
ಕಲಬುರಗಿ, ಮಾ.31- ಸರ್ವ ಲೋಕಗಳ ಪ್ರಭು ಅಲ್ಲಾಹನ ಸಾಮಿಪ್ಯ ಮತ್ತು ಆತನ ಕೃಪೆಯನ್ನು ಸಂಪಾದಿಸಲು ಕರುಣಾಮಯಿ ಪ್ರವಾದಿ ಮೊಹ್ಮದ ಪೈಗಂಬರ ಅವರು, ತೋರಿಸಿದ ನೈಜ ಮಾರ್ಗದಲ್ಲಿ ಜೀವನ ಕ್ರಮಿಸುವುದಾಗಿದೆ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಲಿಯಾಖತ ಫರೀದ ಉಸ್ತಾದ ಅವರು, ಹೇಳಿದರು.
ತಾರಪೈಲ್ ರಹಮತ್ ನಗರದ ದಾರುಲ್ ಝಿಕರ್ ಅಹ್ಮದಿಯಾ ಮುಸ್ಲೀಮ ಸಮಾಜದ ಸಭಾಂಗಣದಲ್ಲಿ ಮಾ.29ರಂದು ಆಯೋಜಿಸಿದ್ದ ಅಹ್ಮದಿಯಾ ಮುಸ್ಲೀಮ ಸಂಸ್ಥಾಪನ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭೂ ಮಂಡಲದಲ್ಲಿರುವ ಬೆಟ್ಟುಗುಡ್ಡ ಮತ್ತು ಪರ್ವತಗಳಷ್ಟು ತಮ್ಮ ಸತ್ಕಾರಗಳಿದ್ದರೂ ಸಹ ಅಲ್ಲಾಹನನ್ನು ಸಂದಿಸಲು ಸಾಧ್ಯವಾಗುವುದಿಲ್ಲ ಅದು ಕೇವಲ ಪ್ರವಾದಿಯ ಅನುಕರಣೆಯಿಂದ ಮಾತ್ರ ಸಾದ್ಯವಾಗಲಿದೆ ಆ ಮೂಲಕವೇ ತಾವು ಅಲ್ಲಾಹನ ಸಮಿಪ್ಯ ಪಡೆಯಲು ಸಾಧ್ಯವಾಯಿತು ಎಂದು ಅಹ್ಮದಿಯಾ ಮುಸ್ಲೀಮ ಸಮಾಜದ ಸಂಸ್ಥಾಪಕರು ಮತ್ತು ಮಸೀಹ ಮೌವುದ್ ಹಾಗೂ ಕಲ್ಕಿಯ ಅವತಾರರಾದ ಹಜರತ ಮಿರ್ಜಾ ಗುಲಾಂ ಅಹ್ಮದ ಖಾದಿಯಾನಿ ಅವರು, ಪ್ರಕಟಿಸಿದ್ದನ್ನು ನಾವಿಲ್ಲಿ ಸ್ಮರಿಸಿಕೊಂಡು ಮೈಗೊಡಿಸಿಕೊಳ್ಳಬೇಕು ಎಂದರು.
