
ನವದೆಹಲಿ,ಆ.೨೬- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತಾದ ಚಿತ್ರಗಳ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಉದ್ಯಮಿ ಎಲೋನ್ ಮಸ್ಕ್ ತಮ್ಮ ಎಕ್ಸ್ ಖಾತೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋಗಳ ಲಿಂಕ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಖಾತೆಯಿಂದ ತೆಗೆದು ಹಾಕುವ ಮೂಲಕ ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಕೈಜೋಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ
ಮಕ್ಕಳ ಮೇಲಿನ ದೌರ್ಜನ್ಯ – ಮತ್ತು ಇತರ ಅನೇಕರ ಮೇಲಿನ ದೌರ್ಜನ್ಯ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿದ್ದು ಎಲ್ಲಾ ಲಿಂಕ್‌ಗಳನ್ನು ಮಾಧ್ಯಮ ಸಂಸ್ಥೆಯಿಂದ ತೆಗೆದು ಹಾಕಿ ಎಂದು ನಿರ್ದೇಶನ ನೀಡಿದ್ದಾರೆ
“ಯಾರಾದರೂ ಮಕ್ಕಳ ಮೇಲಿನ ದೌರ್ಜನ್ಯದ ವಿಷಯದ ಲಿಂಕ್ ಹಾಕಿದರೆ ಅಥವಾ ಅದನ್ನು ಹಂಚಿಕೊಂಡರೆ ಅದು ಅಪರಾಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾರೂ ಕೂಡ ಇಂತಹ ಚಟುವಟಿಕೆಗಳನ್ನು ಉತ್ತೇಜನ ಮಾಡದಿರಿ ಎಂದು ತಿಳಿಸಿದ್ದಾರೆ
ಎಕ್ಸ್ ವೇದಿಕೆ “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳಿಗೆ ಶೂನ್ಯ ಸಹಿಷ್ಣುತೆ ಹೊಂದಿದೆ” ಮತ್ತು ಮಕ್ಕಳನ್ನು ಶೋಷಿಸುವವರನ್ನು ನಿಭಾಯಿಸುವುದು “ಪ್ರಮುಖ ಆದ್ಯತೆ”ಯಾಗಿ ಉಳಿದಿದೆ ಎಂದು ಮಾಹಿತಿ ನೀಡಿದ್ದಾರೆ
ಗ್ಲೋಬಲ್ ಚೈಲ್ಡ್ ಸೇಫ್ಟಿ ಇನ್‌ಸ್ಟಿಟ್ಯೂಟ್ ಚೈಲ್ಡ್‌ಲೈಟ್‌ನಿಂದ ಶತಕೋಟಿ ಡಾಲರ್ ಮೌಲ್ಯದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯದ ಜಾಗತಿಕ ವ್ಯಾಪಾರ ತನಿಖೆ ಮಾಡುವಾಗ ಚಿತ್ರಗಳನ್ನು ಕಂಡುಕೊಂಡಿದೆ, ಇದು ಜಾಗತಿಕ ಮಕ್ಕಳ ಸುರಕ್ಷತಾ ಸಂಸ್ಥೆಯಾದ ಚೈಲ್ಡ್‌ಲೈಟ್‌ನಿಂದ ಶತಕೋಟಿ ಡಾಲರ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ.