Home ಜಿಲ್ಲೆ ಕಲಬುರಗಿ ಎನ್‍ಎಸ್‍ಎಸ್ ಎಂದರೆ ನಾನು ಸೇವೆಗೆ ಸದಾಸಿದ್ಧ

ಎನ್‍ಎಸ್‍ಎಸ್ ಎಂದರೆ ನಾನು ಸೇವೆಗೆ ಸದಾಸಿದ್ಧ

ಕಲಬುರಗಿ : ಏ.5: ಎನ್‍ಎಸ್‍ಎಸ್ ಎಂದರೆ ನಾನು ಸೇವೆಗೆ ಸದಾಸಿದ್ಧ ಎಂದರ್ಥವಾಗಿದೆ. ಶಿಬಿರದಲ್ಲಿ ಭಾಗವಹಿಸುವವರು ಸೇವೆಗೆ ಸದಾಸಿದ್ಧರಾಗಿರಬೇಕು ಎಂದು ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶಕುಮಾರ ಗಂವ್ಹಾರ ಹೇಳಿದರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಎ ಮತ್ತು ಬಿ ಘಟಕವು ಶನಿವಾರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಎನ್‍ಎಸ್‍ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದರು. ಎನ್‍ಎಸ್‍ಎಸ್ ಪದಕ್ಕೆ ಹೊಸ ವ್ಯಾಖ್ಯಾನ ನೀಡಿದ ಅವರು ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರು ಎನ್‍ಎಸ್‍ಎಸ್. ವಿದ್ಯಾರ್ಥಿಗಳು ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. “ನಾನು ಅಲ್ಲ, ನೀನು” ಎಂಬುದು ಎನ್‍ಎಸ್‍ಎಸ್‍ನ ಧ್ಯೇಯವಾಕ್ಯ. ಶಿಬಿರವು ಕೇವಲ ಸ್ವಚ್ಛತೆ ಅಷ್ಟೇ ಅಲ್ಲ ಶಿಸ್ತು, ಸಂಯಮ, ಸಮಯಪ್ರಜ್ಞೆ, ನಾಯಕತ್ವ ಗುಣ, ರಾಷ್ಟ್ರಾಭಿಮಾನ ಮತ್ತು ಸ್ವಇಚ್ಛಾಶಕ್ತಿ, ಸೇವಾಧರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಗಾಂಧಿಜಿಯವರ ಕನಸ್ಸು ಶಿಬಿರದ ಆಶಯ ಈಡೇರುತ್ತದೆ. ಶಿಬಿರಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಈ ಶಿಬಿರದ ಮೂಲಕ ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಆದರೆ ಇಂದಿನ ಯುವಜನತೆ ಜಂಕ್‍ಪುಡ್, ಫಾಸ್ಟಪುಡಗಳಿಗೆ ಮೊರೆ ಹೋಗಿರುವುದು, ನಿರಂತರ ಮೊಬೈಲ್ ಬಳಕೆಯಿಂದ ಸಮಯ ವ್ಯರ್ಥ ಮಾಡುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಗ್ರಾಮ ಸ್ವರಾಜ ಮಹಾತ್ಮ ಗಾಂಧಿಜಿಯವರ ಕನಸ್ಸಾಗಿತ್ತು. ಗ್ರಾಮಗಳು ಅಭಿವೃದ್ಧಿಗೊಳ್ಳಬೇಕು. ಶಿಬಿರದಲ್ಲಿ ಪ್ರತಿಯೊಬ್ಬ ಸ್ವಯಂಸೇವಕಿಯರು ಯಾವುದೇ ಭೇದ ಭಾವವಿಲ್ಲದೆ ಮೇಲು-ಕೀಳು ಎನ್ನದೆ ಎಲ್ಲರೂ ಸಮಾನರು. ಇದು ನಮಗಾಗಿ ಅಲ್ಲ , ನಿಮಗಾಗಿ ಆಗಿದೆ, ಇದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸೀಮಾ ಪಾಟೀಲ ಮಾತನಾಡಿ, ಈ ಕಾರ್ಯಕ್ರಮದಿಂದ ಆರೋಗ್ಯಯುತ ಭಾರತಕ್ಕೆ ಆರೋಗ್ಯಯುತ ಯುವಶಕ್ತಿ ಕುರಿತಾದ ವಿಷಯಗಳನ್ನು ಪ್ರತಿಯೊಬ್ಬ ಸ್ವಯಂ ಸೇವಕಿಯರು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಶಿಬಿರ ಲಾಭವನ್ನು ಪಡೆಯಬೇಕು. ಶಿಸ್ತು, ಶ್ರಮದಾನ, ಸೇವಾಮನೋಭಾವನೆ ರೂಢಿಸಿಕೊಳ್ಳಿ ಎಂದರು.
ಎನ್‍ಎಸ್‍ಎಸ್ ಅಧಿಕಾರಿ ಡಾ.ರಾಜಲಕ್ಷ್ಮೀ ಡಿ. ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದರೆ, ಕಲ್ಪನಾ ಡಿ.ಮಹೇಂದ್ರಕರ್ ಅತಿಥಿ ಪರಿಚಯ ಮಾಡಿದರು. ಎ ಮತ್ತು ಬಿ ಘಟಕಗಳ ಶಿಬಿರಾರ್ಥಿಗಳು ಹಾಜರಿದ್ದರು. ಕು.ಸಾಧನಾ ಪವಾರ ನಿರೂಪಿಸಿದರು, ಕು. ಲಕ್ಷ್ಮಿ ಎಚ್. ವಂದಿಸಿದರು. ಗೋದಾವರಿ ಗುಂಪಿನ ಶಿಬಿರಾರ್ಥಿಗಳು ಪ್ರಾರ್ಥಿಸಿದರು.