ಸಂಗೀತದ ಕಡೆಗೆ ಒಲವು ಹೆಚ್ಚು

ಕಲಬುರಗಿ,ಜು.17-ನಗರದ ಶಾಹಬಜಾರ ಬಡಾವಣೆ ಭಾಗ್ಯವಂತಿ ದೇವಾಸ್ಥಾನದಲ್ಲಿ ಹಮ್ಮಿಕೊಂಡ ಭಾಗ್ಯ ಜ್ಯೋತಿ ಜನಪದ ಸಂಗೀತ ಸಂಸ್ಥೆ ಹಮ್ಮಿಕೊಂಡ ತತ್ವಪದ ಗಾಯನ ಸಾಂಸ್ಕøತಿಕ ಕಾರ್ಯಕ್ರಮವನ್ನು ಶ್ರೀಶೈಲ್ ಬಿರಾದಾರವರು ಉದ್ಘಾಟಿಸಿ ಮಾತನಾಡುತ್ತಾ ಕಲೆಯ ಇವತ್ತಿನ ದಿನಮಾನಗಳಲ್ಲಿ ಬಹಳ ಮುಖ್ಯ ಇದೇ ರೀತಿ ಕಾರ್ಯಕ್ರಮ ಮಾಡುವುದರಿಂದ ಸಂಗೀತ ಸಾಹಿತ್ಯದ ಕಡೆಗೆ ಒಲವು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಜೀವನದಲ್ಲಿ ಸಂಗೀತದಿಂದ ಸಿಗುವ ನೆಮ್ಮದಿ ಮತ್ತ್ಯಾವುದ್ದರಲ್ಲಿ ಸಿಗುವುದಿಲ್ಲ ನಮ್ಮ ಭಾಗದಲ್ಲಿ ಕವಿಗಳು ಕಲಾವಿದರು ಸಾಹಿತಿಗಳು ಇನ್ನೂ ಅನೇಕ ರೀತಿಯ ಕಲಾವಿದರು ಸಿಗುವುದು ಹೆಮ್ಮೆಯ ವಿಷಯ ಎಂದು ಅವರು ತಿಳಿಸಿದರು ವೇದಿಕೆಯಲ್ಲಿ ಬಸವಂತರಾಯ ಕುಮ್ಮಾಣಿ, ಜಗದೀಶ್ ಪಾಟೀಲ್, ಆನಂದ್ ಹಿತ್ತಲ್ ಶಿರೂರ್, ಸಂತೋಷ್ ಕುಮಾರ್, ಸಂಘದ ಕಾರ್ಯದರ್ಶಿಯಾದ ಅಂಬಾರಾಯ ಕೋಣೆ, ಅಲ್ಲದೆ ಬಡಾವಣೆಯ ವ್ಯಕ್ತಿಗಳು ಸದ್ಭಕ್ತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ಕಲಾವಿದರಾದ ಗುರು ಶಾಂತಯ್ಯ ಸ್ಥಾವರಮಠ ಅಣ್ಣಾರಾಯ ಮತ್ತಿ ಮೋಡ ಪವಿತ್ರ ರಾಜನಾಳ ವಿನೋದಸ್ತಾಪುರ್ ಶ್ರೀಶೈಲ್ ವಗ್ಗಾಲಿ ಲೀಲಾವತಿ ಚಂದ್ರಕಾಂತ್ ಶ್ರೀದೇವಿ ಬಿಕೆ ಲವ್ ಕುಶ ಪಾಳಾ ಗಿರ್ಮಲ್ಲಪ್ಪ ಬಿಲಗುಂದಿ ವೀರಭದ್ರಯ್ಯ ಸ್ಥಾವರ ಮೌನೇಶ್ ಪಂಚಾಳ್ ಈ ಎಲ್ಲಾ ಕಲಾವಿದರು. ತಮ್ಮ ಸಂಗೀತ ಸೇವೆ ಸಲ್ಲಿಸಿದ ಎಂದು ಭಾಗ್ಯಜ್ಯೋತಿ ಜನಪದ ಸಂಗೀತ ಸಂಸ್ಥೆ ಅಧ್ಯಕ್ಷರಾದ ನಿರ್ಮಲಾ ಕೋಣೆ ತಿಳಿಸಿರುತ್ತಾರೆ.