Home ಜಿಲ್ಲೆ ಕಲಬುರಗಿ ಕಲಬುರಗಿ ಗ್ರಾಮೀಣ ಪ್ರದೇಶದಲ್ಲಿ ಜನಗಣತಿ 2027ಕ್ಕೆ ಸಿದ್ಧತೆ: ಸಿಬ್ಬಂದಿಗೆ ತರಬೇತಿ ಆರಂಭ

ಕಲಬುರಗಿ ಗ್ರಾಮೀಣ ಪ್ರದೇಶದಲ್ಲಿ ಜನಗಣತಿ 2027ಕ್ಕೆ ಸಿದ್ಧತೆ: ಸಿಬ್ಬಂದಿಗೆ ತರಬೇತಿ ಆರಂಭ

ಕಲಬುರಗಿ:ಏ.6: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಜನಗಣತಿ 2027 ಕಾರ್ಯಕ್ರಮದ ಅಂಗವಾಗಿ ಕಲಬುರಗಿ ಗ್ರಾಮೀಣ ಪ್ರದೇಶದಲ್ಲಿ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಭಾರತ ಜನಗಣತಿ ಕಾಯ್ದೆ 1948ರ ಸೆಕ್ಷನ್ 8(1) ಅಡಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಗಣತಿದಾರರು ಹಾಗೂ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

ಒಟ್ಟು 417 ಗಣತಿದಾರರು ಹಾಗೂ 70 ಮೇಲ್ವಿಚಾರಕರು ಈ ಮಹತ್ವದ ಕಾರ್ಯಕ್ಕೆ ನಿಯೋಜಿಸಲ್ಪಟ್ಟಿದ್ದಾರೆ. ಇವರಿಗೆ ದಿನಾಂಕ 05.04.2026 ರಿಂದ 07.04.2026ರವರೆಗೆ ಮೂರು ದಿನಗಳ ಕಾಲ ಸರ್ಕಾರಿ ಪಿಯು, ಎಂ.ಪಿ.ಎಸ್.ಹಚ್ ಕಾಲೇಜು, ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜನಗಣತಿ ಕಾರ್ಯದ ಭಾಗವಾಗಿ, 01.04.2026 ರಿಂದ 15.04.2026ರವರೆಗೆ ಸ್ವಯಂ ಗಣತಿ (Seಟಜಿ ಇಟಿumeಡಿಚಿಣioಟಿ) ನಡೆಸಲು ಸೂಚಿಸಲಾಗಿದೆ. ನಂತರ, 16.04.2026 ರಿಂದ 15.05.2026ರವರೆಗೆ ಮನೆ ಮನೆಗೆ ಭೇಟಿ ನೀಡಿ ಸುಮಾರು 33 ಪ್ರಶ್ನೆಗಳ ಆಧಾರದ ಮೇಲೆ ಗಣತಿ ಕಾರ್ಯ ನಡೆಯಲಿದೆ. ಈ ಕಾರ್ಯವನ್ನು ಕೇಂದ್ರ ಸರ್ಕಾರದ ನಿರ್ದೇಶನದಂತೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತದೆ.

ಸ್ವಯಂ ಗಣತಿ ಪೂರ್ಣಗೊಳಿಸಿದ ನಾಗರಿಕರು, ಮನೆಗೆ ಬರುವ ಗಣತಿದಾರರಿಗೆ ತಮ್ಮ ಸ್ವಯಂ ಗಣತಿ ಐಡಿ ಸಂಖ್ಯೆಯನ್ನು ನೀಡಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಜನಗಣತಿ ಚಾರ್ಜ್ ಅಧಿಕಾರಿ (ಗ್ರಾಮೀಣ) ಹಾಗೂ ತಹಸೀಲ್ದಾರರಾದ ಕೆ. ಆನಂದ್ ಶೀಲ, “ಜನಗಣತಿ ಕಾರ್ಯವು ದೇಶದ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾಗಿದ್ದು, ಸಾರ್ವಜನಿಕರು ಹಾಗೂ ಎಲ್ಲಾ ಸಿಬ್ಬಂದಿ ಸಹಕಾರ ನೀಡುವುದು ಅಗತ್ಯ,” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ನಾಗರಿಕರು ಜನಗಣತಿ ಕಾರ್ಯಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಜೊತೆಗೆ, ಈ ಮಹತ್ವದ ಮಾಹಿತಿಯನ್ನು ಎಲ್ಲಾ ದಿನಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರ ಮಾಡುವಂತೆ ಮಾಧ್ಯಮ ಪ್ರತಿನಿಧಿಗಳಿಗೂ ಕೋರಲಾಗಿದೆ.