Home ಮುಖಪುಟ ಸುದ್ದಿ ಮೊಜ್ತಬಾ ಇರಾನಿನ ಸರ್ವೋಚ್ಛ ನಾಯಕನಾಗಿ ಆಯ್ಕೆ

ಮೊಜ್ತಬಾ ಇರಾನಿನ ಸರ್ವೋಚ್ಛ ನಾಯಕನಾಗಿ ಆಯ್ಕೆ

ಟೆಹರಾನ್,ಮಾ.೯- ಇರಾನ್‌ನ ಸರ್ವೋಚ್ಛ ನಾಯಕ ಆಯಾತೊಲ್ಲ ಆಲಿ ಖಮೇನಿ ಹತ್ಯೆ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಇರಾನ್‌ನ ಹೊಸ ಸರ್ವೋಚ್ಛ ನಾಯಕನಾಗಿ ಆಯ್ಕೆಯಾಗಿದ್ದಾರೆ.

೫೬ ವರ್ಷದ ಮೊಜ್ತಬಾ ಖಮೇನಿ ಅವರನ್ನು ತೆರೆಮರೆಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕನ ಪ್ರಭಾವ ಬೀರುತ್ತಿದ್ದಾರೆ ಎಂದು ಪರಿಗಣಿಸಲಾಗಿತ್ತು. ಈ ನಡುವೆಯೇ ಇರಾನ್‌ನ ಸರ್ವೋಚ್ಛ ನಾಯಕನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ

ಮೊಜ್ತಬಾ ಖಮೇನಿ ಅವರು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಇಸ್ಲಾಮಿಕ್ ಗಣರಾಜ್ಯದಲ್ಲಿ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿಲ್ಲ.ಸದ್ಯದಲ್ಲಿಯೇ ಇರಾನ್‌ನ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ಹೇಳಲಾಗಿದೆ

ತಂದೆ ಆಯಾತೊಲ್ಲ ಆಲಿ ಖಮೇನಿ ಮತ್ತು ಅವರ ಪೂರ್ವವರ್ತಿ, ಇಸ್ಲಾಮಿಕ್ ಗಣರಾಜ್ಯದ ಸಂಸ್ಥಾಪಕ ರುಹೊಲ್ಲಾ ಖಮೇನಿ ಇಬ್ಬರೂ, ೧೯೭೯ ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಸಾವನ್ನಪ್ಪಿದ್ದರು. ಆ ನಂತರ ಅಮೆರಿಕದ ಸಹಕಾರದೊಂದಿಗೆ ಆಯಾತೊಲ್ಲ ಆಲಿ ಖಮೇನಿ ಇರಾನ್‌ನ ಸವೋಚ್ಛ ನಾಯಕರಾಗಿ ಆಯ್ಕೆಯಾಗಿದ್ದರು.

ಕಳೆದ ಎರಡು ವಾರಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್‌ನ ಸರ್ವೋಚ್ಛ ನಾಯಕ ಆಯಾತೊಲ್ಲ ಆಲಿ ಖಮೇನಿ ಸೇರಿದಂತೆ ಇರಾನ್ ಪ್ರಮುಖರ ನಿವಾಸದ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು.

ಆಯಾತೊಲ್ಲ ಆಲಿ ಖಮೇನಿ ಹತ್ಯೆ ನಂತರ ಮುಂದಿನ ಸರ್ವೋಚ್ಛ ನಾಯಕ ಯಾರು ಎನ್ನುವ ಬಗ್ಗೆ ಇರಾನ್ ಸರ್ಕಾರ ರಚಿಸಿದ್ದ ಉನ್ನತ ನಾಯಕರ ನಿಯೋಗ ಆಯಾತೊಲ್ಲ ಆಲಿ ಖಮೇನಿ ಹತ್ಯೆ ಬಳಿಕ ಅವರ ಪುತ್ರ ಮೊಜ್ತಬಾ ಖಮೇನಿ ಅವರನ್ನು ಇರಾನ್‌ನ ಮುಂದಿನ ಸವೋಚ್ಛ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

ಸದ್ಯದಲ್ಲಿಯೇ ಇರಾನ್‌ನ ಸರ್ವೋಚ್ಛ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಸದ್ಯ ನಡೆಯುತ್ತಿರುವ ಸಂಘರ್ಷವನ್ನು ಮುನ್ನೆಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಬೆಲೆ ಗಗನಕ್ಕೇರಿದ್ದು ಅದನ್ನು ನಿರ್ವಹಿಸುವುದೂ ಸೇರಿದಂತೆ ಸಂಘರ್ಷ ನಿಲ್ಲಿಸುವುದು ಸದ್ಯಕ್ಕೆ ಮೊಜ್ತಬಾ ಖಮೇನಿ ಅವರ ಮುಂದಿರುವ ದೊಡ್ಡ ಸವಾಲಾಗಿದೆ.

ಮೊಜ್ತಬಾ ಖಮೇನಿ ಯಾರು

ಇರಾನ್‌ನ ಪವಿತ್ರ ಶಿಯಾ ನಗರವಾದ ಮಶ್ಹಾದ್‌ನಲ್ಲಿ ಜನಿಸಿದ ಮೊಜ್ತಬಾ ಖಮೇನಿ ಇರಾನ್-ಇರಾಕ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಹಿರಿಮೆ ಹೊಂದಿದ್ದಾರೆ

ಮೊಜ್ತಬಾ ಇರಾನ್‌ನ ಶಿಯಾ ದೇವತಾಶಾಸ್ತ್ರದ ಕಲಿಕೆಯ ಕೇಂದ್ರವಾದ ಕೋಮ್‌ನ ಸೆಮಿನರಿಗಳಲ್ಲಿ ಸಂಪ್ರದಾಯವಾದಿಗಳ ಅಡಿಯಲ್ಲಿ ಧಾರ್ಮಿಕ ಶಿಕ್ಷಣ ಪಡೆದಿದ್ದಾರೆ, ಇಸ್ಲಾಮಿಕ್ ಗಣರಾಜ್ಯದ ಸರ್ಕಾರದಲ್ಲಿ ಎಂದಿಗೂ ಯಾವುದೇ ಅಧಿಕೃತ ಹುದ್ದೆಯನ್ನು ಹೊಂದಿರಲಿಲ್ಲ. ಹೀಗಾಗಿ ಇರಾನ್ ಸರ್ವೋಚ್ಚ ನಾಯಕನಾಗಿ ಆಯ್ಕೆಯಾಗಿದ್ದಾರೆ