ಸಾಧನೆ ಮಾಡಿದರೆ ಮಾತ್ರ ಜಗತ್ತಲ್ಲಿ ಸನ್ಮಾನ: ಹೆಡಗಾಪುರ ಶ್ರೀಗಳು

ಬೀದರ್: ಜೂ.೩೦:ಭಾನುವಾರ ಸಂಜೆ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಜಿಲ್ಲಾ ಜಂಗಮ ಸಮಾಜ ವತಿಯಿಂದ ಇತ್ತಿಚೀಗೆ ಝಿ ಕನ್ನಡ ಟಿ.ವಿ ವಾಹಿನಿಯಲ್ಲಿ ಸರಿಗಮಪ-೨೧ರ ಸಿಸನ್‌ನಲ್ಲಿ ವಿಜೇತರಾದ ಕು.ಶಿವಾನಿ ಶಿವದಾಸ ಸ್ವಾಮಿಯವರ ಅಭಿನಂದನಾ ಸಮಾರಂಭ ಅರ್ಥಪೂರ್ಣವಾಗಿ ಜರುಗಿತು.
ಹೆಡಗಾಪುರ ಶ್ರೀ ಶಿವಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಷ.ಬ್ರ ದಾರೂಕಲಿಂಗ ಶಿವಾಚಾರ್ಯರು ಆಶಿರ್ವಚನ ನೀಡಿದರು.
ಮನುಷ್ಯನಾಗಿ ಹುಟ್ಟಿದ ಬಳಿಕ ಏನಾದರೊಂದು ಸಾಧನೆ ಮಾಡಬೇಕು. ಅದರ ಮುಖಾಂತರ ನಮ್ಮ ಹೆಜ್ಜೆ ಗುರುತು ಬಿಡಬೇಕು. ಸಾಧನೆ ಮಾಡಿದ ಪ್ರತಿಭೆಗಳಿಗೆ ಜಗತ್ತೆಲ್ಲ ಸನ್ಮಾನಿಸುತ್ತದೆ. ಸಾಧನೆ ಮಾಡಿ ಸತ್ತರೆ ಸ್ವರ್ಗದಲ್ಲೂ ಸನ್ಮಾನ ಸಿಗುತ್ತದೆ. ಸಾಧನೆ ಮಾಡದೇ ಸತ್ತರೆ ಅದು ಮನುಷ್ಯನಾಗಿ ಹುಟ್ಟಿ ಅವಮಾನ ಮಾಡಿಕೊಂಡAತೆ. ಹಾಗಾಗಿ ನಮ್ಮ ಬದುಕು ಸದಾ ಬೆಳಗಬೇಕಾದರೆ ಸಾಧನೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಬೀದರ್ ಜಿಲ್ಲೆಯ ಪ್ರತಿಭೆ ಕು.ಶಿವಾನಿ ನಾಡಿನ ಹಾಗೂ ದೇಶದ ಉದ್ದಗಲಕ್ಕೂ ತನ್ನ ಸಂಗೀತದ ಪ್ರತಿಭೆ ಪ್ರಸ್ತುತಪಡಿಸಿ ಜನ ಮನ ಗೆದ್ದಿದಲ್ಲದೆ ಜಗವೆಲ್ಲ ಗೆದ್ದಿದ್ದಾಳೆ. ಈ ಪ್ರತಿಭೆಗೆ ಗುರುತಿಸಿ ಜಿಲ್ಲಾ ಜಂಗಮ ಸಮಾಜ ಸನ್ಮಾನಿಸಿ ಅಭಿನಂದಿಸುವ ಮೂಖೇನ ಅತ್ಯಾದ್ಭುತ ಕಾರ್ಯ ಮಾಡಿದೆ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ ಹಲಬರ್ಗಾ ಶ್ರೀ ರಾಚೋಟೇಶ್ವರ ವಿರಕ್ತಮಠದ ಪೂಜ್ಯ ಷ.ಬ್ರ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಸಂಗೀತದಲ್ಲಿ ಮುಳುಗಿ ತೇಲುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ಸಾಧನೆ ಜೊತೆಗೆ ಬಲ್ಲವರ ಮಾರ್ಗದರ್ಶನ ಬೇಕು. ಇದೆಲ್ಲದಕ್ಕೂ ಮಿಗಿಲಾಗಿ ಪೂರ್ವಜರು, ಸದ್ಯ ಪಾಲಕರು, ಸುತ್ತಲಿನ ಸಮಾಜ ಪ್ರೋತ್ಸಾಹಿಸಿ ಮೇಲಕ್ಕೆತ್ತಿದರೆ ಪ್ರತಿಭೆ ಸದಾ ಅರಳುತ್ತದೆ ಎಂಬುದಕ್ಕೆ ಕು.ಶಿವಾನಿ ಸ್ವಾಮಿ ನೇರ ಸಾಕ್ಷಿ. ಸಮಾಜದ ಈ ಪ್ರತಿಭೆಗೆ ಮಠಾಧೀಶರಾದ ನಾವುಗಳು, ಇಡೀ ಸಮಾಜ ಇನ್ನಷ್ಟು ಪ್ರೋತ್ಸಾಹಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದ ಗೌರವಾಧ್ಯಕ್ಷ ಪ್ರೊ.ಎಸ್.ವಿ ಕಲ್ಮಠ ಮಾತನಾಡಿ, ಸಮಾಜವನ್ನು ಸಂಘಟಿಸುವಲ್ಲಿ ಮಠಗಳ ಪಾತ್ರ ಬಹಳಷ್ಟಿದೆ. ಇದರಿಂದ ಸಮಾಜದಲ್ಲಿರುವ ಕು.ಶಿವಾನಿಯಂತಹ ಪ್ರತಿಭೆಗಳು ಮುಂದೆ ಬರಲು ಸಾಧ್ಯವಾಗಲಿದೆ. ಧಾರ್ಮಿಕ ಚಟುವಟಿಕೆಗಳಲ್ಲದೇ ಧಾರ್ಮಿಕೇತರ ಕಾರ್ಯಗಳಾದ ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳಿಗೆ ಪ್ರೋತ್ಸಾಹಿಸಲು ಮಠಗಳು ಮುಂದೆ ಬರಬೇಕಿದೆ. ಲಾಡಗೇರಿ ಹಿರೇಮಠವು ಜಿಲ್ಲಾ ಜಂಗಮ ಸಮಾಜಕ್ಕೆ ಪ್ರೋತ್ಸಾಹಿಸಿದಕ್ಕೆ ಕು.ಶಿವಾನಿಯ ಅಭಿನಂದನೆ ಅರ್ಥಪೂರ್ಣವಾಗಲಿಕ್ಕೆ ಸಾಧ್ಯವಾಯಿತೆಂದರು.
