
ಕಲಬುರಗಿ,ಸೆ.1-ಹಳೆ ವೈಷಮ್ಯದಿಂದ ತಲವಾರದಿಂದ ಹೊಡೆದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಸೀತನೂರ ಗ್ರಾಮದಲ್ಲಿ ನಡೆದಿದೆ.
ಶಿವರಾಯ ತಂದೆ ಹಣಮಂತರಾಯ ಮಾಲಿಪಾಟೀಲ (65) ಕೊಲೆಯಾದವರು.
2008ರಲ್ಲಿ ಗ್ರಾಮದ ನಾಗೀಂದ್ರಪ್ಪ ಮಾಂಗ್ ಎಂಬುವವರ ಕೊಲೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಶಿವರಾಯ ಮಾಲಿಪಾಟೀಲ ಅವರು ಜೈಲಿಗೆ ಹೋಗಿ ಬಂದಿದ್ದರು. ಈ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಗೀಂದ್ರಪ್ಪ ಮಾಂಗ್ ಅವರ ಪುತ್ರ ಲಕ್ಷ್ಮೀಕಾಂತ ಮಾಂಗ್ ಈ ಕೊಲೆ ಮಾಡಿದ್ದಾನೆ ಎಂದು ಮೃತ ಶಿವರಾಯ ಅವರ ಪುತ್ರ ಸಿದ್ದರಾಮ ಮಾಲಿಪಾಟೀಲ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.