Home ಜಿಲ್ಲೆ ಒಂದು ದಿನದ ಕಾರ್ಯಾಗಾರ

ಒಂದು ದಿನದ ಕಾರ್ಯಾಗಾರ


ಧಾರವಾಡ,ಮಾ.೨೮: ಮಹಿಳೆಯರಿಗೆ ಜೀವನದಲ್ಲಿ ಹೊಸ ಅನುಭವಗಳನ್ನು ಪಡೆಯಲು ತಮ್ಮ ಕಂಫರ್ಟ್ ಝೋನ್ ನಿಂದ ಹೊರಬರಬೇಕಾಗಿದೆ. ತಮ್ಮಗೆ ಎದುರಾಗುವ ಸಮಸ್ಯೆಗಳನ್ನು ಒಪ್ಪಿಕೊಳ್ಳದೆ, ಅವುಗಳಿಗೆ ಪರಿಹಾರ ಮಾರ್ಗಗಳನ್ನು ಯೋಚಿಸುವುದು ಅತ್ಯಂತ ಅಗತ್ಯವಿದೆ ಎಂದು ನಂದಿನಿ ಬಿಜ್ಜೂರ್ ಅವರು ಹೇಳಿದರು.


ಅವರು ಶೆಟ್ಟರ್ ಕಾಲೋನಿಯ ಹುಕ್ಕೇರಿಕರ್ ನಗರದ ಓಂ ನಿವಾಸದಲ್ಲಿ ಜರುಗಿದ ಅಭ್ಯುದಯ ಫೌಂಡೇಶನ್ ಆಸ್ಥಾ ಮಹಿಳಾ ವೇದಿಕೆಯವರು ಅಂತಾರಾಷ್ಟಿçÃಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರ ಮಧ್ಯ ವಯಸ್ಸಿನ ಸವಾಲುಗಳು ಬಗ್ಗೆ ಮಹಿಳೆಯರಿಗಾಗಿ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಷ್ಟಾಚಾರದ ಬಾಧ್ಯತೆಯನ್ನು ಗಮನದಲ್ಲಿ ಇಟ್ಟುಕೊಂಡು, ಯಾವತ್ತೂ ಅವರು ಹೀಗೆ, ಇವರು ಹೀಗೆ ಎಂದು ಜಡ್ಜೆ÷್ಮಂಟ್ ಮಾಡುವುದಕ್ಕೆ ಹೋಗಬಾರದು. ಸಮಾಜದಲ್ಲಿ ಯಾರು ಏನನ್ನು ಹೇಳುತ್ತಾರೆ ಎಂಬುದನ್ನು ತಲೆ ಕೆಡೆಸಿಕೊಳ್ಳದೆ ನಮ್ಮ ಕೆಲಸ ಕಾರ್ಯವನ್ನು ನಾವು ಮುಂದುವರಿಸಬೇಕು. ಮತ್ತು ಮಹಿಳೆಯರು ತಮ್ಮ ಜೀವನದ ನಿರ್ಧಾರಗಳಲ್ಲಿ ಸ್ವತಂತ್ರವಾಗಿರಬೇಕು ಎಂದು ಅವರು ಹೇಳಿದರು.
ಮಹಿಳೆಯರ ಮಧ್ಯಮ ವಯಸ್ಸಿನ ಸಮಸ್ಯೆಗಳನ್ನು ಸಹ ಸಮರ್ಥವಾಗಿ ಎದುರಿಸುವ ಜವಾಬ್ದಾರಿ ಇದ್ದು, ಸಮಸ್ಯೆ ನಡೆದದ್ದರಿಂದ ಜೀವನವೇ ಮುಗಿದಂತಾಗುವುದಿಲ್ಲ, ಬದಲಿಗೆ ಅದರ ಪರಿಹಾರ ಮಾರ್ಗಗಳನ್ನು ಹುಡುಕಬೇಕು. ಆರೋಗ್ಯದ ಮೇಲೂ ಸಮಾನ ಕಾಳಜಿಯನ್ನು ವಹಿಸಬೇಕೆಂದು ಅವರು ತಿಳಿಸಿದರು.


ಕಾರ್ಯಕ್ರಮದಲ್ಲಿ ನೃತ್ಯಾದಿ ಡಾನ್ಸ ಅಕಾಡೆಮಿಯ ಅಧ್ಯಕ್ಷೆ ಸುನೀತಾ ದತ್ತವಾಡ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಸ್ಥಾ ಮಹಿಳಾ ವೇದಿಕೆಯ ಅಧ್ಯಕ್ಷೆ ನಯನಾ ಗಂಗಾಧರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಸಂಗೀತಾ ಗೋವಿಂದರಾಜ ನಿರೂಪಿಸಿ, ವಿಜಯಲಕ್ಷಿ÷್ಮ ಕಲಾದಗಿ ಅವರು ವಂದಿಸಿದರು.
ಈ ಸಂದರ್ಭದಲ್ಲಿ ಅಭ್ಯುದಯ ಫೌಂಡೇಶನ್ ಆಸ್ಥಾ ಮಹಿಳಾ ವೇದಿಕೆಯ ಮುಖ್ಯಸ್ಥರು ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.