ಐದು ನಗರ ಪಾಲಿಕೆಗಳ ಬಜೆಟ್ ಮಂಡನೆಗೆ ಸಿದ್ಧತೆ

ಬೆಂಗಳೂರು.ಮಾ೪: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದೂ ನಗರ ಪಾಲಿಕೆಗಳ ೨೦೨೬-೨೭ನೇ ಸಾಲಿನ ಬಜೆಟ್ ಸಿದ್ಧತಾ ಕಾರ್ಯಗಳು ಚುರುಕುಗೊಂಡಿವೆ. ಜಿಬಿಎ ಆರ್ಥಿಕ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಿರಿಯ ಅಧಿಕಾರಿಗಳು ಅಯವ್ಯಯ ರೂಪುರೇಷೆ ಅಂತಿಮಗೊಳಿಸುತ್ತಿದ್ದಾರೆ.

ಈ ಮಧ್ಯೆ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಸಂಸ್ಥೆ ಮುಂದಿನ ಆರ್ಥಿಕ ವರ್ಷಕ್ಕೆ ೨೭೯೪ ಕೋಟಿ ಅನುದಾನವನ್ನು ಮೀಸಲಿಡುವಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಪತ್ರದ ಮೂಲಕ ಮನವಿ ಮಾಡಿದೆ.

ಘನತ್ಯಾಜ್ಯ ಘಟಕದ ಸಿಇಒ ಕರೀಗೌಡ ಅವರು ಐದೂ ನಗರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು,ಈಗಾಗಲೇ ಚಾಲ್ತಿಯಲ್ಲಿರುವ ಹಾಗೂ ಟೆಂಡರ್ ಹಂತದಲ್ಲಿರುವ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿಗಳಿಗೆ ಹಣ ಮೀಸಲಿಡಲು, ಮುಂಬರುವ ವರ್ಷದಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ವ್ಯತ್ಯಯವಾಗದಂತೆ ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡಲು ಮಾನವಿ ಮಾಡಿದರೆ.
೫ ನಗರಪಾಲಿಕೆಯ ಅಸ್ತಿ ತೆರಿಗೆ ವೇಳೆ ವಸೂಲಿ ಮಾಡುವ ಬಳಕೆದಾರರ ಶುಲ್ಕ (Useಡಿ ಈees), ಹಾಗೂ ಘನತ್ಯಾಜ್ಯ ಉಪಕರಣಗಳ ಸೆಸ್ (ಅಇSS) ಆಧಾರದಲ್ಲಿ ಅನುದಾನ ಹಂಚಿಕೆ ಮಾಡಲು ಮನವಿ ಮಾಡಿದ್ದಾರೆ.

ಹಿಂದಿನ ವರ್ಷಗಳ ಹಂಚಿಕೆ-
೨೦೨೪ರ ಬಜೆಟ್: ೧೦೮೫ ಕೋಟಿ
೨೦೨೫ರ ಬಜೆಟ್: ೧೫೦೦ ಕೋಟಿ
೨೦೨೬-೨೭ರ ಬೇಡಿಕೆ: ೨೭೯೪ ಕೋಟಿ
ಈ ಬಾರಿ ಬೇಡಿಕೆಯ ಮೊತ್ತ ದ್ವಿಗುಣಕ್ಕೂ ಹೆಚ್ಚು ಏರಿಕೆಯಾಗಿದೆ.

ನಗರ ಪಾಲಿಕೆವಾರು ಬೇಡಿಕೆ (ಕೋಟಿಗಳಲ್ಲಿ)..

ಕೇಂದ್ರ ನಗರ ಪಾಲಿಕೆ ೪೮೦.೩೭.ಕೋಟಿ.
ಪೂರ್ವ ನಗರ ಪಾಲಿಕೆ ೪೯೬.೦೭.ಕೋಟಿ.
ಉತ್ತರ ನಗರ ಪಾಲಿಕೆ ೫೫೮.೮೦.ಕೋಟಿ.
ದಕ್ಷಿಣ ನಗರ ಪಾಲಿಕೆ ೫೪೬.೧೮.ಕೋಟಿ.
ಪಶ್ಚಿಮ ನಗರ ಪಾಲಿಕೆ ೭೧೫.೯೧.ಕೋಟಿ.
ಒಟ್ಟು: ೨೭೯೪ ಕೋಟಿ.

ಇನ್ನೂ ಪತ್ರದಲ್ಲಿ ಆಟೋ ಟಿಪ್ಪರ್‌ಗಳು, ಕಾಂಪ್ಯಾಕ್ಟರ್‌ಗಳು, ಭೂಭರ್ತಿ (ಲ್ಯಾಂಡ್‌ಫಿಲ್), ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾರ್ಯಾಚರಣಾ ವೆಚ್ಚಗಳ ವಿವರಗಳನ್ನು ನಮೂದಿಸಲಾಗಿದೆ.
ಒಂದೆಡೆ ಘನತ್ಯಾಜ್ಯ ನಿರ್ವಹಣೆಗೆ ಭಾರಿ ಅನುದಾನ ಮೀಸಲಿಡುವ ಒತ್ತಡವಿದ್ದರೆ, ಮತ್ತೊಂದೆಡೆ ಐದೂ ನಗರ ಪಾಲಿಕೆಗಳು ವಾರ್ಡ್ ಮಟ್ಟದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯನ್ನು ಎದುರಿಸುತ್ತಿವೆ. ಸರ್ಕಾರದ ಅನುದಾನಕ್ಕೆ ಅವಲಂಬಿತವಾಗಿರುವ ಈ ಪಾಲಿಕೆಗಳು ಸಮತೋಲನ ಸಾಧಿಸುವ ಸವಾಲಿನಲ್ಲಿವೆ.

ಒಟ್ಟಾರೆ, ೨೦೨೬-೨೭ರ ಬಜೆಟ್‌ನಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಮುಖ ಪ್ರಾಮುಖ್ಯತೆ ಪಡೆದಿದ್ದರೂ, ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೆ ಹಣ ಒದಗಿಸುವುದು ನಗರ ಪಾಲಿಕೆಗಳಿಗೆ ದೊಡ್ಡ ಪ್ರಶ್ನೆಯಾಗಿದೆ.