
ಬೆಂಗಳೂರು.ಅ೨೦: ಕಾಳೇನಾ ಅಗ್ರಹಾರ ಮತ್ತು ನಾಗವಾರವನ್ನು ಸಂಪರ್ಕಿಸುವ ಬಹುನಿರೀಕ್ಷಿತ ೨೧ ಕಿಮೀ ಉದ್ದದ ಮೆಟ್ರೋ ಪಿಂಕ್ ಲೈನ್ ಮೇ ೨೦೨೬ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.
ಈಗಾಗಲೇ ನಡೆಯುತ್ತಿರುವ ನಿರ್ಮಾಣ ಕಾರ್ಯ ಮುಂದಿನ ವರ್ಷ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಗರದ ಇತರ ಮೆಟ್ರೋ ಮಾರ್ಗಗಳ ಅಭಿವೃದ್ಧಿಯಲ್ಲಿ ಹಲವಾರು ವಿಳಂಬ ಕಂಡುಬಂದಿದ್ದು, ಇದು ಬೆಂಗಳೂರಿನ ಪ್ರಯಾಣಿಕರನ್ನು ನಿರಾಶೆಗೊಳಿಸಿತ್ತು. ಬೆಂಗಳೂರು ಮಿರರ್ ವರದಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಸಿಟಿಗೆ ಹಳದಿ ಮಾರ್ಗ ಎರಡು ವರ್ಷಗಳಿಗೂ ಹೆಚ್ಚು ವಿಳಂಬವಾಗಿತ್ತು. ಹಸಿರು ಮಾರ್ಗದ ನಿರ್ಮಾಣಕ್ಕೆ ಐದು ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ ಪಿಂಕ್ ಲೈನ್ ಕಾರ್ಯಗಳು ವೇಗವಾಗಿ ಮುಂದುವರಿಯುತ್ತಿವೆ.
ಪಿಂಕ್ ಲೈನ್ ಕಲೇನಾ ಅಗ್ರಹಾರ ಮತ್ತು ತಾವರೆಕೆರೆ (ಸ್ವಾಗತ್ ಕ್ರಾಸ್ ರೋಡ್) ನಡುವಿನ ೨.೫ ಕಿಮೀ ಎತ್ತರದ ಮಾರ್ಗ ಮತ್ತು ೧೩.೭೬ ಕಿಮೀ ಭೂಗತ ಮಾರ್ಗವನ್ನು ಒಳಗೊಂಡಿದೆ. ಇದು ನಗರದ ಅತ್ಯಂತ ಸಂಕೀರ್ಣ ಮೆಟ್ರೋ ಯೋಜನೆಗಳಲ್ಲಿ ಒಂದಾಗಿದೆ.
































