Home ಜಿಲ್ಲೆ ಶಿವಕುಮಾರ ಶ್ರೀಗಳ ಮೌಲ್ಯಗಳು ಸದಾ ನಮಗೆ ಪ್ರೇರಣೆಯಾಗಲಿ

ಶಿವಕುಮಾರ ಶ್ರೀಗಳ ಮೌಲ್ಯಗಳು ಸದಾ ನಮಗೆ ಪ್ರೇರಣೆಯಾಗಲಿ

ಕೆಂಗೇರಿ,ಏ.೩:ಎಲ್ಲ ಧರ್ಮ.ಜಾತಿಯ ಮಕ್ಕಳಿಗೆ ಅನ್ನ.ಸಂಸ್ಕಾರ. ವಿದ್ಯೆಯನ್ನು ನೀಡಿದ ಸಿದ್ದಗಂಗಾ ಪೀಠಾಧ್ಯಕ್ಷರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ ಸೇವಾ ಮನೋಭಾವ, ಸರಳತೆ, ಮಾನವೀಯ ಮೌಲ್ಯಗಳು ಸದಾ ನಮಗೆ ಪ್ರೇರಣೆಯಾಗಲಿ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಅವರು ಹೇಳಿದರು.


ಬಿಇಎಂಎಲ್ ಬಡಾವಣೆಯ ಪಾಪಯ್ಯ ಕಲ್ಯಾಣ ಮಂಟಪದಲ್ಲಿ ಸರ್ವ ಜನಾಂಗದವರು ಸೇರಿ ಹಮ್ಮಿಕೊಂಡಿದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ೧೧೯ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಸಮಾಜದ ಸೇವೆಗಾಗಿ, ವಿಶ್ವಕ್ಕೆ ಶಾಂತಿ ತಿಳಿಸುವ ಮೂಲಕ ಸಹಬಾಳ್ವೆ, ನೀಡಿದ ಶಿವಕುಮಾರ ಸ್ವಾಮೀಜಿ ಸೇರಿದಂತೆ ಮಹಾನ್ ಪುರುಷರ ಜಯಂತಿ, ಆರಾಧನೆ,ಉತ್ಸವಗಳನ್ನು ಒಂದು ಜಾತಿ,ವರ್ಗ,ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಜೊತೆಗೂಡಿ ಆಚರಿಸಬೇಕು.ಅಂತಹ ಕೆಲಸವನ್ನು ಆರ್.ಆರ್.ನಗರದ ನಾಗರೀಕರು ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಬಿಬಿಎಂಪಿ ಮಾಜಿ ಸದಸ್ಯ ಜಿ.ಎಚ್.ರಾಮಚಂದ್ರ ನಡೆದಾಡುವ ದೇವರೆಂದು ಎಲ್ಲರೂ ಪೂಜಿಸುತ್ತಿದ್ದ ಶ್ರೀಗಳು ನಮಗೆ ದಾರಿದೀಪವಾಗಿದ್ದು, ಎಲ್ಲಾ ಜನಾಂಗದವರು ಸೇರಿ ಪುಣ್ಯ ಪುರುಷರ ಸೇವೆಯನ್ನು ಒಗ್ಗೂಡಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದರು.ಡಿ.ಶ್ಯಾಮ್, ನಾಗರಾಜ್,ಗಟ್ಟಿಗೆರೆ ಪುಟ್ಟರಾಜು, ಕರ್ನಾಟಕ ಸಂಸ್ಕೃತಿ ವಿದ್ಯಾಪೀಠದ ಸಂಸ್ಥಾಪಕ ಬಸವಾನಂದ ಪ್ರಕಾಶ್ ಬಿಜೆಪಿಯ ವಿ.ಸಿ.ಚಂದ್ರು, ಕಾಂಗ್ರೆಸ್ ಮುಖಂಡ ರಾಜೇಶ್ ಗೂಳಿಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಚ್.ಚಂದ್ರಶೇಖರ್ ಸೇರಿದಂತೆ ಶರಣರುಭಾಗವಹಿಸಿದರು.ಶಿವಾರ ಉಮೇಶ್ ಸಂಗಡಿಗರಿಂದ ಭಕ್ತಿ ಸುಧೆ ಕಾರ್ಯಕ್ರಮ ಮತ್ತು ಅನ್ನದಾಸೋಹ ಕಾರ್ಯಕ್ರಮ ನಡೆಯಿತು.