Facebook Instagram Mail Twitter Youtube
  • ಸುದ್ಧಿ
    • ಅಂತರಾಷ್ಟ್ರೀಯ
    • ರಾಜ್ಯ
    • ರಾಷ್ಟ್ರೀಯ
  • ಜಿಲ್ಲೆ
    • ಕಲಬುರಗಿ
    • ಚಿತ್ರದುರ್ಗ
    • ತುಮಕೂರು
    • ದಾವಣಗೆರೆ
    • ಬಳ್ಳಾರಿ
    • ಬೀದರ್
    • ಬೆಂಗಳೂರು
    • ಮಂಗಳೂರು
    • ಮೈಸೂರು
    • ಯಾದ್ಗೀರ್
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹುಬ್ಬಳ್ಳಿ
  • ಚಿತ್ರ ವಾಣಿ
    • ಬಾಲಿವುಡ್
    • ಸ್ಯಾಂಡಲ್ ವುಡ್
  • ಕ್ರೈಂ ಸುದ್ದಿಗಳು
  • ಆರೋಗ್ಯ
  • ಕ್ರೀಡೆ
  • ಇ-ಪೇಪರ್
  • ಗ್ಯಾಲರಿ
  • ಪಾಕವಿಧಾನ
  • Youtube Channel
Search
Sunday, September 28, 2025
  • ನಮ್ಮ ಕುರಿತಂತೆ
  • ಸಂಪರ್ಕ
Facebook Instagram Mail Twitter Youtube
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
Sanjevani
  • ಸುದ್ಧಿ
    • Allಅಂತರಾಷ್ಟ್ರೀಯರಾಜ್ಯರಾಷ್ಟ್ರೀಯ

      ನಟ ವಿಜಯ್ ರ‍್ಯಾಲಿಯಲ್ಲಿ ಭಾರೀ ನೂಕು ನುಗ್ಗಲು : 31 ಸಾವು

      ರಸ್ತೆ ಅಪಘಾತ : ಐವರ ಸಾವು

      27 ಭಾರತೀಯರ ಬಿಡುಗಡೆಗೆ ಆಗ್ರಹ

      ಇರಾನ್ ಮೇಲೆ ಆರ್ಥಿಕ, ಮಿಲಿಟರಿ ನಿರ್ಬಂಧಕ್ಕೆ ನಿರ್ಧಾರ

  • ಜಿಲ್ಲೆ
    • Allಕಲಬುರಗಿಚಿತ್ರದುರ್ಗತುಮಕೂರುದಾವಣಗೆರೆಬಳ್ಳಾರಿಬೀದರ್ಬೆಂಗಳೂರುಮಂಗಳೂರುಮೈಸೂರುಯಾದ್ಗೀರ್ರಾಯಚೂರುವಿಜಯನಗರವಿಜಯಪುರಶಿವಮೊಗ್ಗಹುಬ್ಬಳ್ಳಿ

      ಪ್ರತ್ಯೇಕ ಅಪಘಾತ: ಇಬ್ಬರು ಸಾವು

      11 ಸುಳ್ಳು ದಾಖಲೆ ನೀಡಿದ್ದ ವ್ಯಕ್ತಿ ನಾಪತ್ತೆ

      ಹಿಂಗಾರು ಬೀಜ ದಿನೋತ್ಸವ

  • ಚಿತ್ರ ವಾಣಿ
    • Allಬಾಲಿವುಡ್ಸ್ಯಾಂಡಲ್ ವುಡ್

      ಸಮಾಜಕ್ಕೆ ಉತ್ತಮ ಸಂದೇಶ ಸಾರಲಿರುವ “ಚಿ.ಸೌ. ಕನ್ಯಾಕುಮಾರಿ”ಉ.ಕರ್ನಾಟಕದ ಯುವ ಕಲಾವಿದರ ಪ್ರತಿಭೆ ಅನಾವರಣ

