ಪಾರಾಯಣ, ಹರಿನಾಮ ಸಪ್ತಾಹ ಕಾರ್ಯಕ್ರಮ


ರಬಕವಿ-ಬನಹಟ್ಟಿ,ಫೆ.೫: ತಾಲೂಕಿನ ಆಸಂಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಕಳೆದೊಂದು ವಾರದಿಂದ ಜರುಗಿದ ಶ್ರೀ ಸಂತ ಗ್ರಂಥರಾಜ ಶ್ರೀಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮವು ವಿಜೃಂಭಣೆಯಿAದ ಜರುಗಿತು.


ಒಂದು ವಾರ ಕಾಲ ಜರುಗಿದ ಪಾರಾಯಣದ ಸಮಾರೋಪದಲ್ಲಿ ದಿಂಡಿ ಸೋಹಳಾ ಮಹಾಪ್ರಸಾದವು ಜರುಗಿತು.


ನೂರಾರು ಸದ್ಭಕ್ತರು ಜ್ಞಾನೇಶ್ವರ ಪಾರಾಯಣದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬಾಳಗೋಪಾಳ, ತಾಳ, ಮೃದಂಗ ಸಮೇತ ಭಕ್ತರು ಆಗಮಿಸಿದ್ದು ಕಾರ್ಯಕ್ರಮ ನೋಡುಗರ ಮನ ಸೆಳೆಯಿತು.
ಸತತ ಏಳು ದಿನಗಳ ಕಾಲ ಪುಂಡಲೀಕರಾವ್ ಜ್ಞಾನಮೋಠೆ(ಜಿ.ಪಿ. ರಾವ್) ಅವರಿಂದ ಶ್ರೀ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ನಡೆಸಿಕೊಟ್ಟರು.


ಪಾಂಡು ಸಾಲಗುಡೆ, ಕೃಷ್ಣಾ ಸಿಂಧೆ, ದೋಂಡಿಬಾ ಗಾಯಕವಾಡ, ವಿಠ್ಠಲ ಗಾಯಕವಾಡ, ಜ್ಯೋತಿಬಾ ಲೊಂಡೆ, ಪರಶುರಾಮ ಸಾಳುಂಕೆ, ಪಾಂಡು ಶಿರೋಳ, ಕೇದಾರಿ ದುಂಬಾಳೆ, ಪ್ರಕಾಶ ರಾವಳ, ರಾಮಚಂದ್ರ ಪವಾರ, ವಿಠ್ಠಲ ಪೂಜಾರಿ ಸೇರಿದಂತೆ ಅನೇಕರಿದ್ದರು.