
ಫೆ. ೯ ರಿಂದ ಜಾರಿ
ಬೆಂಗಳೂರು, ಫೆ. ೫- ಮೆಟ್ರೋ ರೈಲು ಪ್ರಯಾಣ ದರವನ್ನು ಬಿಎಂಆರ್‌ಸಿಎಲ್ ಶೇ. ೫ ರಷ್ಟು ಏರಿಕೆ ಮಾಡಿದ್ದು ಪರಿಷ್ಕೃತ ದರಗಳು ಫೆ. ೯ ರಿಂದಲೇ ಜಾರಿಗೆ ಬರಲಿದೆ.
ದರ ಪರಿಷ್ಕರಣೆ ಮಾಡಿ ಬಿಎಂಆರ್‌ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಮೆಟ್ರೋ ಪ್ರಯಾಣ ದರ ಕನಿಷ್ಠ ೧ ರೂ. ಯಿಂದ ೫ ರೂ. ವರೆಗೆ ಹೆಚ್ಚಳವಾಗಿದೆ. ಕನಿಷ್ಠ ೧೦ ರೂ. ಇರುವ ದರ ೧೧ ರೂ.ಗೆ ಏರಿಕೆಯಾಗಿದ್ದು, ಗರಿಷ್ಠ ೯೦ ರೂ. ಇರುವ ೯೫ ರೂ.ಗೆ ಏರಿಕೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಿಎಂಆರ್‌ಸಿಎಲ್ ಪ್ರತಿ ವರ್ಷ ಶೇ. ೫ ರಷ್ಟು ಪ್ರಯಾಣದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ. ೨೦೨೫ರಲ್ಲಿ ಶಿಫಾರಸ್ಸು ಮಾಡಿತ್ತು. ೨ ದಿನಗಳ ಹಿಂದೆ ನಡೆದ ಬಿಎಂಆರ್‌ಸಿಎಲ್ ಮಂಡಳಿಸಭೆಯಲ್ಲಿ ಚರ್ಚೆ ನಡೆಸಿ ಶೇ. ೫ ರಷ್ಟು ದರ ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಈಗ ಸರ್ಕಾರ ದರ ಏರಿಕೆಗೆ ಹಸಿರು ನಿಶಾನೆ ತೋರಿದ್ದು, ಫೆ. ೯ ರಿಂದ ಪರಿಷ್ಕೃತ ದರಗಳು ಜಾರಿ ಬರಲಿದೆ.


























