
ಕಲಬುರಗಿ,ಫೆ.8-ಸಾಮನ್ಯವಾಗಿ ಕಂಡು ಬರುವ ಮಾನಸಿಕ ಖಾಯಿಲೆಗಳ ಲಕ್ಷಣಗಳೇಂದರೆ ನಿದ್ರಾ ಹೀನತೆ, ಜೀವನದಲ್ಲಿ ಜಿಗುಪ್ಸೆ, ನಿರಾಸಕ್ತಿ, ಹಸಿವು ಕಡಿಮೆ, ಅತೀ ಬೇಜಾರು, ವಿನಾಕಾರಣ ಭಯ ಪಡುವುದು, ಲೈಂಗಿಕ ಸಮಸ್ಯೆ ಹಾಗೂ ಅತ್ಯಂತ ಗಂಭೀರ ಸ್ವರೂಪದ ಲಕ್ಷಣಗಳಾದ ಅತೀ ಸಂಶಯ , ಆತ್ಮ ಹತ್ಯೆ ಆಲೋಚನೆ, ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದು, ವಿಚಿತ್ರ ವರ್ತನೆ , ಬೇರೆಯವರಿಗೆ ಕಾಣಿಸದ,
ಕೇಳಿಸದ, ದೃಶ್ಯ ದ್ವನಿಗಳು ಕಾಣಿಸುವುದು, ಕೇಳಿಸುವುದು ಮುಂತಾದ ಲಕ್ಷಣಗಳನ್ನು ಮಾನಸಿಕ ವ್ಯಕ್ತಿಗಳಲ್ಲಿ ಕಾಣಬಹುದು. ಇದಕ್ಕೆ ಕಾರಣಗಳು ಖಾಯಿಲೆ ಅರಿವು ಇರದೇ ಇರುವುದು, ತಪ್ಪು ನಂಬಿಕೆ, ಸಾಮಾಜಿಕ
ಕಳಂಕ, ಚಿಕಿತ್ಸೆ ಕುರಿತು ತಪ್ಪು ಕಲ್ಪನೆಗಳಿಂದ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಆಪ್ತ ಸಮಾಲೋಚನೆ, ಮಾತ್ರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಜಿಮ್ಸ್ ಆಸ್ಪತ್ರೆಯ ಮಾನಸಿಕ ತಜ್ಞ ಡಾ.ಮಹ್ಮದ್ ಇರ್ಫಾನ್ ಹೇಳಿದರು.
ಶನಿವಾರ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ಸೇವೆನೆಯಿಂದಾಗುವ ದುಷ್ಪರಿಣಾಗಳು ಹಾಗೂ ಮಾನಸಿಕ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅತಿಥಿಗಳಾಗಿ ಆರೋಗ್ಯ ಇಲಾಖೆ ವತಿಯಿಂದ ಆಗಮಿಸಿದ ತಂಬಾಕು ಸಾಮಾಜಿಕ ಕಾರ್ಯಕರ್ತರಾದ ಕು. ಆರತಿ ಅವರು ಮಾತನಾಡುತ್ತಾ, ಗೋಡೆಯ ಮೇಲೆ ಸ್ಕ್ರೀನ್ ಮೂಲಕ ಚಿತ್ರಗಳನ್ನು ತೋರಿಸುವ ಮೂಲಕ ಜನರಲ್ಲಿ ತಂಬಾಕು ಸೇವೆನೆಯಿಂದ ನೀವು ಬೀಡಿ ಸಿಗರೇಟ್‍ನಿಂದ ಬಿಡುವ ಹೊಗೆ ನಿಮ್ಮ ಶರೀರದ ಒಳಗಡೆ ಅಲ್ಲದೇ ನಿಮ್ಮ ಪಕ್ಕದಲ್ಲಿರುವ ಇತರೇ ಜನರಿಗೆ ಗಾಳಿಯ ಮೂಲಕ ನೇರವಾಗಿ ತಂಬಾಕು ಸೇವೆನೆಯ ಹೊಗೆಯನ್ನು ಅವರು ಪಡೆದು ಅನಾರೋಗ್ಯಕ್ಕೆ ತುತ್ತಾಗಿ ಹಲವಾರು ರೋಗಗಳಿಗೆ ಕಾರಣಿಭೂತರಾಗುತ್ತೀರಿ (ಉದಾ: ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು, ತಂಬಾಕು ಸೇವನೆಯೇ ಪ್ರಮುಖ ಕಾರಣಾವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಪ್ರಭಾರ ಮುಖ್ಯ ಅಧೀಕ್ಷಕ ರಾಕೇಶ್ ಕಾಂಬಳೆ ಅವರು ಮಾತನಾಡುತ್ತಾ, ವಿವಿಧ ರೀತಿಯ ತಂಬಾಕು ಸೇವೆನೆ ಮಾಡುವುದರಿಂದ ಚಟಕ್ಕೆ ಬಿದ್ದು, ವ್ಯಸನಿಗಳಾಗಿ ದೈಹಿಕ ಮತ್ತು ಮಾನಸಿಕ ದುರ್ಬಲರಾಗಿ ಆಗುವುದರ ಜೊತೆಗೆ ಅರ್ಥಿಕವಾಗಿ ನಷ್ಟ ಹೊಂದಿ ಕುಟುಂಬ ನಿರ್ವಹಣೆ ಮಾಡುವುದು ಕೂಡ ದುಸ್ತರವಾಗುತ್ತದೆ ಮತ್ತು ತಂಬಾಕು ಸೇವನೆಗಳನ್ನು ನೀವು ದೂರ ಮಾಡಲು ಕಾರಾಗೃಹದಲ್ಲಿರುವ ವೃತ್ತಿಪರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ವ್ಯಸನಿಗಳಿಂದ ಮುಕ್ತಿಪಡೆದು ಒಳ್ಳೆಯ ಮತ್ತು ಸದೃಡ ಆರೋಗ್ಯವನ್ನು ಪಡೆದು ಒಳ್ಳೆಯ ಜೀವನವನ್ನು ನಡೆಸಲು ಸಲಹೆ ನೀಡಿದರು ಹಾಗೂ ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಕಾರಾಗೃಹದ ಬಂದಿಗಳಿಗೆ ನೀಡಲಾಗುತ್ತಿದೆ. ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ
ಆಗಮಿಸಿದ ಆರೋಗ್ಯ ಮತ್ತು ಮಾನಸಿಕ ಇಲಾಖೆಯ ವೈದ್ಯರು ಹಾಗೂ ವೈದ್ಯಕೀಯ ತಂಡದವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರಾಗೃಹದ ಸಹಾಯಕ ಅಧೀಕ್ಷಕ ಬಿ. ಸುರೇಶ ಅವರು ಮಾತನಾಡುತ್ತ, ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಹೊಂದಬೇಕಾದರೆ, ಮಾನಸಿಕವಾಗಿ ಸದೃಡರಾಗಬೇಕು ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ ತಂಬಾಕು ಸೇವನೆಯಿಂದ ದೂರವಿರಬೇಕು. ಸಹವಾಸದಿಂದ ಸನ್ಯಾಸಿ ಕೆಟ್ಟ, ಹಾಗಾಗಿ ಉತ್ತಮರ ಸಂಗ ಮಾಡಬೇಕು ಅಂದರೆ ಸಜ್ಜನರ ಸಂಗ ಹೆಜ್ಜೆನು ಸವಿದಂತೆ,
ಒಳ್ಳೆಯವರ ಆಚಾರ ವಿಚಾರಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಮಾನಸಿಕ ಒಳಗೊಂಡಂತೆ ಉತ್ತಮ ಆರೋಗ್ಯವನ್ನು ಪಡೆಯಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಂiÀiಟಗಲ್, ಡಾ.ಆನಂದ ಅಡಕಿ, ಸುನಂದಾ ವಿ, ಸಾಗರ್ ಪಾಟೀಲ, ಶಾಮ ಬಿದ್ರಿ, ಪುಂಡಲೀಕ ಟಿ.ಕೆ., ಶ್ರೀಮಂತಗೌಡ ಪಾಟೀಲ್ ಜೈಲರ್ ಹಾಗೂ ಆರೋಗ್ಯ ಇಲಾಖೆಯ ನಾಗರಾಜ ಬಿರಾದಾರ ಸಾಮಾಜಿಕ ಕಾರ್ಯಕರ್ತರು ಮತ್ತು ಮಹಾದೇವಿ ಕೌನ್ಸಲರ್ ಭಾಗವಹಿಸಿದರು.
ಸ್ವಾಗತ ಮತ್ತು ನಿರೂಪಣೆಯನ್ನು ಕಾರಾಗೃಹದ ಶಿಕ್ಷಕ ನಾಗರಾಜ ಮುಲಗೆ ನೇರವೆರಿಸಿದರು. ವಂದನಾರ್ಪಣೆಯನ್ನು ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ನಡೆಸಿಕೊಟ್ಟರು.























