ವೃದ್ದೆಯನ್ನು ಹುಡುಕಿಕೊಟ್ಟ ಪೊಲೀಸರು

ಶಿವಮೊಗ್ಗ, ಮಾ.೧-ಮಾರಿಕಾಂಬಾ ಜಾತ್ರೆಯಲ್ಲಿ ಕಣ್ಮರೆಯಾಗಿದ್ದ ೮೦ ವರ್ಷದ ವೃದ್ದೆಯೋರ್ವರನ್ನು, ಪೊಲೀಸರು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ ಘಟನೆ ನಡೆದಿದೆ.

ವೃದ್ದೆಯು ತನ್ನ ಸಂಬಂಧಿಕರೊಂದಿಗೆ ಮಾರಿಕಾಂಬಾ ಜಾತ್ರೆಗೆ ಆಗಮಿಸಿದ್ದರು. ಈ ವೇಳೆ ಅವರು ನಾಪತ್ತೆಯಾಗಿದ್ದರು. ತಕ್ಷಣವೇ ಸಂಬಂಧಿಕರು ೧೧೨ ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ೧೧೨ ಪೊಲೀಸ್ ವಾಹನದ ಸಿಬ್ಬಂದಿಗಳಾದ ಗಿರೀಶ್ ಹಾಗೂ ಚರಣ್ ಅವರು ವೃದ್ದೆಯನ್ನು ಹುಡುಕಿ ಪೊಲೀಸ್ ವಾಹನದಲ್ಲಿಯೇ ವೃದ್ದೆಯ ಮನೆಗೆ ಕರೆದೊಯ್ದು ಕುಟುಂಬದವರಿಗೆ ಒಪ್ಪಿಸಿದ್ದಾರೆ.