
ಬೆಂಗಳೂರು,ಅ.೨೩-ದೀಪಾವಳಿ ಹಬ್ಬದ ಸಾಲುಸಾಲು ರಜೆ ಮುಗಿಸಿಕೊಂಡು ಮುಗಿಸಿಕೊಂಡು ನಗರಕ್ಕೆ ಸಾವಿರಾರು ಮಂದಿ ನಗರಕ್ಕೆ ವಾಪಸಾದ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.
ದೀಪಾವಳಿಗೆ ಸಾಲುಸಾಲು ರಜೆ ಹಿನ್ನೆಲೆ ಕಳೆದ ಅ.೧೯ರಂದು ಜನರು ತಮ್ಮತಮ್ಮ ಊರಿನತ್ತ ಹೊರಟಿದ್ದು,ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಷ್ ಉಂಟಾಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಮೆಟ್ರೋಗಾಗಿ ಜನ ಕ್ಯೂ ನಿಂತಿದ್ದಾರೆ. ಮೆಟ್ರೋ ನಿಲ್ದಾಣ ಒಳ ಭಾಗದಲ್ಲೂ ಜನದಟ್ಟಣೆ ಉಂಟಾಗಿದೆ. ಇನ್ನು ಮೆಜೆಸ್ಟಿಕ್ ಮೆಟ್ರೋ ಪ್ರಯಾಣಿಕರಿಂದ ತುಂಬಿಕೊಂಡಿದೆ. ಮೆಟ್ರೋ ಒಳಭಾಗದಲ್ಲೂ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.






























