
ಬೆಂಗಳೂರು,ಏ೧೨:ಭಾರತದ ಅಂತರರಾಷ್ಟ್ರೀಯ ನೃತ್ಯೋತ್ಸವ ಅಂಗವಾಗಿ ಆಯೋಜಿಸಲಾದ ಪ್ರವರ್ತಕ ಬಹು-ನಗರ ನೃತ್ಯೋತ್ಸವವು ದೇಶದ ವಿವಿಧ ಭಾಗಗಳ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಕ್ಕೂಡಿಸಿ ಗಮನ ಸೆಳೆದಿತು.
ನಗರದ ಬಸವ ಸಮಿತಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಥಾ ನೃತ್ಯ ಅಂಗನ ಸಂಸ್ಥೆಯ ಸಹಯೋಗದಲ್ಲಿ ಭವ್ಯವಾಗಿ ನಡೆಸಲಾಯಿತು.
ಉತ್ಸವದಲ್ಲಿ ಭರತದ ಶಾಸ್ತ್ರೀಯ ನೃತ್ಯ, ಕಥಾನಕ ಪ್ರದರ್ಶನಗಳು ಸೇರಿದಂತೆ ಹಲವು ವೈವಿಧ್ಯಮಯ ನೃತ್ಯ ಪ್ರಕಾರಗಳು ಪ್ರದರ್ಶಿಸಲ್ಪಟ್ಟು ಪ್ರೇಕ್ಷಕರ ಮನಸೆಳೆದವು. ವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರು ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿ ಸಂಸ್ಕೃತಿ ವೈವಿಧ್ಯತೆಯ ಸೊಬಗು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಥಾ ನೃತ್ಯ ಅಂಗನ ಸಂಸ್ಥಾಪಕರಾದ ಶ್ರೀಮತಿ ಗಾರ್ಗಿ ಗೋಸ್ವಾಮಿ, ಚೆನ್ನೈನ ಸೂರ್ಯ ಗಾಯತ್ರಿ ಕಲಾ ಕೇಂದ್ರದ ಸಂಸ್ಥಾಪಕರಾದ ಶ್ರೀಮತಿ ಶ್ರೀಜಾ ಕಲಾಮಂಡಲಂ, ಕೇರಳದ ಅಮೃತವರ್ಷಿಣಿ ನೃತ್ಯ ವಿದ್ಯಾಲಯದ ಸಂಸ್ಥಾಪಕರಾದ ಶ್ರೀಮತಿ ಕಲಾಮಂಡಲಂ ಸಾವಿತ್ರಿ ಹಾಗೂ IIಆಈ ರಾಷ್ಟ್ರೀಯ ವೇದಿಕೆಯ ಪ್ರತಿನಿಧಿಯಾದ ಶ್ರೀ ಕಲಾಮಂಡಲಂ ಸತ್ಯ ಉಪಸ್ಥಿತರಿದ್ದರು.
ಉತ್ಸವವು ಭಾರತೀಯ ನೃತ್ಯ ಪರಂಪರೆಯ ವೈಭವವನ್ನು ಎತ್ತಿಹಿಡಿಯುವುದರ ಜೊತೆಗೆ, ಯುವ ಕಲಾವಿದರಿಗೆ ವೇದಿಕೆ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.























