Home ಜಿಲ್ಲೆ ಕಲಬುರಗಿ ಜನಪರ, ಬಡವರ ಪರ ಹಾಗೂ ರೈತರ ಪರ: ಡಾ. ಅಜಯ್ ಧರ್ಮಸಿಂಗ್

ಜನಪರ, ಬಡವರ ಪರ ಹಾಗೂ ರೈತರ ಪರ: ಡಾ. ಅಜಯ್ ಧರ್ಮಸಿಂಗ್

ಕಲಬುರಗಿ:ಮಾ.7:ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯದ ಬಜೆಟ್ 4 ಲಕ್ಷ 48 ಸಾವಿರ ಕೋಟಿ ರು ಗಾತ್ರದ್ದಾಗಿದ್ದು ಇದೊಂದು ಐತಿಹಾಸಿಕ ಬಜೆಟ್, ರೈತರಪರ, ಜನಪರ, ಬಡವರಪರವಾಗಿರುವ ಬಜೆಟ್ ಇದಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರಾಗಿರುವ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಬಜೆಟ್‍ನಲ್ಲಿ ಮತ್ತೆ ತಾವು ಅಧ್ಯಕ್ಷರಾಗಿರುವ ಕೆಕೆಆರ್‍ಡಿಬಿಗೆ 5 ಸಾವಿರ ಕೋಟಿ ರು ಹಣ ಮೀಸಲಿಡಲಾಗಿದೆ. ಕಳೆದ 30 ತಿಂಗಳಲ್ಲಿ 18 ಸಾವಿರ ಕೋಟಿ ರು ಹಣ ಕೊಟ್ಟಂತಾಗಿದೆ. ಕಲ್ಯಾಣ ನಾಡು ರಾಜ್ಯ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡಲೆಂದು ಕಲ್ಯಾಣ ನಾಡಲ್ಲೇ ದತ್ತಾಂಶ ವಿಶ್ಲೇಷಣೆ ಕೇಂದ್ರ ಸ್ಥಾಪನೆಗೂ ಬಜೆಟ್‍ನಲ್ಲಿ ಅನುಮೋದನೆ ದೊರಕಿದೆ. ಕಲ್ಯಣ ನಾಡು ಸೇರಿದಂತೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಈ ಬಜೆಟ್ ತನ್ನದೇ ಕೊಡುಗೆ ನೀಡಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗೆ 1. 80 ಲಕ್ಷ ಕೋಟಿ ರು ಹಣ ಮೀಸಲಿಡೋದರ ಜೊತೆಗೇ ರಾಜ್ಯದ ಸಮಗ್ರ, ಸರ್ವತೋಮುಖ ಬೆಳವಣಿಗೆಗೂ ಬಜೆಟ್ ಹಣ ಇಟ್ಟಿದೆ. ಒಟ್ಟಾರೆ ಪ್ರಗತಿಗೆ, ಶಾಸಕರ ಮೂಲಕ ಅಭಿವೃದ್ಧಿಗೆ ಒತ್ತು ನೀಡಲೆಂದು ಬಜೆಟ್‍ನಲ್ಲಿ 4, 500 ಕೋಟಿ ರು ಹಣ ಮೀಸಲಿಡಲಾಗಿದೆ. ಇದೆಲ್ಲವೂ ಪ್ರಗತಿಯ ಸಂಕೇತ ಎಂದು ಡಾ. ಅಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿಯ ಬಜೆಟ್‍ನಲ್ಲಿ 16 ವ,?? ವಯೋಮಿತಿಯೊಳಗಿರುವ ಶಾಲೆ, ಕಾಲೇಜು ಮಕ್ಕಳಿಗೆ ಮೋಬೈಲ್ ಫೆÇೀನ್ ಬಳಕೆ ನಿಷೇಧಿಸಿರುವ ಸಂಗತಿ ಸ್ವಾಗತಿಸಿದ ಡಾ. ಅಜಯ್ ಸಿಂಗ್, ನಾವು ಮಕ್ಕಳ ಓದಬೇಕು ಎಂದು ಪ್ರೇರಣೆ ನೀಡುವವರು. ಹೀಗಾಗಿ ಹೈಸ್ಕೂಲ್ ಶಿಕ್ಷಣ ಭದ್ರ ಬುನಾದಯಾಗಿರೋದರಿಂದ ಮಕ್ಕಳು ಸರಿಯಾಗಿ ಓದಿನಲ್ಲಿ ತೊಡಲೆಂದೇ ಈ ನಿರ್ಣಯ ಸರ್ಕಾರ ಕೈಗೊಂಡಿದೆ . ಸಾಮಾಜಿಕ ಜಾಲ ತಾಣಗಳಲ್ಲಿ ಳಲ್ಲಿಯೇ ಹೆಚ್ಚಿನ ಸಮಯ ಕಳೆಯೋದಕ್ಕಿಂತ ಮಕ್ಕಳು ಅಭ್ಯಾಸದಲ್ಲಿ ಹೆಚ್ಚು ತಲ್ಲೀನರಾಗಲೆಂದು ಸರ್ಕಾರದ ಈ ಸದಾಶಯವಾಗಿದೆ ಎಂದಿದ್ದಾರೆ.

