
ಕಲಬುರಗಿ,ಮಾ.5: ಎಸ್‍ಸಿಎಸ್‍ಪಿ- ಟಿಎಸ್‍ಪಿ ಯೋಜನೆಯ ಹಣ ಬೇರೆ ಯೋಜನೆಗಳಿಗೆ ಬಳಸುವದಿಲ್ಲ ಎಂದು ರಾಜ್ಯ ಸರಕಾರ ಬಜೆಟ್ ಪೂರ್ವ ಘೋಷಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ಮುಖಂಡ,ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಇಂದು ಪತ್ರಿಕಾಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ದುರ್ಬಳಕೆಯಾಗಿರುವ 39 ಸಾವಿರ ಕೋಟಿ ರೂಗಳನ್ನು ದಲಿತರಿಗೆ ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಕಾಂಗ್ರೆಸ್ ಸರಕಾರ ಸತತ 3 ವರ್ಷಗಳಿಂದ ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಎಸ್‍ಸಿಎಸ್‍ಪಿ- ಟಿಎಸ್‍ಪಿ ಯೋಜನೆಯ 39 ಸಾವಿರ ಕೋಟಿ ರೂ ದುರುಪಯೋಗ ಮಾಡಿಕೊಂಡಿದೆ.ಇದೀಗ ಮತ್ತೊಂದು ಬಜೆಟ್ ಮಂಡನೆ ಹೆಸರಿನಲ್ಲಿ ಮತ್ತೆ 15 ಸಾವಿರ ಕೋಟಿ ರೂ ಗಳನ್ನು ಮುಳುಗಿಸಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ ಎಂದು ದೂರಿದರು.
ಎಲ್ಲ ಎಸ್‍ಸಿ ,ಎಸ್‍ಟಿ ನಿಗಮಗಳಿಗೆ ತಲಾ 1 ಸಾವಿರ ಕೋಟಿ ರೂ ಅನುದಾನ ಘೋಷಿಸಬೇಕು.ದುರ್ಬಳಕೆಗೆ ದಾರಿ ಮಾಡಿಕೊಡುತ್ತಿರುವ 7ಸಿ ಕಾಯ್ದೆ ರದ್ದು ಮಾಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಶಶೀಲ್ ನಮೋಶಿ, ಬಸವರಾಜ ಮತ್ತಿಮೂಡ,ಅಶೋಕ ಬಗಲಿ,ಶರಣಪ್ಪ ತಳವಾರ,ಶಿವರಾಜ ಪಾಟೀಲ ರದ್ದೇವಾಡಗಿ, ಅವ್ವಣ್ಣ ಮ್ಯಾಕೇರಿ ಅವರು ಸೇರಿದಂತೆ ಹಲವರಿದ್ದರು.
ದಿಕ್ಕು ತಪ್ಪಿದ ದಿಶಾಸಭೆ
ಕಲಬುರಗಿ ಕ್ಷೇತ್ರದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಧ್ಯಕ್ಷತೆಯಲ್ಲಿ ದಿಶಾ ಸಭೆ ಇತ್ತೀಚಿಗೆ ನಡೆಯಿತು.ಆನ್‍ಲೈನ್ ಮೂಲಕ ನಡೆದ ಸಭೆಯಲ್ಲಿ ತಾಂತ್ರಿಕ ಲೋಪದೋಷ ಕಾಣಿಸಿತು.ಆಯ್ದ ಕೆಲವೇ ಇಲಾಖೆಯ ಅಧಿಕಾರಿಗಳ ಪಾಲ್ಗೊಂಡರು. ಸಭೆಯ ಅಜೆಂಡಾ ಸಹ ಅಪೂರ್ಣವಾಗಿತ್ತು.
ಡಾ. ಉಮೇಶ ಜಾಧವ. ಮಾಜಿ ಸಂಸದರು, ಕಲಬುರಗಿ
