ಪವಿತ್ರ ಕುರ್‍ಆನ್ ಮತ್ತು ಹದಿಸ್‍ಗಳಲ್ಲಿನ ಪ್ರಮುಖ ಭೋದನೆಗಳನ್ನೊಳಗೊಂಡ 10 ಷರತ್ತುಗಳನ್ನು ಸಿದ್ದಪಡಿಸಿರುವ ಸಂಸ್ಥಾಪಕರು, ತಮ್ಮೊಂದಿಗೆ ಮತ್ತು ಸಮಾಜದ ಖಲಿಫಾರೊಂದಿಗೆ ನಿಷ್ಠೆಯ ದಿಕ್ಷೆ ಪಡೆಯಲು ಈ 10 ಷರತ್ತುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸದೇ ಚಾಚು ತಪ್ಪದೇ ಅನುಸರಣೆ ಮಾಡುವುದಾಗಿ ಅಹ್ಮದಿಯರು ಆಯಾ ಕಾಲಘಟ್ಟದ ಇಮಾಮರೊಂದಿಗೆ ಪ್ರತಿಜ್ಞೆ ಮಾಡುತ್ತಾರೆ ಎಂದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಡಾ. ಅಬ್ದುಲ ರಬ್ ಉಸ್ತಾದ ಅವರು, ಮಾತನಾಡಿ ಅಂತ್ಯಕಾಲ ಕಲಿಯುಗದಲ್ಲಿ ಧರ್ಮಾಚರಣೆ ಕೇವಲ ಆಚರ ವಿಚಾರಕ್ಕೆ ಸಿಮೀತಗೊಂಡು ನೈಜ ದೇವಭಕ್ತಿ ಆಕಾಶದ ಕೊನೆಯ ಸ್ಥಾನದಲ್ಲಿರುವ ಕೃತಿಕ ನಕ್ಷತ್ರದಷ್ಟು ದೂರಗೊಂಡಾಗ ಈ ಕಾಲಘಟ್ಟದಲ್ಲಿ ಪುನಃ ದೇವಭಕ್ತಿಯನ್ನು ಸಮಾಜದಲ್ಲಿ ಸ್ಥಾಪಿಸಲು ಫಾರಸಿ ಮೂಲದ ವ್ಯಕ್ತಿಯೊಬ್ಬರು ಇಮಾಮ್ ಮಹದಿ ಮತ್ತು ಮಸೀಹ ಮೌವೂದರಾಗಿ ಅವತರಿಸುವರು ಎಂದು ಪ್ರವಾದಿ ಮೊಹ್ಮದ ಪೈಗಂಬರ ಅವರು, ನುಡಿದ ಭವಿಷ್ಯವಾಣಿಯಂತೆ ಹಜರತ ಮಿರ್ಜಾ ಗುಲಾಂ ಅಹ್ಮದ ಖಾಗಿಯಾನಿ ಅವರು, ಅವತರಿಸಿ ಅಲ್ಲಾಹನ ಆದೇಶದ ಮೇರೆಗೆ 1889 ಮಾರ್ಚ 23 ರಂದು ಅಹ್ಮದಿಯಾ ಮುಸ್ಲೀಮ ಸಮುದಾಯಕ್ಕೆ ಅಡಿಪಾಯ ಹಾಕಿದರು ಮತ್ತು ಇಸ್ಲಾಂ ಧರ್ಮಕ್ಕೆ ಪುರನುಜ್ಜೀವನ ನೀಡುವ ಮೂಲಕ ಭಕ್ತರಿಗೆ ಅಲ್ಲಾಹನ ಸಮಿಪ್ಯ ಪಡೆಯಲು ಮಾರ್ಗದರ್ಶನ ನೀಡಿದ್ದಾರೆ ಎಂದರು.
ಮೊಹ್ಮದ ವಸೀಮ ಅಹ್ಮದ ನೂರ, ಅಬ್ದುಲ್ ಸಜ್ಜಿ, ಮೊಹ್ಮದ ಅಬ್ದುಲ್ಲಾ ಉಸ್ತಾದ, ಮೈನುದ್ದೀನ ಮುನ್ನಳ್ಳಿ ಅವರು, ಇಮಾಮ್ ಮಹದಿ ಮತ್ತು ಮಸೀಹ ಮೌವುದ್ ಅವರು ಕುರಿತು ಮಾತನಾಡಿದರು, ಮೊಹ್ಮದ ಇಸ್ಮಾಯಿಲ್ ತಿಮ್ಮಾಪೂರಿ, ಐಯಾನ್ ಅಹ್ಮದ ಯಾದಗಿರ, ಡಾ.ಅಬ್ದುಲ ರಶೀದ್ ಉಸ್ತಾದ ಅವರು, ಭಕ್ತಿ ನಜಂ ಗೀತೆಯನ್ನು ಹಾಡಿದರು, ಪವಿತ್ರ ಕುರ್‍ಆನ್ ಪಠಣದೊಂದಿಗೆ ಪ್ರಾರಂಬವಾದ ಈ ಕಾರ್ಯಕ್ರಮ ಕೊನೆಯಲ್ಲಿ ಅಹ್ಮದಿಯಾ ಸಮಾಜದ ಜಿಲ್ಲಾಧ್ಯಕ್ಷ ಅಮೀರ ಜಮಾತ್ ಲಿಯಾಖತ್ ಫರೀದ್ ಉಸ್ತಾದ ಅವರು, ಮೌನ ಪ್ರಾರ್ಥನೆಯ ಮೂಲಕ ಸಮಾರೋಪ ಗೊಂಡಿತು..



























