
ಭಂಕೂರ,ಫೆ.23-ಇಲ್ಲಿನ ಸ್ಪರ್ಧಾ ಸ್ಪೂರ್ತಿ ಶಾಲೆಯಲ್ಲಿ ಗಿರಿಸಿರಿ ಸಾಂಸ್ಕøತಿಕ ಕಲಾಸಂಸ್ಥೆ ಶಹಾಬಾದ ತಾಲೂಕ ಘಟಕ ವತಿಯಿಂದ ಹಮ್ಮಿಕೊಂಡ ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಹಿರಿಯ ಮುಖಂಡ ಶಂಕರ ಜಾನ ಸಸಿಗೆ ನಿರುಣಿಸುವ ಮೂಲಕ ಉದ್ಘಾಟಿಸಿದರು.
ಹನುಮಂತ ಕುಂಬಾರ ಅವರು ಉಪನ್ಯಾಸ ನೀಡುತ್ತ, 12ನೇ ಶತಮಾನದ ಶಿವಶರಣರ ಅರಿವೇ ಗುರು ಎಂಬ ಸದಾಚಾರದ ಮಾರ್ಗವನ್ನು 16ನೇ ಶತಮಾನದಲ್ಲಿ ಬೆಳಗಿಸಿದವರು ಸರ್ವಜ್ಞ. ಅವರ ವಚನಗಳಲ್ಲಿ ವ್ಯಕ್ತಿತ್ವ ವಿಕಸನದ ಬೇರುಗಳಿವೆ ಎಂದು ಹೇಳಿದರು.
ಪ್ರಭುದ್ದ ಚಿಂತನ ವೇದಿಕೆಯ ಅಧ್ಯಕ್ಷ ಭರತ ಧನ್ನ, ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ ಮುಖ್ಯ ಅತಿಥಿಗಳಾಗಿ ವೇದಿಕೆ ಮೇಲಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ಧರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶೈಕ್ಷಣಿಕ ಹಾಗೂ ಸಾಮಾಜಿಕ ಅರಿವಿನ ಕಾರ್ಯಕ್ರಮ ಬಹಳ ಮುಖ್ಯ ಎಂದು ಹೇಳಿದರು. ಮರಲಿಂಗ ಯಾದಗಿರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೋನಿಕಾ ಕಾರ್ಯಕ್ರಮ ನಿರೂಪಿಸಿದರು. ಯೇಸುನಾಥ್ ಸ್ವಾಗತಿಸಿದರು. ಭಾಗ್ಯ ವಂದನರ್ಪಣೆ ಮಾಡಿದರು.
























