
ಅಥಣಿ :ಮಾ.31: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಗುರಿಯಾಗಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವ ಸಂಕಲ್ಪದೊಂದಿಗೆ, ಎಲ್ಲ ವರ್ಗದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ಲಕ್ಷ್ಮಣ ಸವದಿ ಹೇಳಿದರು
ಅಥಣಿ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಮೂಲಭೂತ ಸೌಕರ್ಯಗಳ ಅಭಿವೃದ್ದಿ ಯೋಜನೆಯಡಿ 6.85 ಕೋಟಿ ರೂ.ಗಳ ಕಾಮಗಾರಿಗಳಾದ ಅಬ್ಬಿಹಾಳ ರಸ್ತೆ ಸುಧಾರಣೆಗೆ 3.60 ಕೋಟಿ, ದರೂರ ಖವಟಕೊಪ್ಪ ರಸ್ತೆ ಕಾಮಗಾರಿಗೆ 3 ಕೋಟಿ ಮತ್ತು ದರೂರ ಗ್ರಾಮದ ಬನ್ನಿವಾರಿ ತೋಟದ ವಸತಿಗೆ ನಿರಂತರ ವಿದ್ಯುತ್ ಯೋಜನೆಗೆ 25 ಲಕ್ಷ ರೂ.ಗಳ ಕಾಮಗಾರಿಗಳಿಗೆ ಸೋಮವಾರ ಶಾಸಕ ಲಕ್ಷ್ಮಣ ಸವದಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು ಅವರು ಮುಂದಿನ 25 ವರ್ಷಗಳ ಅವಧಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಅಥಣಿ ತಾಲೂಕಿನ ಸವದಿ, ಯಲ್ಲಡಗಿ, ಸಂಕೋನಟ್ಟಿ, ಪಾರ್ಥನಹಳ್ಳಿ ಹತ್ತಿರ ಮತ್ತು ತೆಲಸಂಗ ಗ್ರಾಮಗಳಲ್ಲಿ 110 ಕಿಲೋ ವ್ಯಾಟ್ ಸ್ಟೇಶನ್ ಗಳು ಮಂಜೂರಾಗಿದ್ದು, ಈಗಾಗಲೇ ಯಲ್ಲಡಗಿ ಗ್ರಾಮದಲ್ಲಿ 110 ಕಿಲೋ ವ್ಯಾಟ್ ಸ್ಟೇಶನ್ ಕಾಮಗಾರಿ ಪ್ರಾರಂಭವಾಗಿದ್ದು, ಈ ಎಲ್ಲ ಸ್ಟೇಶನ್‍ಗಳ ಪೂರ್ಣಗೊಳ್ಳುವುದರಿಂದ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಲಿದೆ.
ಅಂದಾಜು 3 ಲಕ್ಷ 50 ಸಾವಿರ ಎಕರೆಗೆ ಮತ್ತು 25 ಲಕ್ಷ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಹಿಪ್ಪರಗಿ ಆಣೆಕಟ್ಟಿನ ಗೇಟ್ ಕಿತ್ತು ಹೋದ ಪರಿಣಾಮ ಸುಮಾರು 3 ಟಿ.ಎಂ.ಸಿ ನೀರು ಹರಿದು ಹೋಗಿತ್ತು ಹೀಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗುತ್ತದೆ ಎಂದು ಎಲ್ಲರೂ ಆತಂಕಕ್ಕೀಡಾಗಿದ್ದರು ಆದರೆ ಸದ್ಯದ ಸ್ಥಿತಿ ಗಮನಿಸಿದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ, ಯಾರೂ ಅತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಗುರುರಾಜ ಸಂಪಣ್ಣವರ, ಎಸ್.ಎ. ಪಾರ್ಥನಹಳ್ಳಿ, ಎಮ್.ಎಸ್.ಅವಟಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಗದುಮ್, ಗುತ್ತಿಗೆದಾರರಾದ ರಾಜು ಆಲಬಾಳ, ಅರ್ಜುನ ನಾಯಿಕ, ಅಮೀರ ಖತೀಬ್, ಶಿವರುದ್ರ ಘೂಳಪ್ಪನವರ, ಮುಖಂಡರಾದ ವಿನಾಯಕ ಬಾಗಡಿ. ಸುರೇಶ ಮಾಯಣ್ಣವರ. ಶೇಖರ ಕನಕರೆಡ್ಡಿ. ಮಲ್ಲಿಕಾರ್ಜುನ ದಳವಾಯಿ, ಶಿವು ಆಸಂಗಿ, ರಾಜು ಮರಡಿ, ಶಿವಾನಂದ ನಾಯಿಕ, ಶಿವಪುತ್ರ ನಾಯಿಕ, ಮಹಾಂತೇಶ ಐಗಳಿಮಠ, ಪುಟ್ಟು ಶಿಂಧೆ, ಸುರೇಶ ಮಾಯಣ್ಣವರ, ವಿನಾಯಕ ಬಾಗಡಿ, ನಾಥಗೌಡ ಪಾಟೀಲ,ಅಣ್ಣಪ್ಪ ಚೌಗಲಾ, ಜಗದೀಶ ದಳವಾಯಿ,ಬಾಳಪ್ಪ ಗುಮತಾಜ, ಮಲ್ಲಿಕಾರ್ಜುನ ದಳವಾಯಿ, ಸೇರಿದಂತೆಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಅನೇಕರು ಉಪಸ್ಥಿತರಿದ್ದರು.
#
ಅಥಣಿಯು ಶೈಕ್ಷಣಿಕ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಆಗಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‍ನಲ್ಲಿ ಅಥಣಿ ಕೃಷಿ ಕಾಲೇಜಿಗೆ 508 ಕೋಟಿ ರೂ. ಮಂಜೂರಾತಿ ನೀಡಿದ್ದಾರೆ. ಕೊಟ್ಟಲಗಿ ಅಮ್ಮಾಜೇಶ್ವರಿ ಯೋಜನೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಆಗಮಿಸಿದಾಗ ಕೃಷಿ ಕಾಲೇಜು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಅಥಣಿ ಪಟ್ಟಣವನ್ನು ತಂತಿ ಮುಕ್ತ ಮಾಡಲಾಗುವುದು. ಯುಜಿಡಿ ಮಾಡಲಿಕ್ಕೆ 440 ಕೋಟಿ ರೂಗಳ ಪ್ರಸ್ತಾವನೆ ಕೊಟ್ಟಿದ್ದೇನೆ. ರೈತರಿಗೆ ಬೇಡಿದಾಗ ನೀರು ಬೇಡಿದಾಗ ಕರೆಂಟ್ ಕೊಟ್ಟರೆ ಆಧುನಿಕ ಕೃಷಿ ಮಾಡಲು ಸಾಧ್ಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಅನುಕೂಲ ಆಗುವ ನಿಟ್ಟಿನಲ್ಲಿ ತೋಟದ ವಸತಿಗಳಿಗೆ 24 ಗಂಟೆ ವಿದ್ಯುತ್ ನೀಡುವ ನಿರಂತರ ಜೊತಿ ಯೋಜನೆಗೆ ಚಾಲನೆ ನೀಡಲಾಗಿದೆ
ಲಕ್ಷ್ಮಣ ಸವದಿ. ಶಾಸಕರು



