      ಪ್ರತಿಭಾವಂತನಿಗೆ ನಾಯಕನ ಪಟ್ಟ

      ಬೆರಗಿನ ದೃಶ್ಯಾವಳಿಗಳ ಮಾಯಾಲೋಕ ‘ಕಾಂತಾರ ಅಧ್ಯಾಯ-1

      ಹನುಮಾನ್ ಖ್ಯಾತಿಯ ನಿರ್ದೇಶಕನ ಮತ್ತೊಂದು ಸಿನೆಮಾ ʻಅಧಿರʼ

  • ಕ್ರೈಂ ಸುದ್ದಿಗಳು
  • ಆರೋಗ್ಯ
    • ಹಬೆ ತೆಗೆದುಕೊಳ್ಳುವಾಗ ಎಚ್ಚರ ಅಗತ್ಯ

      ಹೊಟ್ಟೆಯಲ್ಲಿ ಉರಿ…..

      ಬೆಲ್ಲದ ಹಣ್ಣಿನಲ್ಲಿದೆ ಔಷಧೀಯ ಗುಣ

      ಮೂಲವ್ಯಾಧಿ ಮನೆ ಮದ್ದು

      ತಲೆನೋವಿಗೆ ಮನೆಮದ್ದು

  • ಕ್ರೀಡೆ
    • ಟೀಂ ಇಂಡಿಯಾದಲ್ಲಿ ಗಾಯದ ಸಮಸ್ಯೆ

      ಏಷ್ಯಾ ಕಪ್‌ನಲ್ಲಿ ಅಭಿಷೇಕ್ ದಾಖಲೆ ರನ್

      ಅಗಾಸ್ಸಿ- ಸ್ಟೆಫಿಗ್ರಾಫ್ 290 ದಶಲಕ್ಷ ಡಾಲರ್ ಆಸ್ತಿ ಒಡೆಯರು

      41 ವರ್ಷಗಳ ಬಳಿಕ ಭಾರತ-ಪಾಕ್ ಮುಖಾಮುಖಿ

      ಪಾಕ್ ಕ್ರಿಕೆಟಿಗರ ವಿರುದ್ಧ ಐಸಿಸಿಗೆ ಭಾರತ ದೂರು

  • ಇ-ಪೇಪರ್
  • ಗ್ಯಾಲರಿ
  • ಪಾಕವಿಧಾನ
    • ರಾಜ್ ಕಚೋರಿ

      ಶುಂಠಿ ಟೀ

      ಬಂಗುಡೆ ಮೀನು

      ಫಿಶ್ ಪ್ರೈ

      ಕುಂದಾಪುರ ಮೊಟ್ಟೆ ಗ್ರೇವಿ

  • Youtube Channel
Home ಜಿಲ್ಲೆ ಕಲಬುರಗಿ ಖಾತಾ ನಕಲು ಪಡೆಯಲು ಜನರ ಪರದಾಟಆರುತಿಂಗಳಾದರು ಸಿಗದ ಖಾತಾ ಸಿಬ್ಬಂದಿ ನಿರ್ಲಕ್ಷ
  • ಜಿಲ್ಲೆ
  • ಕಲಬುರಗಿ

