
ಕಲಬುರಗಿ,ಫೆ.16-ಮಹಾ ಶಿವರಾತ್ರಿ ನಿಮಿತ್ಯ ಭಾನುವಾರ ನಗರದ ಆಳಂದ ರಸ್ತೆಯ ಸ್ವಾಮಿ ವಿವೇಕಾನಂದ ನಗರದ ಓಂಕಾರೇಶ್ವರ ಜಾತ್ರಾ ಮಹೋತ್ಸವ, ಶಿವನಾಮ ಸ್ಮರಣೆ ಮತ್ತು ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಅಣ್ಣಾರಾಯ ಮಂಗಾಣೆ ಅವರು, ಪುರಾಣ ಪ್ರವಚನ ಕೀರ್ತನೆ ಭಜನೆಗಳಿಂದ ಮನುಷ್ಯನ ಜೀವನದಲ್ಲಿ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು. ಭಜನಾ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಓಂಕಾರೇಶ್ವರ ಭಜನಾ ಸಂಘದ ಸದಸ್ಯರು ಹಾಗೂ ಜೈ ಹನುಮಾನ್ ಭಜನಾ ಸಂಘದ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮಲ್ಲಿನಾಥ ಧಂಗಾಪುರ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಕಾಂತ್ ಪಾಟೀಲ್, ದೇವಸ್ಥಾನದ ಅರ್ಚಕರದ ಶಿವಾನಂದಯ್ಯ ಹಿರೇಮಠ ಗೊಬ್ಬುರ್, ದೇವಿಂದ್ರಪ್ಪ ಗಣಮುಖಿ, ನಾಗೇಶ್ ಮೂಲಗೆ, ದಿಗಂಬರ್ ಮೇಳಕುಂದ, ಶರಣಯ್ಯಸ್ವಾಮಿ ನೀರುಗುಡಿ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
























