ಪುದೀನ ಮಟನ್

ಬೇಕಾಗುವ ಸಾಮಗ್ರಿಗಳು

*ಮಟನ್ ೧/೪ .

*ಪುದೀನ -೨ ಕಟ್ಟು

*ಕೊತ್ತಂಬರಿ ಸೊಪ್ಪು – ೧/೨ ಕಟ್ಟು

*ಹಸಿರು ಮೆಣಸಿನಕಾಯಿ -೫

*ತೆಂಗಿನಕಾಯಿ ತುರಿ ೧ ಕಪ್ –

*ಧನಿಯಾ ಪುಡಿ ೧ ಚಮಚ –

*ಗರಂ ಮಸಾಲ ೧ ಚಮಚ

*ಕಾಳು ಮೆಣಸಿನ ಪುಡಿ ೧ ಚಮಚ

*ಶುಂಠಿ ೧

*ಬೆಳ್ಳುಳ್ಳಿ ೨

*ಚಕ್ಕೆ -೬ ಪೀಸ್

*ಲವಂಗ ೬

*ಈರುಳ್ಳಿ ೩

*ಉಪ್ಪು ರುಚಿಗೆ ತಕ್ಕಷ್ಟು

*ಎಣ್ಣೆ ೫ ಚಮಚ

*ನೀರು ೨೦೦ ೨.

ಮಾಡುವ ವಿಧಾನ :

ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಪುದೀನ, ಕೊತ್ತಂಬರಿ ಸೊಪ್ಪು, ಚಕ್ಕೆ, ಲವಂಗ, ನೀರು, ತೆಂಗಿನಕಾಯಿ ತುರಿ ಹಾಕಿ ರುಬ್ಬಿಕೊಳ್ಳಿ. ನಂತರ ಕುಕ್ಕರ್‌ಗೆ ರುಬ್ಬಿದ ಮಸಾಲ, ಮಟನ್, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ೪ ವಿಷಲ್ ಕೂಗಿಸಿ. ಪಾತ್ರೆಗೆ ಎಣ್ಣೆ ಹಾಕಿ. ಕಾದ ನಂತರ ಈರುಳ್ಳಿ ಹಾಕಿ ಪ್ರೈ ಮಾಡಿ. ಇದಕ್ಕೆ ಪುದೀನ ಕೊತ್ತಂಬರಿ ಸೊಪ್ಪು, ಧನಿಯಾ ಪುಡಿ, ಗರಂ ಮಸಾಲ, ಬೇಯಿಸಿಕೊಂಡ ಮಟನ್, ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿದರೆ ಪುದೀನ ಮಟನ್ ಸವಿಯಲು ಸಿದ್ಧ.