
ವಾಷಿಂಗ್ಟನ್, ಏ.೨-ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಯುದ್ಧದಲ್ಲಿ ಅಮೆರಿಕ ಎಲ್ಲಾ ಗುರಿಗಳನ್ನು ಪೂರ್ಣಗೊಳಿಸುವ ಹಂತಕ್ಕೆ ತಲುಪಿದೆ. ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಇರಾನ್ ವಿರುದ್ಧ ಮತ್ತಷ್ಟು ಮಿಲಿಟರಿ ಆಕ್ರಮಣ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ಇರಾನ್‌ನ ಆಕ್ರಮಣಕಾರಿ ಕ್ಷಿಪಣಿ ಸಾಮರ್ಥ್ಯ ನಾಶಪಡಿಸುವುದು, ಕ್ಷಿಪಣಿ ಉತ್ಪಾದನಾ ವ್ಯವಸ್ಥೆ ಧ್ವಂಸ ಮಾಡುವುದು, ನೌಕಾಪಡೆ ಮತ್ತು ವಿಶಾಲ ಭದ್ರತಾ ಮೂಲಸೌಕರ್ಯ ತಟಸ್ಥಗೊಳಿಸುವುದು ಮತ್ತು ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯದಂತೆ ನೋಡಿಕೊಳ್ಳುವುದು ಅಮೆರಿಕದ ಮುಂದಿರುವ ನಾಲ್ಕು ಗುರಿ. ಅವುಗಳನ್ನು ಈಡೇರಿಸುವವರೆಗೂ ನಿರ್ಗಮಿಸುವುದಿಲ್ಲ ಎಂದಿದ್ದಾರೆ.
ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು “ಆಪರೇಷನ್ ಎಪಿಕ್ ಫ್ಯೂರಿಯ ಆರಂಭದಿಂದಲೂ, ಉದ್ದೇಶಗಳು ಸಂಪೂರ್ಣವಾಗಿ ಸಾಧಿಸುವವರೆಗೆ ಮುಂದುವರಿಯುತ್ತೇವೆ ಈವರೆಗೆ ನಿರೀಕ್ಷಿಸಿದ ಪ್ರಗತಿ ಸಾಧಿಸಿದ್ದೇವೆ. ಅಮೆರಿಕದ ಎಲ್ಲಾ ಮಿಲಿಟರಿ ಉದ್ದೇಶಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ ಎಂದಿದ್ದಾರೆ.
ಇರಾನ್ ಜೊತೆ ಮಾತುಕತೆಗಳು ನಡೆಯುತ್ತಿರುವಾಗಲೇ, ಅಮೆರಿಕ, ಇರಾನ್‌ನಲ್ಲಿ ತನ್ನ ಮಿಲಿಟರಿ ಉದ್ದೇಶ ಸಾಧಿಸಲು ಬಹಳ ಹತ್ತಿರದಲ್ಲಿದೆ. ಅಮೆರಿಕ ನಡೆಸಲಿರುವ ದಾಳಿಗಳು ಇರಾನ್ ಅನ್ನು ಶಿಲಾಯುಗಕ್ಕೆ ಕೊಂಡೊಯ್ಯಲಿದೆ. ಸಿಬ್ಬಂದಿ ಹೆಸರಿಸದ ಇರಾನಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಇರಾನ್ ವಿರುದ್ದ ಸಂಘರ್ಷ ಎರಡು- ಮೂರು ವಾಗಳಲ್ಲಿ ಮುಗಿಯಲಿದೆ ಎಂದು ಸುಳಿವು ನೀಡಿದ್ದ ಬೆನ್ನಲ್ಲೇ ಇದೀಗ ಇರಾನ್ ಮೇಲ್ ಮತ್ತೆ ದಾಳಿ ಮಾಡುವುದಾಗಿ ಬೆದರಿಕ ಹಾಕಿದ್ದಾರೆ.
ತೈಲ ಬೆಲೆಗಳ ಏರಿಕೆಗೆ “ವಾಣಿಜ್ಯ ತೈಲ ಟ್ಯಾಂಕರ್‍ಗಳು ಮತ್ತು ಸಂಘರ್ಷದೊಂದಿಗೆ ಯಾವುದೇ ಸಂಬಂಧವಿಲ್ಲದ ನೆರೆಯ ರಾಷ್ಟ್ರಗಳ ವಿರುದ್ಧ ಇರಾನಿನ ಆಡಳಿತ ವಿಕೃತ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ” ಎಂದು ಹೇಳಿದ್ದಾರೆ.
ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ಇರಾನ್ ಮೇಲೆ ಅಮೇರಿಕಾ “ಅತ್ಯಂತ ಕಠಿಣವಾಗಿ” ದಾಳಿ ನಡೆಸಲಾಗುವುದು ಆದರೆ ಯುದ್ಧವು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಇರಾನ್ ಜೊತೆಗಿನ ಚರ್ಚೆಗಳು “ನಡೆಯುತ್ತಿವೆ” ರಾಜತಾಂತ್ರಿಕ ವಿಷಯ್ ಮೇಲೆ ಮುಂದಿನ ನಿರ್ಧಾರ ಅವಲಂಬಿಸಿದೆ ಎಂದಿದ್ದಾರೆ.
ಅಮೆರಿಕದಲ್ಲಿ ತೈಲ ಬೆಲೆಗಳು ಏರಿಕೆಯಾಗಿ, ಬ್ರೆಂಟ್ ದರ ಶೇಕಡಾ ೫ ರಷ್ಟು ಹೆಚ್ಚಳವಾದ ಬೆನ್ನಲ್ಲೇ, ಮುಂದಿನ ವಾರಗಳಲ್ಲಿ ಇರಾನ್ ಮೇಲೆ ’ಅತ್ಯಂತ ಕಠಿಣ’ವಾಗಿ ದಾಳಿ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ,
ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲದ ಬೆಲೆಗಳು ಬ್ಯಾರೆಲ್‌ಗೆ ಶೇಕಡಾ ೪.೧ ರಷ್ಟು ಏರಿಕೆಯಾಗಿ ೧೦೪.೨೧ ಡಾಲರ್ ತಲುಪಿದೆ. ಅಂತರರಾಷ್ಟ್ರೀಯ ಮಾನದಂಡ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಶೇಕಡಾ ೫ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ ೧೦೬.೪೨ಡಾಲರ್‌ಗೆ ತಲುಪಿದೆ.
ಫಿಡೆಲಿಟಿ ಇಂಟರ್ ನ್ಯಾಷನಲ್ ಪೊರ್ಟ್‌ಫೊಲಿಯೋ ಮ್ಯಾನೇಜರ್ ಜಾರ್ಜ್ ಎಫ್‌ಸ್ಟಾಥೋಪೌಲೋಸ್, ಮಾರುಕಟ್ಟೆಗಳು “ಬೈನರಿ ಫಲಿತಾಂಶ”ಕ್ಕೆ ಸಿದ್ಧವಾಗಿವೆ, ಸಂಘರ್ಷದ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅಮೆರಿಕದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ
ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ, ವಿಶ್ವದ ತೈಲ ಮತ್ತು ಅನಿಲದ ಐದನೇ ಒಂದು ಭಾಗದಷ್ಟು ಹರಿವನ್ನು ಕಾಣುತ್ತಿತ್ತು, ಫೆಬ್ರವರಿ ೨೮ ರಂದು ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ ಪರಿಣಾಮಕಾರಿಯಾಗಿ ಸ್ಥಗಿತಗೊಂಡಿದೆ,ವಿಶ್ವದ ಅತ್ಯಂತ ವಿನಾಶಕಾರಿ ಇಂಧನ ಬಿಕ್ಕಟ್ಟಿನಲ್ಲಿ ಇಂಧನ ಬೆಲೆಗಳನ್ನು ಗಗನಕ್ಕೇರಿಸಿದೆ.
ಮಿತ್ರರಾಷ್ಟ್ರಗಳಿಗೆ ತೊಂದರೆಯಾಗಲು ಬಿಡಲ್ಲ
ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳು ಸೇರಿದಂತೆ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿತ್ರರಾಷ್ಟ್ರಗಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ ಟ್ರಂಪ್ ಗುಡುಗಿದ್ದಾರೆ
ಇರಾನ್ ಅಥವಾ ಇತರ ದೇಶಗಳಿಂದ ಬರುವ ಯಾವುದೇ ಬೆದರಿಕೆಯಿಂದ ಮಿತ್ರ ರಾಷ್ಟ್ರಗಳನ್ನು ರಕ್ಷಿಸುವುದು ಅಮೇರಿಕಾದ ಉದ್ದೇಶವಾಗಿದೆ. “ಮಧ್ಯಪ್ರಾಚ್ಯದಲ್ಲಿರುವ ಮಿತ್ರರಾಷ್ಟ್ರಗಳಾದ ಇಸ್ರೇಲ್, ಕತಾರ್, ಕುವೈತ್, ಯುಎಇಗಳಿಗೆ ಹಿತ ಕಾಪಾಡುವುದಾಗಿ ತಿಳಿಸಿದ್ದಾರೆ.
.ಇರಾನ್‌ನಲ್ಲಿ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಹಿರಿಯ ವ್ಯಕ್ತಿಗಳು ಸಾವನ್ನಪ್ಪಿದ ನಂತರ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಡೊನಾಲ್ಡ್ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ

























