ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು” ೨೫ ಕೋಟಿ ವೆಚ್ಚದ ಕುಡಿಯುವ ನೀರು ಯೋಜನೆಗೆ ಶಾಸಕ ಲಕ್ಷ್ಮಣ ಸವದಿ ಭೂಮಿಪೂಜೆ

ಅಥಣಿ :ಜು.೨೧: ಗ್ರಾಮೀಣ ಜನರಿಗೆ ಸುರಕ್ಷಿತ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವನ್ನು ನೀಡಿದೆ. ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ ೫೫ ಲೀಟರ್ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಸರ್ಕಾರ ತಳೆದಿದೆ. ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ೨೦೦೬ ರಲ್ಲಿ ತಾಲೂಕಿನ ಐಗಳಿ, ಮದಭಾವಿ, ಬಳ್ಳಿಗೇರಿ ಈ ಮೂರು ಗ್ರಾಮಗಳಲ್ಲಿ ೩ ಸಂಯುಕ್ತ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, ರಾಜ್ಯಕ್ಕೆ ಮಾದರಿ ಹಾಗೂ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು,
ಅವರು ತಾಲೂಕಿನ ಐಗಳಿ ಕ್ರಾಸ್‌ನಲ್ಲಿ ೨೪.೯೮ ಕೋಟಿ ರೂ ವೆಚ್ಚದ ಸಂಯುಕ್ತ ಕುಡಿಯುವ ನೀರಿನ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ೨೦೦೬ ಅಗಷ್ಟನಲ್ಲಿ ತಾಲೂಕಿನಲ್ಲಿ ಒಂದೆಡೆ ಕೃಷ್ಣಾ ನದಿ ಪ್ರವಾಹ ಬಂದು ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗಿದರೇ ಇದೇ, ತಾಲೂಕಿನ ತೆಲಸಂಗ ಹಾಗೂ ಅನಂತಪುರ ಹೋಬಳಿಗಳಲ್ಲಿ ೨ ಕಿ.ಮೀ ದೂರ ಹೋಗಿ ಕುಡಿಯಲು ನೀರು ತರುವ ಭೀಕರ ಪರಿಸ್ಥಿತಿ ಎದುರಾಗಿತ್ತು, ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ನಾನು ಶಾಸಕನಾಗಿ ಆಯ್ಕೆಯಾದೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ ಅವರಿಗೆ ಇಲ್ಲಿನ ಪರಿಸ್ಥಿತಿ ವಿವರಿಸಿ ಮನದಟ್ಟು ಮಾಡಿದ ಮೇಲೆ ೧೫ ಕೋಟಿ ವೆಚ್ಚದ ೩ ಸಂಯುಕ್ತ ಕುಡಿಯುವ ನೀರು ಯೋಜನೆಗಳು ಅನುಷ್ಠಾನಕ್ಕೆ ಬಂದ ಫಲವಾಗಿ ಕುಡಿಯುವ ನೀರಿನ ಸಮಸ್ಯೆ ತಿಳಿಯಾಯಿತು, ರಾಜ್ಯದ ೧೬೦ ಸಂಯುಕ್ತ ಕುಡಿಯುವ ನೀರಿನ ಯೋಜನೆಗಳಿದ್ದು, ೨೪೦೦ ಹಳ್ಳಿಗಳು ಒಳಪಟ್ಟಿವೆ. ಈಗ ಈ ಮೂರು ಯೋಜನೆಗಳಿಗೆ ೬೮ ಕೋಟಿ ಪುನಶ್ಚೇತನಕ್ಕೆ ಮಂಜೂರಾಗಿದೆ. ಅದರಲ್ಲಿ ೨೨೦ ಮೆ.ವ್ಯಾ ನಿರೆತ್ತುವ ಮೋಟರ್‌ಪಂಪ್, ಅಲ್ಲಲ್ಲಿ ೩೦ ಕಿ/ಮೀ ಪೈಪಲೈನ್ ಸೇರಿದಂತೆ ಸರಾಗವಾಗಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಎಲ್ಲ ಸೌಕರ್ಯಗಳನ್ನು ನೂತನ ತಂತ್ರಜ್ಞಾನದೊAದಿಗೆ ಮಾಡಲಾಗುವದು. ಬರಗಾಲದ ಬವಣೆ ನೀಗಿಸಿ ರೈತರ ನೆಮ್ಮದಿ ಬದುಕಿಗೆ ಶ್ರಮಿಸಿ ಯಶಸ್ವಿಯಾದ ತೃಪ್ತಿ ಎನಗಿದೆ,. ೮ ರಿಂದ ೧೦ ತಿಂಗಳಲ್ಲಿ ಗುಣಮಟ್ಟದ ಕಾಮಗಾರಿ ಮಾಡಿ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಸಿದರು,
ಅಥಣಿ ಗ್ರಾಮಿಣ ಮತ್ತು ನೈರ್ಮಲ್ಯ ಇಲಾಖೆ ಸ.ಕಾ.ನಿ. ಅಭಿಯಂತರ ರವೀಂದ್ರ ಮುರಗಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಕಮರಿ, ಐಗಳಿ, ಅಡಹಳ್ಳಿ, ಕೊಟ್ಟಲಗಿ, ತೆಲಸಂಗ, ಕೊಹಳ್ಳಿ, ಕನ್ನಾಳ, ಬನ್ನೂರ, ಬಾವನದಡ್ಡಿ, ಬಾಡಗಿ ಗ್ರಾಮಗಳಿಗೆ ಈ ಯೋಜನೆಯಿಂದ ಹೊಸ ತಂತ್ರಜ್ಞಾನ ಮೂಲಕ ಪ್ರತಿದಿನ ವ್ಯಕ್ತಿಗೆ ೫೫ ಲೀ ನೀರು ಪೂರೈಸಲು ಸಹಕಾರಿಯಾಗಲಿದೆ ಎಂದರು.

ಈ ವೇಳೆ ಶೇಖರ ನೇಮಗೌಡ, ಸಿದ್ದರಾಯ ಯಲಡಗಿ, ಶ್ಯಾಮ ಪೂಜಾರಿ, ಸುಶೀಲಕುಮಾರ ಪತ್ತಾರ, ಪ್ರಲ್ಹಾದ ಪಾಟೀಲ, ಗುರು ದಾಶ್ಯಾಳ, ನೂರಹಮ್ಮದ ಡೊಂಗರಗಾAವ, ಬೆಂಗಳೂರು ಮಾಲೂ ಕನ್ಸಟ್ರಕ್ಷನ್‌ನ ನವೀನ್ ನಾಗನೂರ. ಗ್ರಾಪಂ ಅಧ್ಯಕ್ಷರಾದ ಬಸವಂತ. ಶಕುಂತಲಾ ಪಾಟೀಲ್. ನ್ಯಾಯವಾದಿ ಸುಶೀಲಕುಮಾರ ಪತ್ತಾರ. ಗುಡ್ಡಾಪುರ, ನಾನಾಗೌಡ ಪಾಟೀಲ, ವೆಂಕಣ್ಣಾ ಅಸ್ಕಿ, ಸೇರಿದಂತೆ ಅನೇಕರು ಇದ್ದರು,
ಕೇದಾರಿ ಬಿರಾದಾರ ನಿರೂಪಿಸಿದರು, ರವಿ ಮುರಗಾಲಿ ಸ್ವಾಗತಿಸಿ ವಂದಿಸಿದರು,