Home ಜಿಲ್ಲೆ ರಾಮ ನವಮಿ ಹಿನ್ನಲೆ ಪೊಲೀಸ್‍ರಿಂದ ಶಾಂತಿ ಸಭೆ

ರಾಮ ನವಮಿ ಹಿನ್ನಲೆ ಪೊಲೀಸ್‍ರಿಂದ ಶಾಂತಿ ಸಭೆ

ಕಮಲನಗರÀ:ಮಾ.25: ಪಟ್ಟಣದಲ್ಲಿ ಗುರುವಾರ ನಡೆಯಲಿರುವ ರಾಮ ನವಮಿ ಜಯಂತಿ ಮತ್ತು ಶೋಭಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನಕೆಗಳು ನಡೆಯದಂತೆ ಪೆÇಲಿಸ್ ಇಲಾಖೆ ಕ್ರಮ ಕೈಗೋಲ್ಳಲಿದ್ದು ಶಾಮತಿ ಸೌಹಾರ್ದತೆಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಪುರೆ ಹೇಳಿದರು.

ಪಟ್ಟಣದ ಪೆÇಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿ, ರಾಮ ನವಮಿ ಜಯಂತಿಗೆ ಪೆÇಲಿಸ್ ಭದ್ರತೆ ನೀಡಬೇಕಾದ ಹಿನ್ನಲೆಯಲ್ಲಿ ಸಮಿತಿಯವರು ಹೆಚ್ಚಿನ ಸಂಕ್ಯೆಯಲ್ಲಿ ಸ್ವಯಂ ಸೇವಕರು ನೇಮಿಸಕೊಂಡು ಅವರಿಗೆ ಸಮವಸ್ತ್ರ ನೀಡಬೇಕು.ವಾಹನಗಳಿಗೆ ಸುಗಮ ಸಂಚಾರಕ್ಕೆ ಮೇಲಾಧಿಕಾರಿಗಳು ಇಲ್ಲಿನ ಪೆÇಲೀಸರಿಗೆ ಮಾರ್ಗದರ್ಶನ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿ ಅಂಗಡಿಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಮುಂದಾಗಬೇಕು ಎಂದು ತಿಳಿಸಿದರು.

ಪಿಎಸ್‍ಐ ಆಶಾ ರಾಠೋಡ್ ಮಾತನಾಡಿ, ರಾಮ ಉತ್ಸವ ಈಗಾಗಲೇ ದೇಶ-ವಿದೇಶಗಳ ಮಟ್ಟದಲ್ಲಿ ಖ್ಯಾತಿ ಪಡೆದ ಹಿನ್ನಲೆಯಲ್ಲಿ ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾದಾಗ ಉದ್ದೇಶಪೂರ್ವಕವಾಗಿ ಅಹಿತಕರ ಘಟನೆಗಳು ಸಂಭವಿಸುವ ಕಾರಣದಿಂದ ಆಯೋಜಕರು ಇಂತಹವರ ಬಗ್ಗೆ ತಕ್ಷಣವೇ ಮಾಹಿತಿ ನೀಡಬೇಕು. ಒಂದು ವೇಳೆ ಇಂತಹ ಪುಂಡ ಪೆÇೀಕರಿಗಳು ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ಪೆÇ್ರ. ಎಸ್.ಎನ್.ಶಿವಣಕರ್, ಶಿವಾನಂದ ವಡ್ಡೆ, ಶ್ರೀರಂಗ ಪರಿಹಾರ, ಪ್ರವೀಣ ಕದಂ, ಬಜರಂಗ ದಳ ಅಧ್ಯಕ್ಷ ಶಿವಶಂಕರ ಸೂರ್ಯಕಾಂತ ಸಂಗಮೆ, ಕಾರ್ತಿಕ ಜಾಧವ, ರಾಹುಲ(ಬಹು) ಸೂರ್ಯವಂಶಿ, ಮನೋಜ ಪಾಟೀಲ ಸೇರಿದಂತೆ ಗ್ರಾಮದ ವಿವಿಧ ಸಮುದಾಯ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.