
ಚನ್ನಮ್ಮನ ಕಿತ್ತೂರು,ಮಾ.೨೮: ಹಸಿರುಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಮ್ ಅವರ ೧೧೯ನೇ ಜನ್ಮ ದಿನಾಚರಣೆ ಏಪ್ರೀಲ್ ೫ರಂದು ಮತ್ತು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರ ೧೩೫ನೇ ಜಯಂತಿ ಏಪ್ರೀಲ್ ೧೪ ರಂದು ಸಮಾಜ ಕಲ್ಯಾಣ ಹಾಗೂ ತಾಲೂಕಾಡಳಿv, ತಾಪಂ, ಪಪಂಗಳಿAದÀ ಅರ್ಥಪೂರ್ಣವಾಗಿ ವಿಜೃಂಭಣೆಯಿAದ ಅದ್ದೂರಿಯಾಗಿ ಆಚರಿಸೋಣ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರೀಯವಾಗಿ ಭಾಗವಹಿಸಬೇಕೆಂದು ತಹಶೀಲ್ದಾರ ಕಲ್ಲನಗೌಡ ಪಾಟೀಲ ತಿಳಿಸಿದರು.
ತಾಲೂಕಾಡಳಿತ ಸೌಧದ ಕಛೇರಿ ನೂತನ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕಾಡಳಿತ, ತಾಪಂ, ಪಪಂ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ. ಬಿಸಿಲಿನ ತಾಪಮಾನ ಹೆಚ್ಚಿಗೆ ಇರುವುದರಿಂದ ಎಲ್ಲರೂ ಮುಂಜಾನೆ ೮ ಗಂಟೆಗೆ ಸೇರಿ ೧೦ ಗಂಟೆಯೊಳಗಾಗಿ ಪ್ರತಿವರ್ಷದಂತೆ ಚನ್ನಮ್ಮನ ವರ್ತುಳದಿಂದ ಗುರುವಾರ ಪೇಟೆ ಅರಳೀಕಟ್ಟೆ ಮಾರ್ಗವಾಗಿ ಪಪಂವರೆಗೆ ಮೆರವಣಿಗೆ ಅಂತ್ಯಗೊಳಿಸಬೇಕೆAದು ಸೂಚಿಸಿದರು. ಸರ್ಕಾರ ನಿಯಮಾವಳಿ ಪ್ರಕಾರ ಜಯಂತಿ ಆಚರಿಸಲಾಗುವುದು. ಆಯಾ ಇಲಾಖಾ ಅಧಿಕಾರಿಗಳಿಗೆ ಒಂದೊAದು ಜವಾಬ್ದಾರಿ ನೀಡಿ ತಾಲೂಕಿನ ಎಲ್ಲ ಶಾಲೆಗಳಲ್ಲಿ ಮುಂಜಾನೆ ೮ ಗಂಟೆಗೆ ಜಯಂತಿ ಆಚರಿಸಲು ಸೂಚಿಸಿದರು. ಕುಂಭ ಮೇಳ, ಕರಡಿ ಮಜಲು, ಇನ್ನೂ ಅನೇಕ ಕಲಾ ತಂಡಗಳನ್ನೊಳಗೊAಡ ಮೆರೆವಣಿಗೆ ಹಮ್ಮಿಕೊಂಡು ಉಭಯ ಮಹಾನಾಯಕರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುವುದೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಾಸ್ತಾವಿಕವಾಗಿ ಮಾತನಾಡಿದ ನಿರ್ದೇಶಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಅಂಬೇಡ್ಕರ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನು ಸಡಗರ ಸಂಭ್ರಮದಿAದ ಆಚರಿಸೋಣ ಕಳೆದ ಎಸ್‌ಎಸ್‌ಎಲ್ಸಿ-ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು. ಸಾರ್ವಜನಿಕರು ಹಾಗೂ ಮುಖಂಡರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶೋಭೆ ತರವುದು ಅತ್ಯಂತ ಅಗತ್ಯ. ಅಂಬೇಡ್ಕರ ಹಾಗೂ ಬಾಬಾ ಜಗಜೀವನ್ ರಾಮ್ ಅವರ ಜೀವನ, ಸಾಧನೆ, ಸಮಾಜ ಸೇವೆ ಮತ್ತು ಸಮಾನತೆ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಈ ಜಯಂತಿಯ ಉದ್ದೇಶ ಅದಕ್ಕಾಗಿ ಅರ್ಥಪೂರ್ಣವಾಗಿ ಆಚರಿಸೋಣನೆಂದರು. ಕಾರ್ಯಕ್ರಮ ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ನಿರ್ಧರಿಸಲಾಯಿತು.
ಈ ಸಭೆಗೆ ಜಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ, ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗ್ರೀಂದ್ರ ಸ್ವಾಮಿಜೀ, ನಿಚ್ಚಣಕಿ ಶ್ರೀ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಜಿ, ಉಪನ್ಯಾಸಕರನ್ನಾಗಿ ಪ್ರೋ. ಮಹೇಶ ಚನ್ನಂಗಿ, ಇವರುಗಳನ್ನು ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಯಿತು. ಸಾರ್ವಜನಿಕರಿಂದ ವಿವಿಧ ಅಹವಾಲುಗಳು ಕೇಳಿಬಂದವು.
ಈ ವೇಳೆ ಮುಖ್ಯ ಅತಿಥಿಗಳಾಗಿ ಪ್ರಭಾರ ವಿಶೇಷ ತಹಶೀಲ್ದಾರ ಪ್ರಕಾಶ ಕೋರೆ, ತಾಪಂ ಇಓ ನಿಂಗಪ್ಪ ಮಸಳಿ, ಸಿಪಿಐ ಶಿವಾನಂದ ಗುಡಗನಟ್ಟಿ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಎಂಕೆ ಹುಬ್ಬಳ್ಳಿ ಪಪಂ ಅಧಿಕಾರಿ, ಮುಖಂಡರುಗಳಾದ ರಾಜು ಜಾಗಂಟಿ, ಫಕ್ಕೀರ ಜಾಗಂಟಿ, ಸುರೇಶ ಜಾಗಂಟಿ, ಶಿವನಂದ ಚನ್ನನ್ನವರ, ಭೀಮಪ್ಪ ದುರಗಣ್ಣವರ, ಬಸವರಾಜ ಕೆಳಗಡೆ, ಮಡಿವಾಳಪ್ಪ ವಕ್ಕುಂದ, ಮಂಜುನಾಥ ಮಣ್ಣವಡ್ಡರ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ಆರೋಗ್ಯ, ಪಶು ಇಲಾಖೆ, ಪಪಂ ಎಂಕೆಹುಬ್ಬಳ್ಳಿ, ಸಮಾಜದ ಮುಖಂಡರು, ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು, ಸ.ಮಾ.ಇ. ಸಿಬ್ಬಂದಿ ಮಂಜುನಾಥ ಮಕರವಳ್ಳಿ, ಸುರೇಶ ಬೈಲಪ್ಪನವರ, ಮಂಜುನಾಥ ತೊಟಗಿ, ಎಂ ಎಸ್ ಪಾಟೀಲ, ಎಸ್ ಶೀಗಿಹಳ್ಳಿ, ವಿ.ಎಲ್. ನಾಡಗೌಡರ, ತಹಶೀಲ್ದಾರ ಸಿಬ್ಬಂದಿ, ಇನ್ನಿತರರಿದ್ದರು.



























