Home ಕ್ರೈಂ ಸುದ್ದಿಗಳು ಆನೆ ಕೆರೆಯಲ್ಲಿ ವ್ಯಕ್ತಿ ಮುಳುಗಿ ಸಾವು; ಶೋಧ ಕಾರ್ಯಾಚರಣೆಯ ಬಳಿಕ ಶವ ಪತ್ತೆ

ಆನೆ ಕೆರೆಯಲ್ಲಿ ವ್ಯಕ್ತಿ ಮುಳುಗಿ ಸಾವು; ಶೋಧ ಕಾರ್ಯಾಚರಣೆಯ ಬಳಿಕ ಶವ ಪತ್ತೆ

ಜಮಖಂಡಿ:ಏ.5: ನಗರದಲ್ಲಿರುವ ಅರಣ್ಯ ಇಲಾಖೆ ಸಮೀಪದ ಆನೆ ಕೆರೆಯಲ್ಲಿ ವ್ಯಕ್ತಿಯೋರ್ವನು ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ವ್ಯಕ್ತಿಯನ್ನು ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಸುಮಾರು 30 ವರ್ಷದ ಚನ್ನಪ್ಪ ಕಲ್ಲಪ್ಪ ಗಲಗಲಿ ಎಂದು ಗುರುತಿಸಲಾಗಿದೆ.

ಕೆರೆಯ ಬಳಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಈ ಘಟನೆ ಗಮನಿಸಿ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಜಮಖಂಡಿ ಶಹರ ಪೆÇಲೀಸ್ ಠಾಣೆಯ ಪಿಎ??? ಅನೀಲ ಕುಂಬಾರ ಹಾಗೂ ಸಿಬ್ಬಂದಿಗಳು, ಐಜೀ ದಾಶಾಳ ಪೆÇಲೀಸ್ ತಂಡ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದರು.
ಸುಮಾರು ಒಂದು ಗಂಟೆಯ ಶೋಧ ಕಾರ್ಯಾಚರಣೆಯ ನಂತರ ಮೃತದೇಹ ಪತ್ತೆಯಾಗಿದ್ದು, ಶವಪರೀಕ್ಷೆಗಾಗಿ ಜಮಖಂಡಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.