ಮೊಜ್ತಬಾ ಖಮೇನಿ ಇರಾನ್‌ನ ಪರಮೋಚ್ಛ ನಾಯಕನಾಗಿ ಆಯ್ಕೆ

ಟೆಹರಾನ್,ಮಾ,೪- ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಒತ್ತಡದ ಮೇರೆಗೆ ಇರಾನ್‌ನ ತಜ್ಞರ ಸಭೆ ಹತ್ಯೆಗೀಡಾದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನಿನಪರಮೋಚ್ಛ ನಾಯಕರನ್ನಾಗಿ ಆಯ್ಕೆ ಮಾಡಿದೆ.

ಮುಂದಿನ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತಿರುವ ಹಿರಿಯಧರ್ಮಗುರುಗಳುವಿನ್ನೂ ಚರ್ಚೆಯಲ್ಲಿ ನಿರತರಾಗಿದ್ದಾರೆ, ಈ ಸಂಬಂಧ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ, ಮೊಜ್ತಬಾ ಖಮೇನಿ ಅವರೇ ಮುಂದಿನ ನಾಯಕನ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದ್ದು ಈ ಬಗ್ಗೆ ಔಪಚಾರಿಕ ಪ್ರಕಟಣೆ ಬಾಕಿ ಉಳಿದಿದೆ

ಮೂವರು ಇರಾನಿನ ಅಧಿಕಾರಿಗಳನ್ನು ಉಲ್ಲೇಖಿಸಿ ೮೮ ಸದಸ್ಯರ ತಜ್ಞರ ಸಭೆಯು ಎರಡು ವರ್ಚುವಲ್ ಸಭೆಗಳನ್ನು ನಡೆಸಿ ಉತ್ತರಾಧಿಕಾರದ ಕುರಿತು ಚರ್ಚೆ ನಡೆಸುತ್ತಿದ್ದು ಮುಂದಿನ ನಾಯಕನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗಿದೆ

ಇರಾನ್‌ನ ಸಚೋಚ್ಚ ನಾಯಕನ್ನಾಗಿ ಮೊಜ್ತಬಾ ಖಮೇನಿಯನ್ನು ಘೋಷಿಸುವ ಬಗ್ಗೆ ಧರ್ಮಗುರುಗಳು ಯೋಚಿಸುತ್ತಿದ್ದರು, ಆದರೆ ಕೆಲವು ಸದಸ್ಯರು ಅಂತಹ ಕ್ರಮ ಅವರನ್ನು ಅಮೆರಿಕ ಮತ್ತು ಇಸ್ರೇಲ್‌ಗೆ ಗುರಿಯಾಗಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಈ ವಿಷಯ ಪ್ರಕಟಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಲಾಗಿದೆ

ಶಿಯಾ ಇಸ್ಲಾಂನ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕುಮ್‌ನಲ್ಲಿರುವ ಕಟ್ಟಡದ ಮೇಲೆ ಇಸ್ರೇಲ್ ದಾಳಿ ಮಾಡಿದೆ, ಈ ಕಟ್ಟದಲ್ಲಿ ಧಾರ್ಮಿಕ ನಾಯಕರು ಸಭೆ ಸೇರಿ ಮುಂದಿನ ನಾಯಕನ ಆಯ್ಕೆಗೆ ನಿರ್ಧರಿಸಿದ್ದರು, ದಾಳಿ ಹಿನ್ನೆಲೆಯಲ್ಲಿ ಸಭೆಯನ್ನು ಬೇರೆ ಕಡೆ ಬದಲಾಯಿಸಲಾಗಿದೆ.

ತಜ್ಞರ ಸಭೆಯು ಸರ್ವೋಚ್ಚ ನಾಯಕನನ್ನು ನೇಮಿಸಲು, ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯವಿದ್ದರೆ ವಜಾಗೊಳಿಸಲು ಸಾಂವಿಧಾನಿಕವಾಗಿ ಆದೇಶಿಸಲಾಗಿದೆ. ಇಸ್ಲಾಮಿಕ್ ಗಣರಾಜ್ಯದ ೪೭ ವರ್ಷಗಳ ಇತಿಹಾಸದಲ್ಲಿ ದೇಹ ನಾಯಕನನ್ನು ಆಯ್ಕೆ ಮಾಡಲಿದೆ ಎಂದು ಹೇಳಲಾಗಿದೆ

“ಸಾರ್ವಜನಿಕರಲ್ಲಿ ಒಂದು ಭಾಗ ಈ ನಿರ್ಧಾರಕ್ಕೆ ನಕಾರಾತ್ಮಕವಾಗಿ ಮತ್ತು ಬಲವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಇದು ಪ್ರತಿಕ್ರಿಯೆಯನ್ನು ಹೊಂದಿರುತ್ತದೆ” ಎಂದು ಹೇಳಿದ್ದಾರೆ