
ಕಲಬುರಗಿ: ಅ.25:ಪಪ್ಪಾಯಿ ಹಣ್ಣು ಕೃಷಿಗೆ ಶ್ರಮದಾಯಕ ಅಗತ್ಯ. ಸೂಕ್ತ ಕಾಲಕ್ಕೆ ಬೆಳೆ ನಿರ್ವಹಣೆ ಮಾಡಬೇಕು. ಇದರ ಸೇವನೆ ಆರೋಗ್ಯಕರ ಮತ್ತು ರೈತರಿಗೆ ಲಾಭದಾಯಕವಾಗಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ಹೇಳಿದರು. ಹೆಬ್ಬಾಳ ಸಮೀಪದ ದೇಸಾಯಿ ತೋಟವೊಂದರಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ತೋಟಗಾರಿಕೆ ಕ್ಷೇತ್ರ ಭೇಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉಪನ್ಯಾಸಕರಾದ ಎಚ್.ಬಿ.ಪಾಟೀಲ್ ಮಾತನಾಡಿ, ಪಪ್ಪಾಯಿ ಹಣ್ಣು ಜೀಣಾರ್ಂಗದ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಮಾಗಿದ ಪಪ್ಪಾಯಿಯನ್ನು ಸಲಾಡ್ಗಳು, ರಸಗಳು ಮತ್ತು ಸಿಹಿ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಬಲಿಯದ ಪಪ್ಪಾಯಿಯನ್ನು ತರಕಾರಿಯಾಗಿ ಬಳಸಲಾಗುತ್ತದೆ ಮತ್ತು ಪಪೇಯಿನ್ ಎಂಬ ಕಿಣ್ವವು ಮಾಂಸವನ್ನು ಮೃದುಗೊಳಿಸಲು ಮತ್ತು ಅಡುಗೆಯಲ್ಲಿ ಬಳಸಲ್ಪಡುತ್ತದೆ ಎಂದರು ಈ ಸಂದರ್ಭದಲ್ಲಿ ಬಸವರಾಜ ದೇಸಾಯಿ, ಸಂಗಣ್ಣ ಚಂಡ್ರಾಸಿ, ಶರಣಬಸವಪ್ಪ ಸೇರಿದಂತೆ ಇನ್ನಿತರರಿದ್ದರು.