ಖಾತಾ ನಕಲು ಪಡೆಯಲು ಜನರ ಪರದಾಟಆರುತಿಂಗಳಾದರು ಸಿಗದ ಖಾತಾ ಸಿಬ್ಬಂದಿ ನಿರ್ಲಕ್ಷ

By
Kalaburgi_Newsroom
-
September 25, 2025
Facebook
Twitter
WhatsApp
Email

    ವಾಡಿ: ಸೆ.25:ಪಟ್ಟಣದ ಪುರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವರ್ಷಗಟ್ಟಲೆ ಕಚೇರಿಗೆ ಅಲೆದರೂ ಸಾರ್ವಜನಿಕರ ಆಸ್ತಿ ದಾಖಲೆಗಳು ಕ?ಸೇರುತ್ತಿಲ್ಲ. ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಗೆ ಜನರು ಬೇಸತ್ತಿದ್ದಾರೆ. ಪುರಸಭೆಯ ಸೇವೆಗಳು ಸರಳವಾಗಿ ಜನರಿಗೆ ತಲುಪಲು ಕ್ರಮಕ?ಗೊಳ್ಳಬೇಕು ಎಂದು ಜನಧ್ವನಿ ಜಾಗೃತ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಈ ಕುರಿತು ಮಂಗಳವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹ್ಮದ್ ಮುನಾವರ್ ದೌಲೆ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ಜನಧ್ವನಿ ಮುಖಂಡರು, ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಾಧಿಕಾರಿಗಳು ಇದ್ದೂ ಇಲ್ಲದಂತಿದ್ದಾರೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡು ಕಚೇರಿಗೆ ಬರುತ್ತಾರಾದರೂ ಕಷ್ಟ ಹೇಳಿಕೊಳ್ಳಲು ಮುಖ್ಯಾಧಿಕಾರಿಯೇ ಇರುವುದಿಲ್ಲ. ಕರೆ ಮಾಡಿದಾಗಲೊಮ್ಮೆ ಮೀಟಿಂಗ್ ಇದೆ ಕಲಬುರಗಿಗೆ ಬಂದಿದ್ದೇನೆ ನಾಳೆ ಬನ್ನಿ ಎಂಬ ಸಿದ್ಧ ಉತ್ತರ ನೀಡುತ್ತಾರೆ. ನೊಂದಣಿಯಾದ ನಿವೇಶನ ದಾಖಲೆಯ ಮೊಟೇಷನ್, ಕಟ್ಟಡ ಪರವಾನಿಗೆ, ಆಸ್ತಿ ಮಾರಾಟಕ್ಕೆ ಸಂಬಂದಪಟ್ಟಂತೆ ಖಾತಾ ನಕಲು ಕೇಳಿದರೆ ಕೆಲವರಿಗೆ ನಾಲ್ಕು ತಿಂಗಳು ಇನ್ನೂ ಕೆಲವರಿಗೆ ವರ್ಷಗಟ್ಟಲೇ ಅಲೆದಾಡಿಸುತ್ತಾರೆ. ಲಂಚ ಕೊಟ್ಟರೆ ಮಾತ್ರ ಸರಿಯಾದ ಸಮಯದಲ್ಲಿ ಆಸ್ತಿ ದಾಖಲೆಗಳು ಕೈಸೇರುತ್ತವೆ. ಇಲ್ಲದಿದ್ದರೆ ಇಲ್ಲ ಎಂಬಂತಹ ಕೆಟ್ಟ ಪರಸ್ಥಿತಿ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.

    ಕಳೆದ ಮೂರು ವರ್ಷಗಳಿಂದ ಬಡಾವಣೆಗಳ ಅಭಿವೃದ್ಧಿ ಸ್ಥಗಿತಗೊಂಡಿದೆ. ಹೂಳು ತುಂಬಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹಲವು ಬಡಾವಣೆಗಳಲ್ಲಿ ಗಿಡಗಂಟಿ ಬೆಳೆದು ಹಾವು ಚೇಳು ಹರಿದಾಡುತ್ತಿವೆ. ಪಟ್ಟಣದ ಯಾವೂದೇ ಸ್ಥಳದಲ್ಲಿ ಸಾರ್ವಜನಿಕ ಮೂತ್ರಾಲಯ ಸೌಲಭ್ಯ ಇಲ್ಲ. ಹೊರಗಿನಿಂದ ಬರುವ ಜನರಿಗಾಗಿ ಸುಲಭ ಶೌಚಾಲಯ ಇಲ್ಲ. ಬೀದಿ ದೀಪಗಳ ನಿರ್ವಹಣೆ ವ್ಯವಸ್ಥೆ ಸರಿಯಿಲ್ಲ. ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯ ರಸ್ತೆಗೆ ಅಳವಡಿಸಿರುವ ಸಾಲು ಸಾಲು ಬೀದಿ ದೀಪಗಳು ಮೂರು ವರ್ಷ ಕಳೆದರೂ ಬೆಳಕು ನೀಡುತ್ತಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಯಾವ ದಾಖಲೆ ಪಡೆಯಲು ಎಷ್ಟು ಶುಲ್ಕ ಭರಿಸಬೇಕು ಎಂಬ ನಾಮಫಲಕ ಅಳವಡಿಸಿಲ್ಲ. ಸ್ಥಳೀಯರಿಗೆ ಇತರೇ ಸರ್ಕಾರಿ ಸೌಲಭ್ಯಗಳನ್ನು ಒದಗಿಸದೆ ಅಧಿಕಾರಿಗಳು ವಂಚಿಸಿದ್ದಾರೆ ಎಂದು ದೂರಿದ್ದಾರೆ.

    ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಿಬ್ಬಂಧಿಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಕೂಡಲೇ ತಾವು ಪುರಸಭೆ ಕಛೇರಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆಯನ್ನು ಸರಿ ದಾರಿಗೆ ತರಬೇಕು. ಪುರಸಭೆ ಕಚೇರಿಯಲ್ಲಿ ಯಾವ ದಾಖಲೆಗೆ ಎಷ್ಟು ಶುಲ್ಕ ಮತ್ತು ಎಷ್ಟು ದಿನದಲ್ಲಿ ದಾಖಲೆ ಕೈಸೇರುತ್ತವೆ ಎಂಬ ಕುರಿತು ನಾಮಫಲಕ ಕಚೇರಿಯಲ್ಲಿ ಅಳವಡಿಸಬೇಕು. ಲಂಚಾವತಾರ ತಡೆಗಟ್ಟಬೇಕು. ಜನರಿಗೆ ಸಕಲಾದಲ್ಲಿ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ವ್ಯವಸ್ಥೆ ಹೀಗೆಯೇ ಜನವಿರೋಧಿಯಾಗಿ ಕಾನೂನು ಬಾಹಿರವಾಗಿ ಮುಂದು ವರೆದರೆ ಜನಧ್ವನಿ ಜಾಗೃತ ವೇದಿಕೆ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

    ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್. ಕೆ, ಕಾರ್ಯದರ್ಶಿ ಶೇಖ ಅಲ್ಲಾಭಕ್ಷ್, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮುಖಂಡರಾದ ಯುಸ್ಯೂಪ್ ಮುಲ್ಲಾ ಕಮರವಾಡಿ, ವಿಠ್ಠಲ್ ರಾಠೋಡ, ಶಿವಪ್ಪ ಮುಂಡರಗಿ, ಚಂದ್ರು ಕರಣಿಕ, ಮಹೆಬೂಬ ನದಾಫ್, ಆರ್.ಎನ್.ಆನಂದ ನಿಯೋಗದಲ್ಲಿ ಇದ್ದರು

    • TAGS
    • People's scramble to get account copies Six months on
    Facebook
    Twitter
    WhatsApp
    Email
      Kalaburgi_Newsroom

      RELATED ARTICLESMORE FROM AUTHOR

      ಪ್ರತ್ಯೇಕ ಅಪಘಾತ: ಇಬ್ಬರು ಸಾವು

      11 ಸುಳ್ಳು ದಾಖಲೆ ನೀಡಿದ್ದ ವ್ಯಕ್ತಿ ನಾಪತ್ತೆ

      Recent Posts

      • ನಟ ವಿಜಯ್ ರ‍್ಯಾಲಿಯಲ್ಲಿ ಭಾರೀ ನೂಕು ನುಗ್ಗಲು : 31 ಸಾವು
      • (no title)
      • ಪ್ರತ್ಯೇಕ ಅಪಘಾತ: ಇಬ್ಬರು ಸಾವು
      • 11 ಸುಳ್ಳು ದಾಖಲೆ ನೀಡಿದ್ದ ವ್ಯಕ್ತಿ ನಾಪತ್ತೆ
      • ಹಿಂಗಾರು ಬೀಜ ದಿನೋತ್ಸವ
      54,899FansLike
      3,695FollowersFollow
      3,864SubscribersSubscribe
      ABOUT US
      Sanjevani is the leading Kannada newspaper in Karnataka.
      Sanjevani, since its inception in 1982, has led the revolution of print media reporting. Currently the newspaper is published in 10 cities across the state of Karnataka.
      Contact us: contact@sanjevani.com
      FOLLOW US
      Facebook Instagram Mail Twitter Youtube
      • Contact
      • Terms of Use
      • Privacy Policy
      © 2025 Copyright of Sanjevani. All Rights Reserved.