
ಕಲಬುರಗಿ, ಮಾ.೭: ಇರಾನ್ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲೂ ಬೀರಿದೆ. ದೇಶದಲ್ಲಿ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದ್ದು ಈಗ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಕಲಬುರಗಿಯಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಲಿಂಡರ್ ದರ ಏರಿಕೆ ಬಗ್ಗೆ ಬಿಜೆಪಿಯವರ ಬಳಿ ಕೇಳಿ ಎಂದು ಗುಡುಗಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ದಾಂಪತ್ಯಕ್ಕೆ ಕಾಲಿಟ್ಟ ನಟ ವಿಜಯ ಹಾಗೂ ನಟಿ ರಶ್ಮಿಕಾ ಭೇಟಿಯಾಗಲು ಪ್ರಧಾನಿ ಅವರಿಗೆ ಸಮಯವಿದೆ. ನಾಳೆ ಭಾರತ ಮತ್ತು ನ್ಯೂಜಿಲೆಂಡ್ ಫೈನಲ್ ಪಂದ್ಯ ವೀಕ್ಷಣೆಗೆ ಕೂಡ ಅವರು ಹೋಗಬಹುದು.
ಕೇಂದ್ರ ಸರ್ಕಾರದವರು ವಿದೇಶಾಂಗ ನೀತಿಯನ್ನು ಅಡ್ಡ ಇಟ್ಟಿದ್ದಾರೆ. ದೆಹಲಿಗೆ ಬಂದು ಯುಎಸ್‌ಎ ವಿದೇಶಾಂಗ ಉಪ ಕಾರ್ಯದರ್ಶಿ ಹೇಳುತ್ತಾರೆ. ಭಾರತವನ್ನು ಚೀನಾದಷ್ಟು ಬೆಳೆಯುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ ಎಂದು ಹೇಳಿದರು.
ಇದನ್ನು ಕೇಂದ್ರ ಸರ್ಕಾರದ ಒಬ್ಬರಾದರೂ ಮಂತ್ರಿ ವಿರೋಧಿಸಿದರೆ? ಯಾಕೆ ಭಾರತದ ಸಚಿವರು ವಿರೋಧ ಮಾಡುತ್ತಿಲ್ಲ? ನೇರವಾಗಿ ನರೇಂದ್ರ ಮೋದಿ ಹಾಗೂ ಭಾರತದ ಮರ್ಯಾದೆ ಹಾಳಾಗುತ್ತಿದೆ. ಇವಾಗ ಆರ್ ಎಸ್ ಎಸ್ ನವರು ಎಲ್ಲಿದ್ದಾರೆ? ಎಪ್ ಸ್ಟೀನ್ ಫೈಲ್ಸ್ ನಲ್ಲಿ ಏನಾದರೂ ವಿಡಿಯೊ ಇದೆಯಾ? ನರೇಂದ್ರ ಮೋದಿ ರಾಜಕೀಯವನ್ನು ನಾಶ ಮಾಡುತ್ತೇವೆ ಅಂತ ಹೇಳುತ್ತಾರೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

























