Home ಮುಖಪುಟ ಸುದ್ದಿ ನಿತೀಶ್ ಪುತ್ರ ಡಿಸಿಎಂ-ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ

ನಿತೀಶ್ ಪುತ್ರ ಡಿಸಿಎಂ-ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ

ಪಾಟ್ನಾ,ಮಾ.೭- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರ ಪುತ್ರ ನಿಶಾಂತ್ ಕುಮಾರ್ ನಾಳೆ ಜೆಡಿಯುಗೆ ಅಧಿಕೃತ ಪ್ರವೇಶ ಮಾಡಲಿದ್ದು ರಾಜ್ಯದಲ್ಲಿ ಪಕ್ಷ ಮುನ್ನೆಡೆಸುವ ಜೊತೆಗೆ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ವೇದಿಕೆ ಸಜ್ಜಾಗಿದೆ.

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್ ಕೆಳಗಿಳಿಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಪುತ್ರ ನಿಶಾಂತ್ ಅವರಿಗೆ ಪಕ್ಷ ಮತ್ತು ಸರ್ಕಾರದಲ್ಲಿ ಪ್ರಮುಖ ಸ್ಥಾನ ನೀಡಲು ಉದ್ದೇಶಿಸಿದ್ಧಾರೆ ಎಂದು ಜೆಡಿಯು ಉನ್ನತ ಮೂಲಗಳು ಮಾಹಿತಿ ನೀಡಿವೆ

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧಿಕೃತ ನಿವಾಸದಲ್ಲಿ ನಡೆದ ಪ್ರಮುಖ ಜೆಡಿಯು ಸಭೆಯಲ್ಲಿ, ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಅವರು ನಿಶಾಂತ್ ಅವರ ರಾಜಕೀಯ ಪ್ರವೇಶ ಮಾಡುವ ನಿರ್ಣಯವನ್ನು ಮಂಡಿಸಿದ್ದು ಪಕ್ಷದ ಪ್ರಮುಖ ನಾಯಕರು ಬೆಂಬಲ ಸೂಚಿಸಿದ್ದಾರೆ

ನಿಶಾಂತ್‌ಗೆ ರಾಜಕೀಯಕ್ಕೆ ಸೇರುವ ಆಲೋಚನೆಗೆ ಇಷ್ಟವಿರಲಿಲ್ಲ ಆದರೆ ಅವರ ತಂದೆ, ಪಕ್ಷದ ಬೆಂಬಲಿಗರು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರ ನಿರ್ಣಯ ಕೈಗೊಳ್ಳಲಾಗಿದೆ ಎಲ್ಲಾ ಎಂಎಲ್‌ಸಿಗಳು ಮತ್ತು ಶಾಸಕರು ಸರ್ವಾನುಮತದಿಂದ ಅನುಮೋದಿಸಿದ್ದಾರೆ

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪಕ್ಷದ ವಕ್ತಾರ ನೀರಜ್ ಕುಮಾರ್ ಅವರು ಪಕ್ಷದ ನಾಯಕ ಸಂಜಯ್ ಝಾ ಮಂಡಿಸಿದ ಐತಿಹಾಸಿಕ ನಿರ್ಧಾರಕ್ಕೆ ಪಕ್ಷದ ನಾಯಕರಿಂದ ಸ್ವಾಗತ ಸಿಕ್ಕಿದೆ ಎಂದಿದ್ಧಾರೆ.

ಜಾರ್ಖಂಡ್ ಎಂಜಿನಿಯರಿಂಗ್ ಸಂಸ್ಥೆಯ ಬಿಐಟಿ ಮೆಸ್ರಾದ ಹಳೆಯ ವಿದ್ಯಾರ್ಥಿಯಾಗಿರುವ ನಿಶಾಂತ್ ಅವರನ್ನು ಹೊಸ ಎನ್‌ಡಿಎ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಿಸಬಹುದು ಅಥವಾ ನಿತೀಶ್ ಕುಮಾರ್ ರಾಜ್ಯಸಭೆಗೆ ಪ್ರವೇಶ ಮಾಡುವುದರಿಂದ ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆ ಇದೆ ಎನ್ನಲಾಗಿದೆ