ಚಿತ್ರಕಲಾ ಸ್ಪರ್ಧೆ:ಆರಾಧನಾ ಶಾಲೆ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ

ಕಲಬುರಗಿ,ಅ.24: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 50 ವರ್ಷಗಳ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಅ. 10ರಂದು ನಡೆದ ಇಂದಿರಾ ಪ್ರಿಯದರ್ಶಿನಿ ಚಿತ್ರಕಲಾ ಸ್ಪರ್ಧೆಯಲ್ಲಿ ಆರಾಧನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಈರಣ್ಣ ಸುತಾರ್ ಪ್ರಥಮ ಸ್ಥಾನ ಗಳಿಸಿದ್ದಾರೆ
ಈ ಸಮಾರಂಭದ ಅಭಿನಂದನಾ ಪ್ರಮಾಣ ಪತ್ರವನ್ನು ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ರವೀಂದ್ರ ದೇಸಾಯಿ ಹಾಗೂ ರೇಣುಕಾ ತಳವಾರ ಮತ್ತು ಸಂಸ್ಥೆಯ ಕಾರ್ಯದರ್ಶಿ ಚೇತನ ಕುಮಾರ ಗಾಂಗಜಿ ಮತ್ತು ನಿರ್ದೇಶಕ ರಾಜಕುಮಾರ ಹಾಗೂ ಕಲಾ ಶಿಕ್ಷಕ ವಿಕ್ರಮ್ ಒಂಟಿ ಹಾಗೂ ಎಲ್ಲಾ ಶಿಕ್ಷಕರು ಸಿಬ್ಬಂದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.