್ವರ,ಜ.೧: ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಎಸ್‌ಎಂ ಜೆ ವಿಜಿ ಸ್ವತಂತ್ರ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ರಾಜ್ಯಶಾಸ್ತç ವಿಷಯದ ಪ್ರಶ್ನೆ ಪತ್ರಿಕೆ ಕಾರ್ಯಗಾರ ಜರುಗಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶಿಗ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗಿರೀಶ ಶತ್ರುಡ್ಡಿ ಅವರು ರಾಜ್ಯಶಾಸ್ತç ವಿಷಯದ ಪ್ರಶ್ನೆ ಪತ್ರಿಕೆ ಮಾದರಿ ಹಾಗೂ ಉತ್ತರ ಬರವಣಿಗೆ ಕೌಶಲ್ಯ ಮತ್ತು ಪರೀಕ್ಷಾ ಸಿದ್ಧತೆಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಯಾವ ರೀತಿ ಓದಿಕೊಂಡು ಹೇಗೆ ಬರೆಯಬೇಕು ಎಂಬ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.


ಈ ಸಂದರ್ಭದಲ್ಲಿ ಪ್ರಾಚಾರ್ಯ ಸರಸ್ವತಿ ಹುಲ್ಲನ್ನವರ ವಿದ್ಯಾರ್ಥಿಗಳು ಪರೀಕ್ಷಾ ಸಮಯವಾಗಿರುವುದರಿಂದ ಕಾಲಹರಣ ಮಾಡದೆ ಅಭ್ಯಾಸದತ್ತ ಹೆಚ್ಚು ಗಮನಹರಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಗಿರೀಶ್ ಅವರನ್ನು ಪ್ರಾಚಾರ್ಯರು ಸೇರಿದಂತೆ ಬೋಧಕ ವರ್ಗದವರು ಸನ್ಮಾನಿಸಿದರು.