ಮೊಹರಂ ಆಟವಿ ಖತಾಲ ಜು. ೫ ರಂದು

ಇಂಡಿ :ಜೂ.೩೦: ಇಂಡಿಯ ಪ್ರಸಿದ್ದ ಹಿಂದು ಮುಸ್ಲಿಮ್ ಭಾವೈಕ್ಯದ ಮೊಹರಮ್ ಹಬ್ಬದ ಆಟವಿ ಖತಾಲ್ ಜು. ೫ ರಂದು ಶನಿವಾರ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಜು. ೪ ರಂದು ಶುಕ್ರವಾರ ಮಧ್ಯಾನ್ಹ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಝೂಲ್ ಫಕೀರ ಮೆರವಣೆಗೆ ನಡೆಯುತ್ತದೆ. ಶನಿವಾರ ಜು. ೫ ರಂದು ಆಟವಿಖತಾಲ ಮತ್ತು ಜು. ೬ ರಂದು ರವಿವಾರ ನಗರದ ಪ್ರಮುಖ ಬೀದಿಗಳಲ್ಲಿ ಹಸನ, ಹುಸೇನ ಮತ್ತು ಕಾಸಿಮರ ದೇವರ ಮೆರವಣೆಗೆ ನಡೆಯುತ್ತದೆ.
ಇಂಡಿಯ ಮೊಹರಂಗೆ ವಿಜಯಪುರ, ಬಾಗಲಕೋಟ, ಕಲಬುರಗಿ, ಹೈದ್ರಾಬಾದ, ಪೂನಾ, ಮುಂಬಯಿ ಸೇರಿದಂತೆ ಹಲವಾರು ಕಡೆಗಳಿಂದ ಭಕ್ತರು ಬರುತ್ತಾರೆ.
ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಕರಬಲ್ ಮೆರವಣೆಗೆ, ಝೂಲ್ ಫಕೀರ, ಹುಲಿ ಕುಣಿತ, ಭಡಂಗ ಮೆರವಣೆಗೆ ಸೇರಿದಂತೆ ಅನೇಕ ಗುಂಪುಗಳಿAದ ತಮ್ಮ ಭಕ್ತಿ ಸೇವೆ ಸಲ್ಲಿಸುವದು ಇಲ್ಲಿಯ ಮೊಹರಂ ವಿಶೇಷ.
ಮೊಹರಂ ನಿಮಿತ್ಯ ಈಗಾಗಲೇ ಪುರಸಭೆ ಯಿಂದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಕಾರ್ಯ ನಡೆದಿದ್ದು ಪ್ರತಿ ವರ್ಷ ಪೋಲಿಸ ಇಲಾಖೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುತ್ತದೆ ಅದಲ್ಲದೆ ದೇವಸ್ಥಾಣದಲ್ಲಿ ಆರು ಮತ್ತು ಹೊರಗಡೆ ೨೦ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.