
ಬಳ್ಳಾರಿ:ಮಾ,೧-ಇರಾನ್ ಇಸ್ರೇಲ್ ಯುದ್ದದಿದ್ದಾಗಿ ನಿನ್ನೆಯಿಂದ ದುಬೈನಿಂದ ಅಂತರರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡಲಾಗಿದೆ ಇದರಿಂದಾಗಿ. ನಗರದ ಶಾಸಕ ಭರತ್ ರೆಡ್ಡಿ ಸೇರಿದಂತೆ ಬಳ್ಳಾರಿ ಜಿಲ್ಲೆಯಿಂದ ಪ್ರವಾಸಕ್ಕೆ ತೆರಳಿದ್ದ ೩೫ ಕ್ಕೂ ಹೆಚ್ಚು ಜನರು ದುಬೈನಲ್ಲಿ ಸಧ್ಯ ಹಿಂತಿರುಗಿ ಬರಲು ವಿಮಾನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದುಬೈ ಪ್ರವಾಸಕ್ಕೆ ಶಾಸಕ ಭರತ್ ರೆಡ್ಡಿ ಕುಟುಂಬ ಸಮೇತ ತೆರಳಿದ್ದಾರಂತೆ. ಅವರು ದುಬೈನಲ್ಲಿ ಸುರಕ್ಷಿತವಾಗಿದ್ದಾರೆಂದು ತಿಳಿದು ಬಂದಿದೆ.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಯಾಳ್ಪಿ ಮೇಟಿ ಪಂಪನಗೌಡ, ಅವರ ಸಹೋದರ ಬಸನಗೌಡ, ನಿವೃತ್ತ ಪ್ರಾಂಶುಪಾಲ ಕೆ.ಎ. ನಾಗಭೂಷಣ ಸೇರಿದಂತೆ ೩೫ ಜನರು ಹಾಗು ಚಿತ್ರ ದುರ್ಗ ಜಿಲ್ಲೆಯ ೧೫ ಜನರ ತಂಡ ಬೆಂಗಳೂರಿನಿಂದ ಫೆಬ್ರವರಿ ೨೪ರಂದು ದುಬೈ ಪ್ರವಾಸಕ್ಕೆ ತೆರಳಿದ್ದರು.
ನಿನ್ನೆ ಪ್ರವಾಸ ಮುಗಿಸಿ ಹಿಂದಿರುಗಬೇಕಿತ್ತು. ರಾತ್ರಿ ೯ ಗಂಟೆಗೆ ವಿಮಾನವಿತ್ತು. ಇವರು ಏರ್ ಪೋರ್ಟ್ ಗೆ ಹೋದರೆ ಯುದ್ಧದ ಭೀತಿ ಹಿನ್ನಲೆಯಲ್ಲಿ ಅಂತರ ರಾಷ್ಟ್ರೀಯ ವಿಮಾನ ಹಾರಾಟ ಬಂದ್ ಮಾಡಲಾಗಿದ್ದರಿಂದ ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬಹುತೇಖ ಎಲ್ಲರೂ ವೃದ್ದರಾಗಿದ್ದಾರೆ. ವಿಮಾನ ರದ್ದಾಗಿರುವುದರಿಂದ ದುಬೈ ನ ಬುರ್ಜ್ ಖಲೀಫಾ ಕಟ್ಟಡದ ಪಕ್ಕದ ಲಾಡ್ಜ್ ನಲ್ಲಿ ಸದ್ಯ ತಂಗಿದ್ದಾರೆ.
ಸರ್ಕಾರದ ಪ್ರತಿನಿಧಿಗಳ ಸಂಪರ್ಕ ಮಾಡಿದ್ದಾರೆ. ವಾಪಸ್ ಭಾರತಕ್ಕೆ ಕರೆದುಕೊಂಡು ಬರುವ ಭರವಸೆ ನೀಡಿದ್ದಾರೆಂದು ಪಂಪನಗೌಡ ಅವರ ಪುತ್ರ ದಿವಾಕರಗೌಡ ಹೇಳಿದ್ದಾರೆ.






























