
ಹುಳಿಯಾರು, ಜು. ೨೩- ಹೋಬಳಿಯ ತಿಮ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಂದಿಹಳ್ಳಿ ದೇವರಾಜ್ ಅವರ ಪುತ್ರ ಎನ್.ಡಿ.ಪ್ರಜ್ವಲ್ ಅವರು ತಿಪಟೂರಿನಲ್ಲಿ ನಡೆದ ’ಮಿಸ್ಟರ್ ತಿಪಟೂರು-೨೦೨೫’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಜೇತರಾಗಿದ್ದಾರೆ.
ತಿಪಟೂರಿನಲ್ಲಿ ತಿಪಟೂರು ಬಾಯ್ಸ್ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ೫೦ ರಿಂದ ೫೫ ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಜ್ವಲ್, ಪ್ರಥಮ ಬಹುಮಾನವಾಗಿ ೧೦ ಸಾವಿರ ರೂ. ನಗದು, ಟ್ರೋಫಿ ಮತ್ತು ಶ್ರೇಷ್ಠತೆಯ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ.
ಪ್ರಜ್ವಲ್ ಅವರು ಚಿಕ್ಕನಾಯಕನಹಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ಬಿಸಿಎ ವ್ಯಾಸಂಗ ಮಾಡುತ್ತಿದ್ದು ತುಮಕೂರು ವಿಶ್ವವಿದ್ಯಾಲಯದಿಂದ ಆಯೋಜಿಸಿದ್ದ ಕಾಲೇಜು ಮಟ್ಟಡ ದೇಹದಾಢ್ಯ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಳಿಯಾರಿನಲ್ಲಿ ಕರವೇಯಿಂದ ಕನ್ನಡ ರಾಜ್ಯೋತ್ಸವದಲ್ಲಿ ಆಯೋಜಿಸಿದ್ದ ಮಿಸ್ಟರ್ ಹುಳಿಯಾರು ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದಿದ್ದಾರೆ.