2026-27 ನೇ ಸಾಲಿನ ದಾಖಲೆಯ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ರೂ 5000 ಕೋಟಿ ಅನುದಾನ ಹಂಚಿಕೆಮಾಡುವುದರ ಮುಖಾಂತರ ಪ್ರಸ್ತುತ ಸರ್ಕಾರದ ಅವಧಿಯಲ್ಲಿ18000 ಕೋಟಿ ಮೊತ್ತದ ಬೃಹತ್ ಅನುದಾನವನ್ನು ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಒದಗಿಸಿ ಇತಿಹಾಸ ನಿರ್ಮಿಸಲಾಗಿದೆ.

ಪ್ರಸ್ತುತ ಬಜೆಟ್ ನಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯು, ವಿಶೇಷವಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ನೀತಿ ,ವಿಶೇಷ ಕೈಗಾರಿಕಾ ನೀತಿ (ಒSಒಇ, ಜವಳಿ, Iಖಿಃಖಿ ಮತ್ತು ಇಂಧನ ಸೇರಿದಂತೆ ) ಹಾಗೂ ಬುದ್ದ ಬಸವ ಬಹಮನಿ ಮತ್ತು ವಿಜಯನಗರ ಬಾದಾಮಿ ಪ್ರವಾಸ ವಲಯಗಳನ್ನು ಒಳಗೊಂಡ ವಿಶೇಷ ಪ್ರವಾಸೋದ್ಯಮ ನೀತಿ ರೂಪಿಸುವ ಮುಖಾಂತರ ಶಿಕ್ಷಣ ಆರೋಗ್ಯ ಮತ್ತು ಪೌಷ್ಠಿಕತೆ ಕೌಶಲ್ಯಾಭಿವೃದ್ಧಿ ಕೃಷಿ, ನೀರಾವರಿ ಪ್ರವಾಸೋಧ್ಯಮ Iಖಿಃಖಿ ಕೈಗಾರಿಕೆ ಹಾಗೂ ಇಂಧನ ಕ್ಷೇತ್ರಗಳಲ್ಲಿ ಯೋಜಿತ ಹೂಡಿಕೆ ಮತ್ತು ಸಾರ್ವಜನಿಕ ವೆಚ್ಚವನ್ನು ಮರು ಸಂಯೋಜಿಸಿ ಮುಂದಿನ 5 ವರ್ಷದ ಅವಧಿಯೊಳಗಾಗಿ 2031 ರ ಒಳಗೆ ಕಲ್ಯಾಣ ಕರ್ನಚಿಟಕ ಪ್ರದೇಶದ ಉಆP ಪಾಲನ್ನು ಶೇಕಡಾ 10.5% ರಿಂದ ಶೇ 12 % ರಿಂದ 14% ಕ್ಕೆ ಹೆಚ್ಚಿಸುವುದರೊಂದಿಗೆ ಅಭಿವೃಧಿ ಸಾಧೀಸುವ ಗುರಿ ಹೊಂದಲಾಗಿರೋದು ಸ್ವಾಗತಾಹ್ರ ಬೆಳವಣಿಗೆ.

ಸದರಿ ಉದ್ದೇಶಗಳನ್ನು ಸಾಧಿಸಲು ಮತ್ತು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪ್ರಸ್ತುತ ಬಜೆಟ್ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಪ್ರತ್ಯೇಕ ಯೋಜನೆ ನೀತಿ ಮತ್ತು ದತ್ತಾಂಶ ವಿಶ್ಲೇಷಣಾ ವಿಭಾಗ ಸ್ಥಾಪಿಸಲು ಘೋಷಣೆ ಮಾಡಲಾಗಿದ್ದು ಸದರಿ ವಿಭಾಗದ ಮುಖಾಂತರ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಅವಶ್ಯಕ ಇರುವ ಯೋಜನೆಗಳ ದೀರ್ಘಾವಧಿ ದೃಷ್ಠಿಕೋನ ವುಳ್ಳ ಯೋಜನೆಯನ್ನು ಮತ್ತು ನಿರಂತರ ಮೌಲ್ಯಮಾಪನ ಮುಖಾಂತರ ಈ ಭಾಗದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಸರ್ಕಾರವು ನೀಡಿದ ಬಹುದೊಡ್ಡ ಕೊಡುಗೆ ಇದಾಗಿದೆ.

ಪ್ರಸ್ತುತ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ವಿಶೇಷವಾಗಿ ಆರೋಗ್ಯ ಶಿಕ್ಷಣ ಮತ್ತು ಅಪೌ?ಷ್ಠಿಕತೆ ವಿಷಯಗಳಲ್ಲಿ ಸಮಗ್ರ ಅಭಿವೃದ್ಧಿಗಾಗಿ ಮಂಡಳಿಯ ವಿವಿಧ ವಿವೇಚನಾ ನಿಧಿಗಳಲ್ಲಿ ಮತ್ತು ಮ್ಯಾಕ್ರೋ ಅನುದಾನದಲ್ಲಿ ಶೇ 40 % ಪ್ರತಿಶತ ಅನುದಾನವನ್ನು ಸದರಿ ಯೋಜನೆಗಳಿಗೆ ಬಳಕೆ ಮಾಡಲು ಘೋಷಿಸುವ ಮುಖಾಂತರ ಮಂಡಳಿಯ ಅನುದಾನವನ್ನು ವಿಶೇಷವಾಗಿ ಆರೋಗ್ಯ ಶಿಕ್ಷಣ ಮತ್ತು ಅಪೌಷ್ಠಿಕತೆ ವಿಷಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ಧವಾಗಿರುವ ಕುರಿತು ಸ್ಪಷ್ಟ ಸಂದೇಶ ನೀಡುವ ಘೋಷಣೆ ಆಗಿದೆ.

ಈ ಬಾರಿ ಅತ್ಯಂತ ವಿಶೇಷವಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಪೈಲಟ್ ಮಾದರಿಯಲ್ಲಿ ಕೌಶಲ್ಯ ಮತ್ತು ಶಿಕ್ಷಣ ಆದಾರಿತ ನಾಲೆಡ್ಜ್ ಮತ್ತು ಕೌಶಲ್ಯ ಸಿಟಿಯನ್ನು ಸುಮಾರು 50 ಎಕರೆ ಜಮೀನಿನಲ್ಲಿ ಅಂದಾಜು ರೂ 75 ಕೋಟಿ ವೆಚ್ಚದಲ್ಲಿ ಮಂಡಳಿಯ ರಾಜ್ಯ ವಲಯ ಅನುದಾನದಿಂದ ಅಭಿವೃದ್ಧಿ ಪಡಿಸುವ ಬಗ್ಗೆ ಘೋಷಿಸಲಾಗಿದ್ದು ಒಂದೇ ಸ್ಥಳದಲ್ಲಿ ವಿವಿಧ ವಿಷಯಗಳ ಕುರಿತು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸುವ ವಿಶೇಷ ಯೋಜನೆ ಇದಾಗಿದ್ದು ಇದರಿಂದ ಸರ್ಕಾರವು ಸಾರ್ವಜನಿಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ತನ್ನ ನಿರ್ಧಾರಕ್ಕೆ ಬದ್ದರಾಗಿರುವ ದಿಟ್ಟ ಸಂಕಲ್ಪದ ಸಾಕ್ಷಿ ಇದಾಗಿದೆ ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಧರ್ಮಸಿಂಗ್ ಅಭಿಪ್ರಾಯಪಟ್ಟಿದ್ದಾರೆ.