ತನ್ನ ಸುಮಧುರ ಕಂಠದಿAದ ಕು.ಶಿವಾನಿ ಹಾಡುಗಳು ಪ್ರಸ್ತುತಪಡಿಸಿ ನೆರೆದವರನ್ನೆಲ್ಲ ಮಂತ್ರಮುಗ್ದವಾಗಿಸಿದಳು. ಸಂಗೀತ ವಿದ್ವಾಂಸ ಡಾ.ರಾಜೇಂದ್ರಸಿAಗ ಪವಾರ ಮಾತನಾಡಿದರು. ಲಾಡಗೇರಿ ಹಿರೇಮಠ ಸಂಸ್ಥಾನದ ಪೂಜ್ಯ ಶ್ರೀ ಷ.ಬ್ರ ಗಂಗಾಧರ ಶಿವಾಚಾರ್ಯರು, ಚಾಂಬೋಳ ಶ್ರೀ ರುದ್ರಮುನೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಷ.ಬ್ರ ಅಭಿನವ ರುದ್ರಮುನಿ ಶಿವಾಚಾರ್ಯರು, ಏಕತಾ ಫೌಂಡೇಷನ್ ಅಧ್ಯಕ್ಷ ರವಿಂದ್ರ ಸ್ವಾಮಿ, ಶ್ರೀ ರೇಣುಕ ಮಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ್ವರ ಸ್ವಾಮಿ, ಭಾರತ ಮಾತಾ ಸೇವಾ ಸಮಿತಿಯ ಗಂಗಧರ ಶಾಸ್ತಿçಗಳು, ಲಾಡಗೇರಿ ಶ್ರೀಮಠದ ಭಕ್ತರಾದ ಮಲ್ಲಪ್ಪ ಹುಲೆಪ್ಪನೋರ್, ಚಂದ್ರಕಾAತ ಅಷ್ಟುರ್, ಶಿವಾನಿಯ ತಂದೆ ತಾಯಿಗಳಾದ ಕವಿತಾ, ಶಿವದಾಸ ಸ್ವಾಮಿ, ಕಲಾವಿದರಾದ ಆಶ್ವಿನಿ, ರಾಜಕುಮಾರ ಸ್ವಾಮಿ ಬಂಪಳ್ಳಿ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಜಂಗಮ ಸಮಾಜ ವತಿಯಿಂದ ಕು.ಶಿವಾನಿ ಹಾಗೂ ಅವರ ತಂದೆ ತಾಯಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕು.ಸುಧಾರಾಣಿಯ ಭರತನಾಟ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮಾಜದ ಮುಖಂಡರು ಪತ್ರಕರ್ತ ಶಿವಕುಮಾರ ಸ್ವಾಮಿ ಸ್ವಾಗತಿಸಿ, ವಿದ್ಯಾವತಿ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ಶ್ರೀಕಾಂತ ಸ್ವಾಮಿ ಸೋಲಪುರ ವಂದಿಸಿದರು.
ಸಮಾಜದ ಗಣ್ಯರಾದ ಕುಮಾರ ಸ್ವಾಮಿ ಹಿರೇಮಠ, ಕಾರ್ತಿಕ ಮಠಪತಿ, ರೇವಣಸಿದ್ದಯ್ಯ ಸ್ವಾಮಿ, ಸಂಗಮೇಶ ಸ್ವಾಮಿ, ಸೋಮನಾಥ ಸ್ವಾಮಿ, ಶಿವಾನಂದ ಸ್ವಾಮಿ, ಸುಭಾಷ ಅಷ್ಟುರ್ ಸೇರಿದಂತೆ ನೂರಾರು ಜಂಗಮ ಸಮಾಜ ಬಾಂಧವರು ಮತ್ತು ಲಾಡಗೇರಿ ಮಠದ ಸದ್ಭಕ್ತರು ಕಾರ್ಯಕ್ರಮದಲ್ಲಿದ್ದರು.