ಕಾರ್ಪೊರೇಟ್ ನಿಧಿ ಬಳಕೆ ಪ್ರಸ್ತಾವನೆಗೆ ವಿರೋಧ

ಕಲಬುರಗಿ,ಸೆ.6: ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸ್ಥಾಪನೆಗೆ ಕಾಪೆರ್Çರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‍ಆರ್) ಬಳಕೆಯ ಪ್ರಸ್ತಾವನೆ ಕೈ ಬಿಡುವಂತೆ ಎಐಡಿಎಸ್‍ಒ ಸರಕಾರವನ್ನು ಆಗ್ರಹಿಸಿದೆ.
ಜನರು ನೀಡುವ ತೆರಿಗೆ ಹಣದಲ್ಲಿ ಅಭಿವೃದ್ಧಿಪಡಿಸಬೇಕಾದ, ಜನಗಳ ಸ್ವತ್ತಾದ ಈ ಶಾಲೆಗಳನ್ನು ಈಗ ಸರ್ಕಾರ ಕಾಪೆರ್Çೀರೇಟ್ ಕಂಪನಿಗಳ ಮಡಿಲಿಗಿಡಲು ಹೊರಟಿದೆ. ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಇಡುವ ಬದಲು ಈ ಕಾಪೆರ್Çೀರೇಟ್ ಕಂಪನಿಗಳ ಹೆಸರು ಶಾಲೆಗಳಿಗೆ ಇಡುವ ಪ್ರಸ್ತಾಪವನ್ನು ಮಾಡಿರುವುದು, ಸರ್ಕಾರ ದಲ್ಲಾಳಿ ಕೆಲಸಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ. ಕಾಪೆರ್Çೀರೇಟ್ ಕಂಪನಿಗಳ ಹಣದಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲು ನಮ್ಮ ಹಕ್ಕಿನ ತೆರಿಗೆ ಹಣದಲ್ಲಿ ಶಾಲೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಿ. ಇನ್ನು ಕಂಪನಿಗಳ ಮೇಲೆ ತೆರಿಗೆ ಹೆಚ್ಚಿಸಿ ಅವರಿಂದ ನ್ಯಾಯಯುತವಾಗಿ ಹಣ ವಸೂಲಿ ಮಾಡಲಿ ಎಂದು ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಆಗ್ರಹಿಸಿದ್ದಾರೆ.