
ಕಲಬುರಗಿ : ಏ.12:ಗುಲಬರ್ಗಾ ವಿಶ್ವವಿದ್ಯಾಲಯದ ಗಣಕಯಂತ್ರ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ವಿದ್ಯಾ ಡಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.
ಬೀದರ್ ಜಿಲ್ಲೆ ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗಣಕಯಂತ್ರ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಹಂಗರಗಿ ಅವರ ಮಾರ್ಗದರ್ಶನದಲ್ಲಿ
“ಸ್ಟಡೀಸ್ ಆನ್ ಇನ್ಸೈಡ್ ಡಿಫೆಕ್ಟ್ ಡಿಟೆಕ್ಷನ್ ಅಂಡ್ ಕ್ಲಾಸಿಫಿಕೇಶನ್ ಆಫ್ ಅಗ್ರಿಕಲ್ಚರಲ್ ಪ್ರಾಡಕ್ಟ್ಸ್ ಬೇಸ್ಡ್ ಆನ್ ಎಂಆರ್‍ಐ ಇಮೇಜ್”
ವಿಷಯದಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು.




















