ಆರ್ ಜೆ ಕಾಲೇಜನಲ್ಲಿ ಸಾಮೂಹಿಕ ರಕ್ಷಾಬಂಧನ

ಕಲಬುರಗಿ:ಅ.14: ನಗರದ ಸರದಾರ ವಲ್ಲಭಭಾಯಿ ಪಟೇಲ್ ಎಜ್ಯುಕೇಷನ್ ಟ್ರಸ್ಟ್ ಸಂಚಾಲಿತ ರಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಸದಸ್ಯರೂ ಆದ ಪ್ರಾಚಾರ್ಯ ಡಾ. ಭುರ್ಲಿ ಪ್ರಹ್ಲಾದ ಅವರು ವಹಿಸಿ ವ್ಯಕ್ತಿತ್ವ ವಿಕಾಸನ, ದೇಶದ ರಕ್ಷಣೆ, ದೇಶಕ್ಕಾಗಿ ಯೋದರು ರಕ್ಷಣೆ ಹೇಗೆ ಮಾಡುತ್ತಾರೆಯೋ ನಾವು ಕೂಡ ಸಮಾಜ, ದೇಶ, ಸುಭದ್ರವಾಗಿ ಕಟ್ಟುವ ಸಂಕಲ್ಪ ತೊಟ್ಟಾಗ ಮಾತ್ರ ಪ್ರಭುದ್ದ ಭಾರತ ಕಾಣುತ್ತೇವೆ ಎಂದು ಹೇಳಿದರು.

ಮುಖ್ಯಅಥಿತಿಗಳಾಗಿ ವಕ್ತಾರ ಅರವಿಂದ ಹುಣಸಿಗಿ ಅವರು ದೇಶ ರಕ್ಷಣೆ, ರೈತ ರಕ್ಷಣೆ, ಶಿಕ್ಷಕ ರಕ್ಷಣೆ ಮತ್ತು ಶಿಶು ರಕ್ಷಣೆ ಆಗಬೇಕಾದರೆ ರಾಷ್ಟ್ರದ ಪ್ರಜೆಗಳಾದ ನಾವು ವ್ಯಾಪಕವಾದ ರಕ್ಷಾ ಗುಣವನ್ನು ಪಡೆಯಬೇಕು. ಯೋಚನಾ ಶಕ್ತಿ, ಕೆಲಸ ಮಾಡುವ ಪ್ರವೃತಿ, ದೇಶ, ಪರಿಸರ, ಕುಟುಂಬ, ಶಿಷ್ಠಾಚಾರ ಮತ್ತು ಸಾಮರಸ್ಯದ ಗುಣ ಬೆಳೆಸಿಕೊಂಡಾಗ ಭಾರತದ ಭಾವೀ ಕನಸುಗಳು ಆಗುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮ ನೀರೂಪಣೆ ಧೀನಾನಾಥ, ಅಮೃತ ವಚನ ಪ್ರಜ್ವಲ್ ಧ್ಯಾಮ, ಪರಿಚಯ ಭಾಷಣ ಈಶಾನ್, ವಯ್ಯಕ್ತಿಯ ಗೀತೆ ಮಾನಸಾ ದೇಶಪಾಂಡೆ, ಸ್ವಾಗತ ಭಾಷಣ ವೇಣುಗೋಪಾಲ, ಪಂಚಾಂಗ ಪಠಣ ಶ್ರೇಯಸ್ ನೆರವೇಸಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂಧಿಬಳಗ ಉಪಸ್ಥಿತರಿದ್ದರು.